ಕಲಬುರಗಿ: ಅನುಪಮಾ ಅಪಗುಂಡೆ ಯವರ ಎರಡನೇ ಕೃತಿ ಇನಿ ದನಿ ಪುಸ್ತಕ ಲೋಕಾರ್ಪಣೆ ನಂತರ ಜಿಲ್ಲಾ ಸಪ್ತ ನೇಕಾರರ ಸೇವಾ ಸಂಘದ ವತಿಯಿಂದ, ಗುರುಪೂರ್ಣಿಮೆ ಸಂದರ್ಭ, ಶಿಕ್ಷಕಿ ಹಾಗೂ ಲೇಖಕಿ ಮತ್ತು ವೈಜ್ಞಾನಿಕ ನಿಲುವು ಹೊಂದಿ, ಪ್ರಗತಿಪರ ವಿಚಾರ ಗೌರವಿಸಿ ಸನ್ಮಾನಿಸಲಾಯಿತು.
ಇದೆ ಕಾರ್ಯಕ್ರಮ ದಲ್ಲಿ ನೇಕಾರ ಸಮುದಾಯದ ಯುವ ನಾಯಕ ಶ್ರೀನಿವಾಸ ಬಲಪೂರ ಶಾಲು ಹೊದಿಸಿ ಗೌರವಿಸಿದರು, ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ, ಸತತ 21 ವರ್ಷಗಳ ಕಾಲ ಖಾಸಗಿ ಅನುಧಾನಿತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಗ್ರಾಮೀಣ ಮಕ್ಕಳಲ್ಲಿ ಅದ್ಬುತ ಜ್ಞಾನ, ವಿಜ್ಞಾನ ವಿಷಯ ಭೋದಿಸಿಕೊಂಡು ಬರುತ್ತಿರುವ ಕಾಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ.ಸಾ.ಪ ಕಾರ್ಯಕಾರಿಣಿ ಸದಸ್ಯ ಜೇನವೆರಿ ವಿನೋದ ಕುಮಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಯವರು ವೇದಿಕೆಯಲ್ಲಿ ಇದ್ದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ, ನಿವೃತ್ತ ಪೊಲೀಸ್ ಅಧಿಕಾರಿ ಆರ್.ಸಿ.ಘಾಳೆ, ಕವಿ ಹಣಮಂತರಾಯ ಮಂಗಾಣೆ, ಮಕ್ಕಳ ಸಾಹಿತಿ ಎ. ಕೆ.ರಾಮೇಶ್ವರ, ವಿಶ್ವನಾಥ್ ಮಂಗಲಗಿ, ಸಿ. ಎಸ್. ಮಾಲಿಪಾಟೀಲ ಡಾ. ಶರಣ ಬಸಪ್ಪ ವಡ್ಡನಕೇರಿ, ಅನೇಕ ಲೇಖಕರು, ಸಾಹಿತಿಗಳು ಉಪಸ್ಥಿತರಿದ್ದರು.