371 ಅಡಿಯಲ್ಲಿ ಭಾಗದ ಶಿಕ್ಷಕರ ಕೊರತೆ ನೀಗಿಸಲು ಕಲಾಪದಲ್ಲಿ ಶಶೀಲ್ ಜಿ ನಮೋಶಿ ಆಗ್ರಹ

0
140

ಕಲಬುರಗಿ: ಮಂಗಳವಾರ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಯವರು ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಸಮಸ್ಯೆ ಇದ್ದು ಅದನ್ನು ಕೂಡಲೇ ಬಗೆ ಹರಿಸಬೇಕೆಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನ ವಿಶೇಷ ಸ್ಥಾನಮಾನ ವಿಧಿ 371 ಜೇ ಇದ್ದು ಇದರ ಅಡಿಯಲ್ಲಿ ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು. ಆದ್ದರಿಂದ ತ್ವರಿತವಾಗಿ ನೇಮಕ ಮಾಡಿಕೊಂಡು ಆ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಾಯ ಮಾಡಬೇಕೆಂದು ಹೇಳಿದರು.

Contact Your\'s Advertisement; 9902492681

ಇದಕ್ಕೆ ಸದನದಲ್ಲಿ ಉತ್ತರ ನೀಡಿದ ಮಾನ್ಯ ಸಚಿವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗಾಗಲೇ 4,500 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸದ್ಯದಲ್ಲಿಯೇ 10 ಸಾವಿರ ಶಿಕ್ಷಕರ ನೇಮಕವಾಗಲಿದ್ದು, ಅದರಲ್ಲಿ 6,500 ಶಿಕ್ಷಕರನ್ನು ಆ ಭಾಗಕ್ಕೇ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

‘ಶಿಕ್ಷಕರ ಕೊರತೆ ಇರುವುದು ಸರ್ಕಾರದ ಗಮನಕ್ಕೂ ಬಂದಿದೆ. ಶಿಕ್ಷಕರು ಇಲ್ಲದ್ದರಿಂದಲೇ ಆ ಭಾಗದಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಆರ್ಥಿಕ ಇಲಾಖೆಯ ಗಮನಕ್ಕೆ ತಂದು ಶಿಕ್ಷಕರನ್ನು ಶೀಘ್ರವೇ ನೇಮಕ ಮಾಡಲಾಗುತ್ತದೆ’ ಎಂದು ಹೇಳಿದರು.

ಫಲಿತಾಂಶ ಕಡಿಮೆಯಾಗಲು ಶಿಕ್ಷಕರು ಇಲ್ಲದೇ ಇರುವುದೊಂದೇ ಕಾರಣವಲ್ಲ. ಪೆÇೀಷಕರೂ ಮಕ್ಕಳನ್ನು ಎಲ್ಲ ದಿನವೂ ಶಾಲೆಗೆ ಕಳುಹಿಸುವುದಿಲ್ಲ. ವಾರಕ್ಕೆ ಎರಡು ಅಥವಾ ಮೂರು ದಿನ ಮಾತ್ರ ಹಾಜರಾತಿ ಇರುತ್ತದೆ. ಇದೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ’ ಎಂದು ಸಚಿವ ಮಧು ಹೇಳಿದರು.

‘ಎಲ್‍ಕೆಜಿ, ಯುಕೆಜಿಯನ್ನು ಸರ್ಕಾರಿ ಅಂಗನವಾಡಿಗಳಲ್ಲಿ ಪ್ರಾರಂಭಿಸಿದ ಮೇಲೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಒಂದು ತಿಂಗಳಲ್ಲೇ 30 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಮಂಡ್ಯ, ಹಾಸನ ಭಾಗದಲ್ಲಿ 11 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಏಕೀ ತಾರತಮ್ಯ? ನಮ್ಮ ಭಾಗಕ್ಕೂ ಹೆಚ್ಚಿನ ಶಿಕ್ಷಕರನ್ನು ಕೊಡಿ’ ಎಂದು ಶ್ರೀ ಶಶೀಲ್ ಜಿ ನಮೋಶಿ ಆಗ್ರಹಿಸಿದರು.

• 371ಜೆ ಇರುವುದರಿಂದ ಆರ್ಥಿಕ ಇಲಾಖೆಯ ಅನುಮತಿ ಬೇಕಿಲ್ಲ. ಶಿಕ್ಷಕರನ್ನು ಕೂಡಲೇ ನೇಮಿಸಿ’ ಬೇಕೆಂದು ನಮೋಶಿ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here