ಬಿಸಿ ಬಿಸಿ ಸುದ್ದಿ

ಸಾಧಿಸುವ ಛಲ, ಕಾಯಕ ನಿಷ್ಠೆ, ಬದುಕಿನ ಸರಳತೆ ಇವು ನಾವೆಲ್ಲರೂ ಹಳಕಟ್ಟಿ ಜೀವನದಿಂದ ಕಲಿಯಬೇಕಾದ ಪಾಠ

ಕಲಬುರಗಿ; ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ವಚನ ಪಿತಾಮಹರು, ಅವರು ಕಡುಬಡವರಾಗಿದ್ದರೂ ಸಹ ಶರಣರ ವಚನಗಳ ಶೋಧನೆಯಲ್ಲಿ ಸಿರಿವಂತರಾಗಿದ್ದರು, ಅದಕ್ಕೇ ಅವರ ಶೋಧನೆ, ಸಂಪಾದನೆಯಲ್ಲಿ ಶರಣರು ಕಟ್ಟಿಕೊಟ್ಟ ಬದುಕಿನ ಸಾರವಾಗಿರುವ ವಚನಗಳು ಇಂದು ನಮ್ಮ ಕೈ ಸೇರಿವೆ, ಇಲ್ಲದೆ ಹೋದರೆ ವಚನಗಳ ಬಗ್ಗೆ ಗೊತ್ತೇ ಆಗುತ್ತಿರಲಿಲ್ಲ ಎಂದು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಹೇಳಿದರು.

ಕಸಾಪ ಕಲಬುರಗಿ ತಾಲೂಕು ಘಟಕದ ಬೆಳಕು ಸಪ್ತಾಹದ ಚಿಂತನೆಯ ಸರಣಿಯಲ್ಲಿ ವಚನ ಪಿತಾಮಹ ಹಳಕಟ್ಟಿವರ ಕುರಿತಾಗಿ ಇಲ್ಲಿನ ರಿಂಗ್‌ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಚನ್ನಬಸವೇಶ್ವರ ಪ್ರೌಢಾಲೆಯಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ತಮ್ಮ ಉಪನ್ಯಾಸದಲ್ಲಿ ಜಯಶ್ರೀಯವರು ಹಳಕಟ್ಟಿಯವರ ವಚನಗಳ ಸಂಶೋಧನೆ, ಪರಿಷ್ಕರಣೆ, ಮುದ್ರಣದ ಹಂತಗಳ ಪರಿಯನ್ನು ವಿವರಿಸುತ್ತ , ಬಡತನ, ಕಷ್ಟ ಸಂಕಷ್ಟಗಳನ್ನೆಲ್ಲ ಎದುರಿಸಿದ ಅವರ ನಿಲುವು ವಿವರಿಸುತ್ತ ಮಕ್ಕಳ ಮನ ಗೆದ್ದರು.

ಹಳಕಟ್ಟಿಯವರು ವಚನಗಳ ಮುದ್ರಣಕ್ಕೆ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಶುರು ಮಾಡಿದ್ದ ಪ್ರಸಂಗ, ಹಳಕಟ್ಟಿವರ ವಿದೇಶದಲ್ಲಿದ್ದ ಪುತ್ರನ ಅಕಾಲಿಕ ನಿಧನ ವರ‍್ತೆ, ಅದರಿಂದ ನೊಂದರೂ ವಚನ ಸಂಗ್ರಹ, ಸಂಶೋಧನೆಯ ಕಾಯಕ ಬಿಡದ ಹಳಕಟ್ಟಿಯವರ ಛಲವನ್ನು ವಿವರಿಸುತ್ತ ಇಂದಿನ ಮಕ್ಕಳು ಕಾಯಕ ಜೀವನ, ಹೊಸತನ್ನು ಹುಡುಕುವ ಜಾಣತನ, ಸಮಾಜಕ್ಕೆ ಉತ್ತಮವಾದುದನ್ನು ಕೊಡುವ ತವಕಗಳನ್ನು ಹಳಕಟ್ಟಿಯವರ ಬದುಕಿನಿಂದ ಕಲಿಯಬೇಕು ಎಂದರು.

೧೨ ನೇ ಶತಮಾನದ ಶರಣರ ವಚನ ಚಳುವಳಿ ಮುಂದಿನ ೩೦೦ ರ‍್ಷ ಮೌನವಗಿತ್ತು. ಹಳಕಟ್ಟಿಯವರು ವಿಜಯಪುರ ಭಾಗದಲ್ಲಿ ಗೋಡೆ, ಮಾಡುಗಳಿಗೆ ಪೂಜಿಸುವ ಸಂಪ್ರದಾಯದ ಬೆನ್ನತ್ತಿ ಅಲ್ಲೇನಿದೆ ಪೂಜಿಸಲು ಎಂದು ಶೋಧಿಸಿದ್ದರ ಫಲವೇ ಇಂದು ವಚನ ಭಂಡಾರ ನಮಗೆಲ್ಲರಿಗೂ ದೊರಕಿತು. ವಚನಗಳನ್ನು ಕಂಠಪಾಠ ಮಾಡುವ ಮೂಲಕ ಹಳಕಟ್ಟಿಯವರಿಗೆ ಗೌರವಿಸುವಂತೆ ಮಕ್ಕಳಿಗೆ ಕರೆ ನೀಡಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago