ಬೆಂಗಳೂರು: ಚಾರ್ಟೆಡ್ ಅಕೌಂಟೆಂಟ್(CA) ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸಾಮಾನ್ಯ ಕುಟುಂಬದ “ಸಾಗರ್ ಜಿ.ದಿವಾಕರ್” ರವರನ್ನು ಅವರ ನಿವಾಸದಲ್ಲಿ ಗಂಧದನಾಡು ಜನಪರ ವೇದಿಕೆ-ಗಜವೇ ಪದಾಧಿಕಾರಿಗಳು ಸಿಹಿ ತಿನ್ನಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ, ರಾಜ್ಯ ಖಜಾಂಚಿ ಬಂಡಾಪುರ ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ದೇವರಾಜ್ ನಾಯ್ಕ್, ಸಹ-ಕಾರ್ಯದರ್ಶಿ ಜಗದೀಶ್ ಅರಸು, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ವಾಭಿಮಾನಿ ಸತೀಶ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸುನೀಲ್ ಕುಮಾರ್, ಗಜವೇ ಮುಖಂಡರಾದ ಕೌಶಿಕ್ ರೆಡ್ಡಿ, ಅರ್ಜುನ್, ಕುಮಾರ್, ಜೈಪಾಲ್ ಸೇರಿದಂತೆ ಸಾಗರ್ ರವರ ಕುಟುಂಬದವರು ಸಹ ಹಾಜರಿದ್ದರು.