ಸುರಪುರ: ಸ್ಪರ್ಧೆಗಳಂತೆ ಸತ್ಕಾರ್ಯಗಳನ್ನು ಕೈಗೊಳ್ಳಲು ಪರಸ್ಪರ ಮುನ್ನುಗ್ಗಲು ಪೈಪೊಟಿ ನಡೆಸಬೇಕು ಎಂದು ಪ್ರವಾದಿ ಮೊಹ್ಮದ ಪೈಗಂಬರ (ಸಅ) ಅವರು ಉಪದೇಶಿಸಿದ್ದಾರೆ ಈ ಮೂಲಕ ಪುಣ್ಯಪ್ರಾಪ್ತಿಯಿಂದ ಸ್ವರ್ಗ ಪ್ರವೇಶಿಸಲು ಸಾಧ್ಯವಾಗಲಿದೆ ಎಂದು ಅನ್ಸಾರುಲ್ಲಾಹ ವಿಭಾಗದ ದಕ್ಷಿಣ ಭಾರತದ ಉಪಾಧ್ಯಕ್ಷರಾದ ಮೌಲ್ವಿ ತನ್ವಿರ ಅಹ್ಮದ ಹೈದ್ರಾಬಾದ ಅವರು ಹೇಳಿದರು.
ಪಟ್ಟಣದ ತಿಮ್ಮಾಪುರ ಬಡಾವಣೆಯ ಮಜೀದ್ ಏ ಹಸನ್ ನಲ್ಲಿ (ಜು.21) ರವಿವಾರ ಆಯೋಜಿಸಿದ್ದ ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ಅನ್ಸಾರುಲ್ಲಾಹರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಹ್ಮದಿಯಾ ಮುಸ್ಲೀಮ ಸಮಾಜದ 2ನೇ ಖಲಿಫಾರು, 1940 ರಲ್ಲಿ ಸಮುದಾಯದ ಅಭ್ಯುದಯಕ್ಕಾಗಿ ಪ್ರತ್ಯೇಕ ನಾಲ್ಕು ವಿಭಾಗಗಳನ್ನು ರಚಿಸಿದರು, 40 ವರ್ಷ ಮೆಲ್ಪಟ್ಟ ಪುರುಷರೆಲ್ಲರೂ ಅನ್ಸಾರುಲ್ಲಾರಾಗಿದ್ದಾರೆ ಅವರು, ದೇವನ ಸಹಾಯಕರಾಗಿ ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಸಲ್ಲಿಸಬೇಕಾದ ಹಕ್ಕುಬಾದ್ಯತೆಯನ್ನು ಸಮಪರ್ಕವಾಗಿ ನಿರ್ವಹಿಸುವ ಮೂಲಕ ಇಹ ಮತ್ತು ಪರಲೋಕದಲ್ಲಿ ಯಶ ಕಂಡುಕೋಳ್ಳುವರು ಎಂದರು.
ಮಕ್ಕಳಿಗೆ ಸಂಸ್ಕಾರ ನೀಡಬೇಕು, ಪ್ರವಾದಿಯ ಉತ್ತರಾಧಿಕಾರಿಯಾಗಿರುವ ಖಲೀಫಾರೊಂದಿಗೆ ಅತ್ಯುತ್ತಮ ಸಂಬಂಧವನ್ನು ಸ್ಥಾಪಿಸಬೇಕು, ಅವರಿಗೆ ವಿದೆಯರಾಗಿ ಆಜ್ಞೆಪಾಲಕರಾಗಿ ಜೀವನವನ್ನು ಸವಿಸಬೇಕು ಎಂದರು.
