ವಾಡಿ: ಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಬಿಜೆಪಿ ಮುಖಂಡರು ಪುರಸಭೆ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯ ಉದ್ದೇಶಿಸಿ ಪಕ್ಷದ ಮುಖಂಡರಾದ ರಮೇಶ ಕಾರಬಾರಿ ಮಾತನಾಡಿ ಸುಮಾರು ಇಪ್ಪತ್ತು ವರ್ಷಗಳಿಂದ ಇರುವ ಪುರಸಭೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಕೊಡದೇ ಇರುವುದು ದುರಾದೃಷ್ಟ ವಾರ್ಡ್ ಸಂಖ್ಯೆ ಒಂದು ಸೇರಿದಂತೆ ಬಹುತೇಕ ಕಡೆ ನಮಗೆ ವಾಸಿಸುವ ಹಕ್ಕು ಪತ್ರ ಕೂಡಾ ಕೊಟ್ಟಿಲ್ಲ ನಾವು ತೆರಗೆ ಕೊಡಲು ಸಿದ್ದರಿದ್ದರು ಅಧಿಕಾರಿಗಳ ಮುಂದೆ ಬರುತ್ತಿಲ್ಲಾ ಇಂತಹ ಅಧಿಕಾರಿಗಳಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.
ಮುಂದೆ ಇದನ್ನೇ ಮುಂದುವರೆಸಿದರೆ ನಾವು ಉಗ್ರ ಹೋರಾಟದ ಮೂಲಕ ವಾಡಿ ಬಂದ್ ಗೆ ಕರೆ ನೀಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕೊಡುತ್ತೇವೆ ಎಂದ ಹೇಳಿದರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಪಟ್ಟಣವು ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿದೆ, ಇಲ್ಲಿ ಪ್ರಖ್ಯಾತ ಎಸಿಸಿ(ಆದಾನಿ) ಸಿಮೆಂಟ್ ಹಾಗೂ ಬೃಹತ್ ರೈಲ್ವೆ ನಿಲ್ದಾಣ ಕೂಡಾ ಇದ್ದರು, ಜನರು ಜೀವನ ಸಾಗಾಟಕ್ಕೆ ಸುಮಾರು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ.
ನೀರು ಮೂರುನಾಲ್ಕು ದಿನಗಳಿಗೊಮ್ಮೆ,ಅದು ರಾಡಿ ನೀರು, ಚರಂಡಿ ನೀರು ರಸ್ತೆ ಮತ್ತು ಮನೆಯೊಳಗೆ,
ಅಸಮರ್ಪಕ ರಸ್ತೆ ಮತ್ತು ಬಿದಿ ದೀಪಗಳು,ಹಂದಿ ನಾಯಿಗಳ ಕಾಟಗಳ ಜೊತೆ ಕಳ್ಳತನ ಹೆಚ್ಚಾಗಿರುವುದು,ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಸಮಸ್ಯೆಗಳ ಆಗರವಾದ ಪಟ್ಟಣವಾಗಿದೆ.
ಎಸಿಸಿಯ ಪರಿಸರ ಮಾಲಿನ್ಯ ದಿಂದ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಹಾಗೂ ಈ ಕಂಪನಿ ಸ್ಥಳೀಯರಿಗೆ ಉದ್ಯೋಗ ನೀಡದೆ ಯುವ ಸಮುದಾಯವನ್ನು ಮಾನಸಿಕವಾಗಿ ಹಿಂಸೆಗೆ ಒಡ್ಡುತ್ತಿದೆ ಸರ್ಕಾರದ ಯಾವುದೇ ನಿಯಮ ಪಾಲಿಸುತ್ತಿಲ್ಲ. ಇದನ್ನೆಲ್ಲಾ ಸರಿದೂಗಿಸಲು ಇರುವ ಇಲ್ಲಿನ ಪುರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸಾಮಾನ್ಯ ಸಾರ್ವಜನಿಕ ಸವಲತ್ತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ.
ಇದರ ಬಗ್ಗೆ ಸಾಕಷ್ಟು ಸಲ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನ ವಾಗಿಲ್ಲ ಎಂದರು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…