ಇಂಗಳಗಿ- ಶಹಾಬಾದ್ ಮಧ್ಯೆ 2 ದಿನ ಸಂಪರ್ಕ ಕಡಿತ

0
198

ಇಂಗಳಗಿ:ರೂ.10 ಲಕ್ಷದ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ

ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ಎಸಿಸಿ ಸಿಮೆಂಟ್ ಕಂಪನಿ ವತಿಯಿಂದ ಸುಮಾರು ರೂ.10 ಲಕ್ಷದ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಾರಾವ ಪಾಟೀಲ ಚಾಲನೆ ನೀಡಿದರು.

ಗ್ರಾಮದಿಂದ ಶಹಾಬಾದ್ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆ ಇದಾಗಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಮೂಲಕವೇ ನೂರಾರು ಜನರ ದಿನನಿತ್ಯದ ಓಡಾಟವಾಗಿದೆ. ರಸ್ತೆ ನಿರ್ಮಾಣದಿಂದ ರೈತರು, ಶಾಲಾ ಮಕ್ಕಳು, ಕಾರ್ಮಿಕರಿಗೆ ಶಹಾಬಾದ್ ನಗರಕ್ಕೆ ಹೋಗುವುದಕ್ಕೆ ಅನುಕೂಲವಾಗಲಿದೆ. ಎಂದು ಗ್ರಾ.ಪಂ.ಸದಸ್ಯ ಕಾಶೀನಾಥ್ ಚನ್ನಗುಂಡ ತಿಳಿಸಿದ್ದಾರೆ.

Contact Your\'s Advertisement; 9902492681

ಗ್ರಾಮದ ಪಕ್ಕದಲ್ಲಿ ಹರಿಯುವ ಕಾಗಿಣ ನದಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ಕಾಗಿಣ ನದಿ ದಂಡೆಯಲ್ಲಿ ಪ್ರತಿ ವರ್ಷ ಹಲವು ಸಾಂಪ್ರದಾಯಿಕ ಆಚರಣೆಗೆ ಹೋಗುತ್ತಿರುವ ವಿವಿಧ ಧರ್ಮೀಯರಿಗೆ ಕಿರಿಕಿರಿ ಉಂಟಾಗಿದೆ. ಶೀಘ್ರದಲ್ಲೇ ರಸ್ತೆ ನಿರ್ಮಾಣ ಮಾಡುವಂತೆ ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ. ಕೂಡಲೇ ರಸ್ತೆ ನಿರ್ಮಾಣ ಮಾಡುವುದಾಗಿ ಕಂಪನಿ ತಿಳಿಸಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಯಾಮೇರ್ ತಿಳಿಸಿದ್ದಾರೆ.

ಎಸಿಸಿ ಸಿಮೆಂಟ್ ಕಂಪನಿ ಬಿ.ಎನ್ ಶ್ರೀನಿವಾಸ್, ಮಹಾದೇವಪ್ಪ ಸಾಸನೂರ್, ಸಿಎಸ್ಆರ್ ವಿಭಾಗ ವ್ಯವಸ್ಥಾಪಕರಾದ ವಿರೇಶ ಎಮ್.ಯು. ಜಗದೀಶ, ಪಂಚಾಯಿತಿ ಸದಸ್ಯರಾದ ಶರಣು ರಾವೂರಕರ್, ಕಾಶಿನಾಥ ಚನ್ನಗುಂಡ, ಮುಖಂಡರಾದ ಮುಕ್ರುಮ ಪಟೇಲ, ಮಲ್ಲಪ್ಪ ನಾಟೀಕಾರ, ವೆಂಕಟಗೀರಿ ಕಟ್ಟಿಮನಿ, ಶಾಂತಪ್ಪ ಬರಗಲಚಾಳಿ, ಅಣ್ಣಾರಾವ ಅಳ್ಳೋಳಿ, ಮಾಳಿಗೆಪ್ಪ ಹಿಂದಿನಕೆರಿ, ಸಾಬಣ್ಣ ಪೂಜಾರಿ, ಮಲ್ಲಿಕಾರ್ಜುನ ಗುಡುಬಾ, ನಾಗಣ್ಣಸಾಹು ಯಾದಗಿರಿ ಇದ್ದರು.

ಇಂಗಳಗಿ- ಶಹಾಬಾದ್ ಮಧ್ಯೆ 2 ದಿನ ಸಂಪರ್ಕ ಕಡಿತ:
ಇಂಗಳಗಿ ಗ್ರಾಮದಲ್ಲಿ ರಸೆ ಕಾಮಗಾರಿ ಆರಂಭವಾದ ಪರಿಣಾಮ ಇಂಗಳಗಿ ಗ್ರಾಮದಿಂದ ಶಹಾಬಾದ್ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆದ ರಸ್ತೆ ಜು.26,27 ರವರೆಗೆ ಬಂದ್ ಮಾಡಲಾಗಿದೆ. ಇದರಿಂದ ಶಹಾಬಾದ್, ಕಲಬುರಗಿ ನಗರಕ್ಕೆ ಹೋಗುವ ಪ್ರಯಾಣಿಕರು ರಾವೂರ ಗ್ರಾಮದ ಮೇಲೆ ಹಾದು ಹೋಗಬೇಕು ಎಂದು ಎಸಿಸಿ ಕಂಪನಿ ಸಿಎಸ್.ಆರ್ ವಿಭಾಗದ ಜಗದೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here