ಪ್ರೊ.ಅಬ್ದುಲ ರಬ್ ಉಸ್ತಾದ ಅವರು, ಮಾತನಾಡಿ ನಾವು ಮಸಣಕ್ಕೆ ಸೇರುವ ತನಕವೂ ಕಲಿಯುವುದನ್ನು ನಿಲ್ಲಿಸದೇ ಮುಂದುವರೆಸಬೇಕು, ನಮ್ಮ ಭೋಧನೆಗಳು ಪರಿಣಾಮಕಾರಿ ಆಗಬೇಕು ಅಂದರೆ ಮೊದಲು ನಾವು ಶುದ್ಧರಿರಬೇಕು. ನಮಗಾಗಿ ಶಾಂತಿಪ್ರೀಯ ಇಸ್ಲಾಂ ಧರ್ಮವನ್ನು ಆಯ್ಕೆಮಾಡಿದ ಅಲ್ಲಾಹನ ಮಾರ್ಗದಲ್ಲಿ ನಾವೆಲ್ಲರೂ ನಡೆಯುವಂತಾಗಬೇಕು ಎಂದರು.
ರಾಯಚೂರ ಜಿಲ್ಲಾ ಅಮೀರ ಜಮಾನ್ ಸಾದತ್ ಅಹ್ಮದ ಮಾತನಾಡಿ, ನಮಗಾಗಿ ಹಗಲು ರಾತ್ರಿ ಪ್ರಾರ್ಥಿಸುವ ನಮ್ಮ ಸಾರ್ಥಕ ಜೀವಿತಕ್ಕಾಗಿ ಮಾರ್ಗದರ್ಶನ ನೀಡುವ ಖಲೀಫಾರಿಗೆ ನಿಷ್ಠರಾಗಿ ಪವಿತ್ರ ಪಾವನ ಜೀವನ ಸವಿಸುವುದೇ ನಿಜವಾದ ಸಾರ್ಥಕ ಬದುಕು ಆಗಿದೆ ಎಂದರು.
ಯಾದಗಿರ ಮೌಲ್ವಿ ತಯ್ಯಬ್ ಖಾನ್ ಸಾಬ ಮಾತನಾಡಿ, ನಮಾಜ್, ಜಕಾತ್ ಮತ್ತು ಪ್ರವಾದಿಯ ಆಜ್ಞೆಪಾಲೆ ಮಾಡುವಂತೆ ಅಲ್ಲಾಹನು ಪವಿತ್ರ ಕುರ್‍ಆನ್ ನಲ್ಲಿ ಆದೇಶಿಸಿದ್ದಾನೆ ಹೀಗಾಗಿ ಅಲ್ಲಾಹನ್ನು ಸಂತುಷ್ಟ ಗೊಳಿಸುವುದೇ ನಮ್ಮ ಜೀವಿತದ ಉದ್ದೇಶ ಆಗಬೇಕು ಎಂದರು.
ಸೈಯದ ಮನ್ನಾನ ಸಾಲಿಕ ಅವರು ಮಾತನಾಡಿ, ಋಷಿಮುನಿಗಳನ್ನು, ಅಲ್ಲಾಹನ ಅವತಾರ ಪುರುಷರಾದ ಪ್ರವಾದಿಗಳನ್ನು ಅಪಮಾನಿಸಿ ವಿರೋಧ ವ್ಯಕ್ತಪಡಿಸಿದ ಬಲಿಷ್ಟ ಶಕ್ತಿಗಳು ನಾಶವಾಗಿ ಹೋದವು, ಅಹ್ಮದಿಯಾ ಖಿಲಾಫತ್ತಿನ ವಿರೋಧಿಗಳಾದ ಪಾಕಿಸ್ತಾನದ ಜುಲ್ ಫಿಕರ್ ಅಲಿ ಬುಟ್ಟೊ, ಝಿಯಾಉಲ್ ಹಕ್ ಅವರ ಗತಿ ಏನಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಸಿಗುತ್ತದೆ ಅಲ್ಲದೇ ಅಹ್ಮದಿಯಾ ಸಂಸ್ಥಾಪಕ ಹಜರತ ಮಸೀಹ ಮೌವುದ ಅವರ ವಿರುದ್ಧ ಫತ್ವಾ ಹೊರಡಿಸಿದ ಮೌಲ್ವಿ ಮೊಹ್ಮದ ಹುಸೇನ ಬಟಾಲ್ವಿ, ಮೌಲ್ವಿ ಸನಾವುಲ್ಲಾ ಅಮರಸ್ಸರಿ ಸೇರಿದಂತೆ ಎಲ್ಲರ ಅಂತ್ಯ ಗರಘೋರವಾಯಿತು ಎಂದರು.
