ಅಲ್ಪಸಂಖ್ಯಾತ ವಿದ್ಯರ್ಥಿಗಳಿಗೆ 80 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿ ವೇತನ: ಸಚಿವ ಬಿ.ಝಡ್.ಜಮೀರ್

0
36

ಬೆಂಗಳೂರು: ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ೧ ರಿಂದ ೮ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ  80 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝಡ್.ಜಮೀರ್ ತಿಳಿಸಿದರು.

ಇಂದು ವಸಂತನಗರದ ಡಿ.ದೇವರಾಜ ಅರಸು ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯರ‍್ಥಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಕರ‍್ಯಾಗಾರದ ಉದ್ಘಾಟನೆಯನ್ನು ಗಿಡಗಳಿಗೆ ನೀರುಣಿಸುವ ಮೂಲಕ ನೆರವೇರಿಸಿ ಮಾತನಾಡಿದ ಸಚಿವರು, ವಿದ್ಯಾಭ್ಯಾಸವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮನಗಂಡಿರುವ ರ‍್ಕಾರ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ೩೨೦೦ ಕೋಟಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ೧,೪೮೮ ಕೋಟಿ ರೂಗಳನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದರು.

Contact Your\'s Advertisement; 9902492681

೨೦೨೩-೨೪ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ೬೨ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗಿದೆ ಹಾಗೂ ಅಲ್ಪಸಂಖ್ಯಾತರ ೫೦ ಮೊರರ‍್ಜಿದೇಸಾಯಿ ವಸತಿ ಶಾಲೆಗಳಲ್ಲಿ ವಿದ್ಯರ‍್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗಿದ್ದು, ಇದರಿಂದಾಗಿ ೩,೩೮೭ ವಿದ್ಯರ‍್ಥಿಗಳು ಪ್ರವೇಶಾತಿಯನ್ನು ಪಡೆದಿದ್ದಾರೆ. ೪,೦೩,೮೭೭ ಅಲ್ಪಸಂಖ್ಯಾತ ವಿದ್ಯರ‍್ಥಿಗಳಿಗೆ ಒಟ್ಟು ರೂ.೫೮.೯೫ ಕೋಟಿ ಮೆಟ್ರಿಕ್ ಪರ‍್ವ ವಿದ್ಯರ‍್ಥಿ ವೇತನವನ್ನು ಹಾಗೂ ೭೭,೩೩೦ ವಿದ್ಯರ‍್ಥಿಗಳಿಗೆ ರೂ.೭೦.೨೦ ಕೋಟಿ ಮೆಟ್ರಿಕ್ ನಂತರದ ವಿದ್ಯರ‍್ಥಿ ವೇತನವನ್ನು ಪಾವತಿಸಲಾಗಿದೆ ೫೦೦ ಕೋಟಿ ರೂ.ಗಳ ವೆಚ್ಚದಲ್ಲಿ ೩೫ ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಪ್ರಯೋಗಾಲಯಗಳನ್ನು ತೆರೆಯಲಾಗಿದೆ ಎಂದರು.

ಅಲ್ಪಸಂಖ್ಯಾತರ ಪದವಿ ಪರ‍್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೬ ಸಾವಿರ ವಿದ್ಯರ‍್ಥಿಗಳಿಗೆ ಪ್ರಥಮ ರ‍್ಷದಿಂದಲೇ ನೀಟ್, ಜೆ.ಇ.ಇ, ಸಿ.ಇ.ಟಿ, ಸಿ.ಎ. ಫೌಂಡೇಷನ್/ಸಿಎಲ್‌ಎಟಿ ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಇ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ರ‍್ಷಗಳ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಪ್ರತಿಷ್ಠಿತ ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ನಿಗಮದಿಂದ ರೂ.೨೦ ಲಕ್ಷದವರೆಗೆ ಸಾಲ ಒದಗಿಸುವ ಯೋಜನೆಯನ್ನು ಹೊಸದಾಗಿ ಅನುಷ್ಠಾನಗೊಳಿಸಲಾಗಿದ್ದು, ಒಟ್ಟು ೬೬ ವಿದ್ಯರ‍್ಥಿಗಳಿಗೆ ೬೫೦ ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ.

