ಕಲಬುರಗಿ: ಏಷ್ಯಾದ ಪ್ರಮುಖ ಡಯಾಲಿಸಿಸ್ ಜಾಲವಾದ `ನೆಪ್ರೊಪ್ಲಸ್ ಕಲಬುರಗಿಯ ಜೆಸ್ಕಾಂ ಪ್ರಧಾನ ಕಚೇರಿಯ ಎದುರಿನ ಚಿರಾಯು ಆಸ್ಪತ್ರೆಯಲ್ಲಿ ದೊಡ್ಡ ಡಯಾಲಿಸಿಸ್ ಚಿಕಿತ್ಸಾಲಯವನ್ನು ಆರಂಭಿಸಿದೆ.
ಈ ಚಿಕಿತ್ಸಾಲಯದ ಉದ್ಘಾಟನೆಯೊಂದಿಗೆ, ಕಲಬುರಗಿಯಲ್ಲಿ ನೆಪ್ರೊಪ್ಲಸ್ ತನ್ನ ನಿಯಮಾಧಾರಿತ ಡಯಾಲಿಸಿಸ್ ಕೊಡುಗೆಯನ್ನು ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಪರಿಸರ ವ್ಯವಸ್ಥೆಗೆ ತರುವ ಗುರಿ ಹೊಂದಿದೆ.
14 ಡಯಾಲಿಸಿಸ್ ಹಾಸಿಗೆಗಳನ್ನು ಹೊಂದಿರುವ ಚಿಕಿತ್ಸಾಲಯವನ್ನು ಮೂವರು ನೆಫ್ರಾಲಜಿಸ್ಟ್‍ಗಳಾದ ಡಾ. ಮಂಜುನಾಥ್ ದೋಶೆಟ್ಟಿ, ಡಾ. ಆನಂದ್ ಶಂಕರ್ ಮತ್ತು ಡಾ.ಪೂರ್ಣಿಮಾ ತಡಕಲ್ ಅವರ ತಂಡ ನಿರ್ವಹಿಸಲಿದೆ.
ಅವರು ತಿಂಗಳಿಗೆ ಸುಮಾರು 1,000 ಡಯಾಲಿಸಿಸ್ ಸೆಷನ್‍ಗಳನ್ನು ಮತ್ತು 4ರಿಂದ 5 ಕಸಿಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆಸ್ಪತ್ರೆಯಲ್ಲಿ 60 ಹಾಸಿಗೆಗಳಿವೆ. ಇದರಲ್ಲಿ 12 ಐಸಿಯು ಹಾಸಿಗೆಗಳು ತೀವ್ರ ಅನಾರೋಗ್ಯದ ರೋಗಿಗಳಿಗೆ ಆರೈಕೆ ಒದಗಿಸುತ್ತವೆ. ಈ ಹೊಸ ಸೌಲಭ್ಯವು ಸ್ಥಳೀಯ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದಲ್ಲದೆ, ದೇಶದ ಪ್ರತಿ ಜಿಲ್ಲೆಯ ರೋಗಿಗಳಿಗೆ ಗುಣಮಟ್ಟದ ಡಯಾಲಿಸಿಸ್ ಸೇವೆಗಳನ್ನು ತರುವ ನೆಫೆÇ್ರೀಪ್ಲಸ್‍ನ ಬದ್ಧತೆಯನ್ನು ಬಲಪಡಿಸುತ್ತದೆ.
ನೆಫೆÇ್ರೀಪ್ಲಸ್‍ನ ಸಹ-ಸಂಸ್ಥಾಪಕ ಕಮಲ್ ಡಿ ಶಾ ಅವರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. `ಚಿರಾಯು ಆಸ್ಪತ್ರೆಯಲ್ಲಿ ನಮ್ಮ ದೊಡ್ಡ ಖಾಸಗಿ ಡಯಾಲಿಸಿಸ್ ಸೌಲಭ್ಯ ತೆರೆಯುತ್ತಿರುವುದು ನಮಗೆ ಸಂತಸವಾಗಿದೆ, ಈ ಸೌಲಭ್ಯವು ಕಲಬುರಗಿಯ ಜನರಿಗೆ ಗುಣಮಟ್ಟದ ಡಯಾಲಿಸಿಸ್ ಚಿಕಿತ್ಸೆಗೆ ಮತ್ತಷ್ಟು ಪ್ರವೇಶವನ್ನು ಹೆಚ್ಚಿಸುತ್ತದೆ. ನಮ್ಮ ಹೊಸ ಚಿಕಿತ್ಸಾಲಯದ ಆರಂಭದೊಂದಿಗೆ, ನೆಫೆÇ್ರೀಪ್ಲಸ್ ವಿಶ್ವದರ್ಜೆಯ ಡಯಾಲಿಸಿಸ್ ಆರೈಕೆಯನ್ನು ನೀಡುವ ಮೂಲಕ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಮೀಸಲಾಗಿದೆ. ಈ ಚಿಕಿತ್ಸಾಲಯವು ಆರೋಗ್ಯ ಮಾನದಂಡಗಳನ್ನು ಸುಧಾರಿಸುವ ಮತ್ತು ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ” ಎಂದರು.
ಚಿರಾಯು ಆಸ್ಪತ್ರೆಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಮತ್ತು ಸಹ ಸಂಸ್ಥಾಪಕ ಡಾ. ಮಂಜುನಾಥ್ ದೋಶೆಟ್ಟಿ ಮಾತನಾಡಿ, “ಈ ಹೊಸ ಸೌಲಭ್ಯವು ಈ ಪ್ರದೇಶಕ್ಕೆ ಸುಧಾರಿತ ಡಯಾಲಿಸಿಸ್ ಆರೈಕೆ ಒದಗಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ವೆಚ್ಚ ಹೆಚ್ಚಿಸದೆ ಅತ್ಯಾಧುನಿಕ ಗುಣಮಟ್ಟದ ಆರೈಕೆ ಒದಗಿಸುವುದು ನೆಫೆÇ್ರೀಪ್ಲಸ್‍ನ ಮೌಲ್ಯವಾಗಿದೆ.
ನೆಫೆÇ್ರೀಪ್ಲಸ್‍ನೊಂದಿಗಿನ ಈ ಸಹಯೋಗವು ನೆಫ್ರಾಲಜಿಸ್ಟ್‍ಗಳಿಗೆ ಹೆಚ್ಚು ಕೇಂದ್ರೀಕೃತ ಚಿಕಿತ್ಸಾತ್ಮಕ ಸಮಯವನ್ನು ನೀಡುವುದಲ್ಲದೆ, ಉತ್ತಮ ಆರೋಗ್ಯದ ಪ್ರಯಾಣದಲ್ಲಿ ರೋಗಿಗಳನ್ನು ಸಶಕ್ತಗೊಳಿಸುತ್ತದೆ” ಎಂದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…