ಕಲಬುರಗಿ: ನಮಸ್ವಿ ಮಕ್ಕಳ ಕ್ಲೀನಿಕ್,ವಾಸ್ಕುಲರ್ ಕ್ಲೀನಿಕ್,ಮೋಲಾರ ಡೆಂಟಲ್ ಕ್ಲೀನಿಕ್,ಯುನಿಕೇರ್ ಡೈಗ್ನೋಸ್ಟಿಕ್ ಹಾಗೂ ಜಯನಗರ ಶಿವಮಂದಿರದ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಜಯನಗರ ಬಡಾವಣೆಯ ಶಿವಮಂದಿರದಲ್ಲಿ 78 ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಉಚಿತ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು.
ಶಿಬಿರವನ್ನು ಖ್ಯಾತ ವೈದ್ಯರಾದ ಡಾ.ಎಸ್.ಎಸ್.ಗುಬ್ಬಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಬೇಕಾರೆ ಉತ್ತಮ ಆಹಾರದ ಕಡೆ ಗಮನ ಹರಿಸಬೇಕು.ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು.ಮಕ್ಕಳನ್ನು ಜಂಕ್ ಫುಡಗಳಿಂದ ದೂರವಿಟ್ಟರೆ ಮಾತ್ರ ಆರೋಗ್ಯ ಕಾಪಾಡಲು ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ನರರೋಗ ತಜ್ಞ ಡಾ.ಅನಿಲ್ ಪಾಟೀಲ ಭಾಗವಹಿಸಿ ಮಾತನಾಡಿದ ಅವರು ಇಂಥ ಶಿಬಿರಗಳಿಂದ ಜನರು ತಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೀರಪ್ಪ ಹುಡಗಿ,ವಿರೇಶ ದಂಡೋತಿ ವೇದಿಕೆ ಮೇಲೆ ಇದ್ದರು..ಈ ಶಿಬಿರದಲ್ಲಿಮಕ್ಕಳ ಆರೋಗ್ಯ ತಪಾಸಣೆ,ಹಲ್ಲಿನ ತಪಾಸಣೆ,ಸಕ್ಕರೆ ಕಾಯಿಲೆ,ರಕ್ತದೋತ್ತಡ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ಇದರ ಜೊತೆಗೆ ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆಯೂ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜನರು,ಮಹಿಳೆಯರು,ಹಿರಿಯರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ನಿರೂಪಿಸಿದರು.
ಈ ಶಿಬಿರದಲ್ಲಿ ಪರಿಣಿತ ವೈದ್ಯರಾದ ಡಾ.ಶ್ರೀವಿಶಾಲ ವಿ. ಹುಡಗಿ,ಡಾ.ಸಂಧ್ಯಾ ವಿ.ಹುಡಗಿ,ಡಾ.ಪ್ರಶಾಂತ ವಿ.ಹುಡಗಿ,ಡಾ.ಲಕ್ಷ್ಮೀಶ್ರೀ ಪಿ.ಹುಡಗಿ,ಡಾ.ವಿನೋದ ವಿ.ಹುಡಗಿ ಹಾಗೂ ಡಾ.ಪ್ರೀಯಾಂಕ ವಿ.ಹುಡಗಿ ಅವರುಗಳು ವಿವಿಧ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.ಆಹಾರ ಪದ್ಧತಿ, ನಿತ್ಯ ಜೀವನ ಶವನ ಶೈಲಿಯ ಬಗ್ಗೆಯೂ ತಿಳಿಸಿಕೊಡಲಾಯಿತು.
ಟ್ರಸ್ಟ್ ಪದಾಧಿಕಾರಿಗಳಾದ ಬಸವರಾಜ ಮಾಗಿ,ಸಿದ್ಧಲಿಂಗ ಗುಬ್ಬಿ,ಶಿವಕುಮಾರ ಪಾಟೀಲ,ಬಂಡಪ್ಪ ಕೇಸೂರ,ಮನೋಹರ ಬಡಶೇಷಿ,ಎಂ.ಡಿ.ಮಠಪತಿ,ಮಲ್ಲಯ್ಯ ಸ್ವಾಮಿ ಬೀದಿಮನಿ,ಮಹಿಳಾ ಸದಸ್ಯೆರಾದ ಸುಷ್ಮಾಮಾಗಿ,ಅನಿತಾ ನವಣಿ,ಸುರೇಖಾ ಬಾಲಕೊಂದೆ ಸೇರಿದಂತೆ ಹಲವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…
ಕಲಬುರಗಿ: ನ.25 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಮಲಾಪುರ ಮತ್ತು ಕಲಬುರಗಿ ವತಿಯಿಂದ ಧರ್ಮಾಧಿಕಾರಿ ಡಾ.…
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…