ವಿದೇಶಿ ವಿದ್ಯರ‍್ಥಿ ವೇತನ ಯೋಜನೆಯಡಿಯಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ೩೦೪ ಅಲ್ಪಸಂಖ್ಯಾತ ವಿದ್ಯರ‍್ಥಿಗಳಿಗೆ ಒಟ್ಟು ರೂ.೨೮.೧೧ ಕೋಟಿಗಳ ವಿದ್ಯರ‍್ಥಿ ವೇತನ ಪಾವತಿಸಲಾಗಿದೆ. ಎಂ.ಫಿಲ್ ಮತ್ತು ಪಿ.ಹೆಚ್.ಡಿ ವಿದ್ಯರ‍್ಥಿಗಳಿಗೆ ಪ್ರೋತ್ಸಾಹಧನ ಯೋಜನೆಯಡಿ ೨೪೧ ವಿದ್ಯರ‍್ಥಿಗಳಿಗೆ ರೂ.೪೨೫ ಕೋಟಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸಕ್ಕಾರ ಯೋಜನೆಯಡಿ ೮,೮೫೪ ವಿದ್ಯರ‍್ಥಿಗಳಿಗೆ ರೂ.೪.೨೫ ಕೋಟಿಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ವಿದ್ಯಾಸಿರಿ ಯೋಜನೆಯಡಿ ೨೦೨೩-೨೪ನೇ ಸಾಲಿಗೆ ರೂ.೧೦.೩೧ ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು ೬,೯೬೩ ವಿದ್ಯರ‍್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಅಲ್ಪಸಂಖ್ಯಾತರ ವಿದ್ಯರ‍್ಥಿಗಳಿಗೆ ಉತ್ತೇಜನ ಯೋಜನೆಯಡಿ ರೂ.೬.೦೪ ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು, ೨,೪೧೮ ಬಿ.ಎಡ್ ಮತ್ತು ಡಿ.ಎಡ್ ಹಾಗೂ ಐಐಟಿ, ಐಐಎಂ ವಿದ್ಯರ‍್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.

ಈಗಾಗಲೇ ಇಲಾಖಾ ವತಿಯಿಂದ ಕರ‍್ಯನರ‍್ವಹಿಸುತ್ತಿರುವ ವಸತಿ ಕಾಲೇಜುಗಳಲ್ಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ತಲಾ ೧೧೦ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ವಸತಿ ಶಾಲೆಗಳಲ್ಲಿ ಮಂಚಗಳು, ಹಾಸಿಗೆಗಳು, ಡೆಸ್ಕ್ಗಳು, ಮೂಲಭೂತ ಮೂಲಸೌರ‍್ಯಗಳನ್ನು ಒದಗಿಸಲಾಗಿದೆ.

ಸ್ರ‍್ಧಾತ್ಮಕ ಪರೀಕ್ಷಗಳಿಗೆ ತರಬೇತಿ ಯೋಜನೆಯಡಿ ೪೦೦ ಅಲ್ಪಸಂಖ್ಯಾತ ವಿದ್ಯರ‍್ಥಿಗಳಿಗೆ ಹಜ್ ಭವನದಲ್ಲಿ ಐಎಎಸ್ ಮತ್ತು ಕೆಎಎಸ್ ಪರೀಕ್ಷಾಪರ‍್ವ ತರಬೇತಿಯನ್ನು ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ೯ ಅಭ್ರ‍್ಥಿಗಳು ರ‍್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ೧೨೦ ಅಲ್ಪಸಂಖ್ಯಾತ ವಿದ್ಯರ‍್ಥಿಗಳಿಗೆ ಪದವಿ ಜೊತೆಗೆ ಐ.ಎ.ಎಸ್ ಮತ್ತು ಕೆ.ಎ.ಎಸ್ ತರಬೇತಿಯನ್ನು ಖಾಸಗಿ ಸಂಸ್ಥೆಯಿಂದ ವಸತಿ ಸಹಿತವಾಗಿ ನೀಡಲಾಗುತ್ತಿದೆ ಎಂದರು.

ಇದೇ ಸಂರ‍್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯರ‍್ಥಿಗಳು ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇ.೯೧ ರಿಂದ ಶೇ. ೯೮ರ ವರೆಗೆ ಅತ್ಯುತ್ತಮ ಅಂಕ ಪಡೆದಿರುವ ೫೪ ವಿದ್ಯರ‍್ಥಿಗಳನ್ನು ಹಾಗೂ ಶೇ.೧೦೦ ರಷ್ಟು ಫಲಿತಾಂಶÀವನ್ನು ಪಡೆದ ಹಾಗೂ ಉತ್ತಮ ಕರ‍್ಯನರ‍್ವಹಣೆ ಹೊಂದಿರುವ ಶಾಲೆ-ಕಾಲೇಜುಗಳ ೦೪ ಪ್ರಾಂಶುಪಾಲರಿಗೆ, ೩೪ ಶಿಕ್ಷಕರಿಗೆ ಹಾಗೂ ೪ ನಿಲಯ ಪಾಲಕರಿಗೆ ಸಚಿವರು ಸನ್ಮಾನ ಮಾಡಿದರು.

ಎಸ್.ಎಸ್.ಎಲ್.ಸಿ ವಿದ್ಯರ‍್ಥಿಗಳಿಗೆ ೧೦ ಸಾವಿರ ರೂ.ಗಳ ನಗದು ಬಹುಮಾನ, ಅಭಿನಂದನಾ ಪ್ರಶಸ್ತಿ ಫಲಕ, ಪದಕ, ಹಾಗೂ ಪಿಯು ವಿದ್ಯರ‍್ಥಿಗಳಿಗೆ ೧೫ ಸಾವಿರ ರೂ.ಗಳ ನಗದು ಬಹುಮಾನ, ಅಭಿನಂದನಾ ಪ್ರಶಸ್ತಿ ಫಲಕ, ಪದಕ ಹಾಗೂ ಸಚಿವರು ವೈಯಕ್ತಿಕವಾಗಿ ಈ ಎಲ್ಲಾ ವಿದ್ಯರ‍್ಥಿಗಳಿಗೆ ಸ್ಮರ‍್ಟ್ ವಾಚ್ ನೀಡಿ ಸನ್ಮಾನ ಮಾಡಿದರು.

