ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ

0
135

ಸುರಪುರ: ಇದೇ ಅಕ್ಟೋಬರ್ ೧೩ನೇ ತಾರೀಖಿನಂದು ತಾಲ್ಲೂಕು ಆಡಳಿತದಿಂದ ಅಧ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ತಿಳಿಸಿದರು.

ನಗರದ ತಹಸೀಲ್ದಾರ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ತಾಲ್ಲೂಕಿನ ಎಲ್ಲಾ ಕಚೇರಿಗಳಲ್ಲಿ ಹಾಗು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಣೆ ಮಾಡಿ,ನಂತರ ಒಂಬತ್ತು ಮೂವತ್ತಕ್ಕೆ ನಗರದ ಡೊಣ್ಣಿಗೇರಾದಲ್ಲಿರುವ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಬಳಿ ಎಲ್ಲಾ ಅಧಿಕಾರಿಗಳ ಬರುವುದು.ನಂತರ ಅಲ್ಲಿಂದ ನಗರದ ಪ್ರಮುಖ ಬೀದಿಗಳ ಮೂಲಕ ತಹಸೀಲ್ ಕಚೇರಿ ವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

Contact Your\'s Advertisement; 9902492681

ನಂತರ ನಡೆಯುವ ಉಪನ್ಯಾಸ ಕಾರ್ಯಕ್ರಮವನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಲಿದ್ದಾರೆ. ಅಲ್ಲದೆ ಎಸ್.ಎಸ್. ನಾಯಕ ಮತ್ತು ಬಸವಂತ್ರಾಯ ಪಾಟೀಲ ದೇವರಗೋನಾಲ ಈ ಇಬ್ಬರು ಮಹರ್ಷಿ ವಾಲ್ಮೀಕಿಯ ಕುರಿತು ಉಪನ್ಯಾಸ ನೀಡಲಿದ್ದಾರೆ, ನಂತರ ಹತ್ತನೆ ತರಗತಿಯಲ್ಲಿ ತಾಲ್ಲೂಕಿನಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನದಲ್ಲಿ ಬಂದ ವಿದ್ಯಾರ್ಥಿಗಳಿಗೆ ಹಾಗು ವಿವಿಧ ಸಾಧಕರಿಗೆ ಸನ್ಮಾನ ನಡೆಸಲಾಗುವುದು.ಆದ್ದರಿಂದ ಎಲ್ಲಾ ಇಲಾಖೆಗಳ ಮುಖ್ಯಾಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ತಿಳಿಸಿದರು.

ಇದಕ್ಕು ಮುನ್ನ ವಾಲ್ಮೀಕಿ ಸಮುದಾಯದ ಅನೇಕ ಮುಖಂಡರು ಮಾತನಾಡಿ,ಪ್ರತಿ ಜಯಂತಿಗೆ ಅನೇಕ ಇಲಾಖೆಗಳ ಅಧಿಕಾರಿಗಳು ಬರದೆ ಅಸಡ್ಡೆ ತೋರುತ್ತಾರೆ.ಅಂತವರ ಮೇಲೆ ಕ್ರಮ ಕೈಗೊಳ್ಳಬೇಕು.ನಗರದಲ್ಲಿರುವ ಎಲ್ಲಾ ವಾಲ್ಮೀಕಿ ಭಾವಚಿತ್ರಗಳ ಬಳಿ ಸ್ವಚ್ಛತೆ ಕಾಪಾಡಬೇಕೆಂದು ಆಗ್ರಹಿಸಿದರು.ಇದಲ್ಲದಕ್ಕೂ ಒಪ್ಪಿಗೆ ಸೂಚಿಸಿದ ಗ್ರೇಡ-೨ ತಹಸೀಲ್ದಾರರು ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಬರುವಂತೆ ಸೂಚಿಸಿದರು.

ಸಭೆಯಲ್ಲಿ ಮುಖಂಡರಾದ ವೇಣುಗೋಪಾಲ ಜೇವರ್ಗಿ,ಗಂಗಾಧರ ನಾಯಕ ತಿಂಥಣಿ,ವೆಂಕಟೇಶ ಬೇಟೆಗಾರ,ವೆಂಕಟೇಶ ದಳವಾಯಿ,ಮೂಕಪ್ಪ ನಾಯಕ ಬಿಚಗತ್ತಿಕೇರಾ,ದುರ್ಗಪ್ಪ ಡೊಣ್ಣಿಗೇರಾ, ಹಣಮಂತ ಬೊಮ್ಮನಹಳ್ಳಿ,ಹಣಮಂತ ನಾಯಕ,ಭೀಮರಾಯ ಖಾನಿಕೇರಾ,ಹಣಮಂತ ವೆಂಕಟಾಪುರ,ಬಲಭೀಮರಾಯ ದೇವಾಪುರ,ಯಂಕಪ್ಪ ನಾಯಕ,ಶರಣಪ್ಪ ದೊರೆ,ಮಾನಶಪ್ಪ ದೊರೆ, ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳಾದ ಸತ್ಯನಾರಾಯಣ ದರಬಾರಿ,ಲಕ್ಷ್ಮಣ ಕಟ್ಟಿಮನಿ,ಮೊನಪ್ಪ ಶಿರವಾಳ,ವಿಶ್ವನಾಥ,ಬಸವರಾಜ ನಾಯಕ,ಸೋಮಪ್ಪ ನಾಯಕ,ಮಲ್ಲಪ್ಪ ಗೋಗಿ,ಶಶಿಕಲಾ ಐ.ಜಿ,ಗಂಗಮ್ಮ ಕಾಳನೂರ,ಶಿವಪುತ್ರ ನಡಗೇರಿ,ಶಶಿಧರ ಹಿರೇಮಠ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here