ವೃತ್ತಿ ಮಾರ್ಗದರ್ಶನ ಹಾಗು ಅಕ್ಷರ ದಾಸೋಹ

0
56

ಬೆಂಗಳೂರು: ಬೇರು ಸಂಸ್ಥೆಯು ಎ.ಎಸ್.ಬಿ ಸರ್ಕಾರಿ ಶಾಲೆ ಹಾಗು ಚಂದಾಪುರ ಸರ್ಕಾರಿ ಪ್ರೌಡಶಾಲೆಯಲ್ಲಿ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ಹಾಗು ಅಕ್ಷರ ದಾಸೋಹ ಕಾರ್ಯಕ್ರಮ ಅಯೋಜಿಸಲಾಗಿತ್ತು.

ಶೈಕ್ಷಣಿಕ ಬದುಕಿನಲ್ಲಿ ಹತ್ತನೆ ತರಗತಿ ಬಹಳ ಮುಖ್ಯವಾದ ಘಟ್ಟವಾಗಿದೆ. ನಮ್ಮ ಆಸಕ್ತಿ ಹಾಗು ಕೌಶಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವಿಧ್ಯಾಭ್ಯಾಸದ ಕುರಿತು ನಾವು ನಿರ್ಧಾರಗಳನ್ನು ಕೈಗೊಳ್ಳಬೇಕು. ಪ್ರತಿ ವಿದ್ಯಾರ್ಥಿನಿ ಹಾಗು ವಿಧ್ಯಾರ್ಥಿಯಲ್ಲಿ ವಿಶಿಷ್ಟವಾದ ಸಾಮರ್ಥ್ಯವಿರುತ್ತದೆ. ನೀವು ಪ್ರೌಢಶಾಲೆಯ ಹಂತದಲ್ಲಿಯೇ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು ಸಾಧ್ಯವಾದರೆ, ಎಸೆಸೆಲ್ಸಿ ಆದ ನಂತರ ಕಾಲೇಜು ಹಂತದಲ್ಲಿ ತಮ್ಮ ಇಷ್ಟದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದು ಬೇರು ಸಂಸ್ಥೆಯ ನಿರ್ದೇಶಕಿ ಮಮತಾ ಕೆ.ಎನ್ ತಿಳಿಸಿದರು.

Contact Your\'s Advertisement; 9902492681

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಮಂಜುನಾಥ್ ಮಾತಾನಾಡಿ ಶಿಕ್ಷಣವು ನಮ್ಮ ಬದುಕನ್ನು ಉನ್ನತ ದಿಕ್ಕಿನತ್ತ ಕರೆದುಕೊಂಡು ಹೋಗುತ್ತದೆ.ಬುದ್ದ, ಅಂಬೇಡ್ಕರ್, ಸಾವಿತ್ರಿಬಾಪುಲೆ ಮುಂತಾದವರು ನಮ್ಮ ಬದುಕಿನ ಆದರ್ಶವಾಗಬೇಕು. ಉನ್ನತ ಶಿಕ್ಷಣ ಹಾಗು ಉನ್ನತ ವೃತ್ತಿ ನಮ್ಮ ಬದುಕಿನ ಗುರಿಯಾಗಲಿ ಎಂದು ತಿಳಿಸಿದರು.

ಸಂಕ್ರಮಣ ಬಳಗದ ಮಂಜುನಾಥ್ , ಶ್ರೀನಿವಾಸ್ ಅವರು ಬೇರು ಅಕ್ಷರ ದಾಸೋಹ ಕಾರ್ಯಕ್ರಮದ ಭಾಗವಾಗಿ ಇಳೆಯಬೆಳಗು ಪುಸ್ತಕ ವಿತರಿಸಿದರು.ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ, ಶಿಕ್ಷಕರಾದ ಚಂದ್ರಶೇಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here