ಶಿಕ್ಷಕರುಗಳಿಗೆ ಆಭಿನಂದನಾ ಪ್ರಶಸ್ತಿ ಪತ್ರ ಮತ್ತು ವೈಯಕ್ಷಿವಾಗಿ ಸ್ಮರ‍್ಟ್ ವಾಚ್ ನೀಡಿ ಸನ್ಮಾನ ಮಾಡಿ ಅಭಿನಂದಿಸಿದ ಸಚಿವರು, ಪ್ರಸಕ್ತ ಸಾಲಿನಿಂದ ಈ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿ ರ‍್ಷವೂ ನಡೆಸಲಾಗುವುದು. ಈ ರೀತಿಯ ಕರ‍್ಯಕ್ರಮದಿಂದ ಬೇರೆ ವಿದ್ಯರ‍್ಥಿಗಳಿಗೆ ಹಾಗೂ ಶಿಕ್ಷರಿಗೆ ಸ್ಪರ‍್ತಿದಾಯಕವಾಗುತ್ತದೆ ಎಂದರು.

ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ಸಿಗಬೇಕು ಹಾಗೂ ಯಾರೂ ಶಿಕ್ಷಣದಿಂದ ವಂಚಿತರಾಬಾರದು ಎಂದು ಬಡ ಮಕ್ಕಳಿಗಾಗಿ ರ‍್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ ಮಕ್ಕಳೆ ಚೆನ್ನಾಗಿ ಓದುತ್ತಿದ್ದು, ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸಬೇಕು. ಮಕ್ಕಳು ಸಹ ಪೋಷಕರ ಕಷ್ಟವನ್ನು ಅರಿತು ಅವರಿಗೆ ಹೊರೆಯಾಗದಂತೆ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆರಬೇಕು ಎಂದರು.

ಇಂದು ಸನ್ಮಾನ ಮಾಡಿದ ೫೪ ವಿದ್ಯರ‍್ಥಿಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ ೩೨ ವಿದ್ಯರ‍್ಥಿಗಳಿಗೆ ಸಚಿವರು ವೈಯಕ್ತಿಕವಾಗಿ ಆಗಸ್ಟ್ ಮಾಹೆಯ ಅಂತ್ಯದೊಳಗೆ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದರು.
ಇದೇ ಶೈಕ್ಷಣಿಕ ರ‍್ಷದಿಂದ ಪಿಯುಸಿಯಲ್ಲಿ ಶೇ.೯೮ ರಷ್ಟು ಅಂಕ ಪಡೆದ ಅಲ್ಪಸಂಖ್ಯಾತ ವಿದ್ಯರ‍್ಥಿಗಳನ್ನು ನಾನೇ ವೈಯಕಿಕವಾಗಿ ದತ್ತು ಪಡೆದು ಅವರು ಯಾವ ಕಾಲೇಜಿನಲ್ಲಿ ಯಾವ ಶಿಕ್ಷಣ ಪಡೆದರು ಸಹ ನಾನು ಅವರಿಗೆ ಶಿಕ್ಷಣ ಕೋಡಿಸುತ್ತೇನೆ. ಹಾಸ್ಟೆಲ್ ವಿದ್ಯರ‍್ಥಿಗಳನ್ನು ಶಿಕ್ಷಕರು ತಮ್ಮ ಮಕ್ಕಳಂತೆ ಭಾವಿಸಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದರು.

ಇದೇ ಸಂರ‍್ಭದಲ್ಲಿ ೨೦೨೩-೨೪ನೇ ಸಾಲಿನ ಇಲಾಖಾ ಸಾಧನಾ ಪುಸ್ತಕ ಹಾಗೂ ೨೦೨೪-೨೫ನೇ ಸಾಲಿನ ಶೈಕ್ಷಣಿಕ ಕ್ರಿಯಾ ಯೋಜನೆ ಮತ್ತು ೨೦೨೪-೨೫ನೇ ಸಾಲಿನ ಕ್ರಿಯಾ ಯೋಜನೆ ಪುಸ್ತಕ ಬಿಡುಗಡೆ ಮಾಡಿದರು.

ಕರ‍್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧ್ಯಕ್ಷರಾದ ನಿಸ್ಸಾರ್ ಅಹಮದ್, ಕರ‍್ಯರ‍್ಶಿ ಮನೋಜ್ ಜೈನ್, ನರ‍್ದೇಶಕರು ಹಾಗೂ ಶಿಕ್ಷಕರು, ವಿದ್ಯರ‍್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here