ಕಲಬುರಗಿ; ಅಂತರಾಷ್ಟೀಯ ಚೆಸ್ ದಿನಾಚರಣೆ ಹಾಗೂ ಫಿಡೆ ಶತಮಾನೋತ್ಸವ ಅಂಗವಾಗಿ ರ‍್ನಾಟಕ ವಿಧಾನ ಮಂಡಲ ಹಾಗೂ ಭಾರತ ಚೆಸ್ ಫೆಡರೇಷನ್ ಸಹಯೋಗದಲ್ಲಿ ಕಳೆದ ಶನಿವಾರ ಸಚಿವರು, ಶಾಸಕರು, ಉಭಯ ಸದನಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಾಗಿ ನಡೆದ ವಿಧಾನ ಸೌಧ ಓಪನ್ ರ‍್ಯಾಪಿಡ್ ಚೆಸ್ ಟರ‍್ನಾಮೆಂಟ್- ೨೦೨೪ ಚದುರಂಗ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಕೆಕೆಆರ್‌ಡಿಬಿ ಅಧ್ಯಕ್ಷರು, ಜೇರ‍್ಗಿ ಶಾಸಕರೂ ಆಗಿರುವ ಡಾ. ಅಜಯ್ ರ‍್ಮಸಿಂಗ್ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಭಾಧ್ಯಕ್ಷ ಯೂಟಿ ಖಾದರ್ ಟ್ರೊಫಿ ನೀಡಿ ಶುಭ ಕೋರಿದರು.
ಇಧರೊಂದಿಗೆ ಇದೇ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ಈ ಚೆಸ್ ಹಬ್ಬ ನಡೆದಿತ್ತು. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆದಂತಹ ಚದುರಂಗದ ಆಟದ ಸ್ರ‍್ಧೆಯಲ್ಲಿ ಬೆಳಗಾವಿಯ ಖಾನಾಪುರ ಶಾಸಕರಾದ ವಿಠ್ಠಲ ಸೋಮಣ್ಣ ಹಲಗೇಕರ್ ಇವರನ್ನು ಪರಾಭವಗೊಳಿಸಿ ಡಾ. ಅಜಯ್ ಸಿಂಗ್ ಚಾಂಪಿನಯನ್ ಪಟ್ಟ ತಮ್ಮದಾಗಿಸಿಕೊಂಡಿದ್ದರು.
ಸ್ರ‍್ಧೆಯಲ್ಲಿ ಶಾಸಕ ಡಾ. ಅಜಯ್ ಸಿಂಗ್ ಅತ್ಯುತ್ತಮ ಹಾಗೂ ಚಾಕಚಕ್ಯತೆಯೊಂದಿಗೆ ಚುದುರಂಗದ ಆಟದಲ್ಲಿ ತಮ್ಮ ನಡೆ, ನರ‍್ಧಾರಗಳನ್ನು ತೋರುತ್ತ ಎದುರಾಳಿಗಳನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾಗಿರೋದನ್ನ ಸಿಎಂ ಸಿದ್ದರಾಮಯ್ಯ, ಸಬಾಧ್ಯಕ್ಷ ಯೂಟಿ ಖಾದರ್ ಮೆಚ್ಚಿತೊಂಡು ಶುಭ ಹಾರೈಸಿದ್ದಾರೆ.