ಅನ್ಸಾರುಲ್ಲಾ ವಿಭಾಗೀಯ ಅಧ್ಯಕ್ಷ ಜಾವೀದ ನದೀಮ ಅವರು, ನಾಲ್ಕು ಜಿಲ್ಲೆಗಳ ಅನ್ಸಾರುಲ್ಲಾಹ ವಿವಿಧ ಘಟಕಗಳ ವಾರ್ಷಿಕ ವರದಿಯನ್ನು ಮಂಡಿಸಿದರು ಮತ್ತು ಸಮಾವೇಶದಲ್ಲಿ ಭಾಗವಹಿಸಿದ ಗಣ್ಯಮಾನ್ಯರಿಗೆ ಅಭಿನಂದಿಸಿ ಸ್ವಾಗತಿಸಿಕೊಂದರು.
ಕಾರ್ಯಕ್ರಮ ಬೆಳಗಿನ ತಾಜುದ್ ನಮಾಜ ಮತ್ತು ಪವಿತ್ರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು. ವಿವಿಧ ವಿಷಯಗಳ ಮೇಲೆ ಉಪನ್ಯಾಸ ಜರುಗಿದವು. ಹಗ್ಗ ಜಗ್ಗಾಟ, ಕಬಡ್ಡಿ, ಗರಡಿಮನೆ ಮಗ್ಗಿ ತಿರುಗಿಸುವ ಸ್ಪರ್ಧೆ, ಮ್ಯುಜಿಕಲ್ ಖುರ್ಚಿ, ಲಘು ಭಾಷಣ, ವಿತ್ರ ಕುರ್ ಆನ್ ಸೂಕ್ತಗಳ ಪಠಣ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಗಣ್ಯಮಾನ್ಯರಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಯಚೂರ ಮೌಲ್ವಿ ಸಮೀರ ಅಹ್ಮದ, ನಯಿಮ ಸಗರಿ ಯಾದಗಿರ, ಗುಲಬರ್ಗ ಮೌಲ್ವಿ ಜುನೈದ ಅಹ್ಮದ ಖಾನ, ತಯಬ್ ಖಾನ, ಶೇಖ ಸಲೀಮ ಅಹ್ಮದ ಮಕ್ತಂಪರು, ಮಕ್ಬೂಲ ಅಹ್ಮದ, ನೂರ ಉಲ್ ಹಕ್ ಹೌದೊಡಿ, ಅಲೀಮ ಅಹ್ಮದ ಸಗರಿ, ಸೈಯದ ಏಜಾಜ್ ಅಹ್ಮದ, ಫರೀದ ಅಹ್ಮದ ಗುಲಬರ್ಗಿ, ಅಬ್ದುಲ ರಬ್ ಖುರೇಷಿ, ಹೈದ್ರಾಬಾದ ಅಮೀರ ಅಮೀರ ಉಲ್ ಹಸನ್ ಸೇರಿದಂತೆ ಹಲವರಿದ್ದರು. ಕೆ.ಶೋಹೆಲ್ ಅಹ್ಮದ ಮತ್ತು ಮೊಹ್ಮದ ಇಬ್ರಾಹಿಂ ತಿರಘರ ಕಾರ್ಯಕ್ರಮ ನಡೆಸಿಕೊಟ್ಟರು.ನಾಲ್ಕು ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅನ್ಸಾರುಲ್ಲಾಹ ಭಕ್ತರು ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…