ಶಹಾಬಾದ: ಕೋಲ್ಕತ್ತಾದ ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಶನಿವಾರ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ನೂರಾರು ಯುವಕರು ಕ್ಯಾಂಡಲ್ ಹಿಡಿದು ನಗರದ ನೆಹರು ವೃತ್ತ, ತ್ರಿಶೂಲ್ ವೃತ್ತ, ಶ್ರೀರಾಮ ವೃತ್ತ, ಲೋಹರ್ ಗಲ್ಲಿ, ಸುಭಾಷ ವೃತ್ತ, ಭಾರತ್ ಚೌಕ್, ರೇಲ್ವೆ ನಿಲ್ದಾಣದ ಮೂಲಕ ಮತ್ತೆ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಬಂದು ತಲುಪಿತು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಜಯಕುಮಾರ ಹಳ್ಳಿ ಮಾತನಾಡಿ, ಕೋಲ್ಕತ್ತಾದ ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯನ್ನು ಕಿಡಿಕೇಡಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಿಂದ ರಾತ್ರಿ ಕರ್ತವ್ಯ ಮತ್ತು ತುರ್ತು ವಿಭಾಗದ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರ ಸುರಕ್ಷತೆಯ ಆತಂಕ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರುಗಳ ಮೇಲೆ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಲ್ಲಿ ಪ್ರತಿಭಟನೆ ನಡೆಸುವವರಿಗೆ ರಕ್ಷಣೆ ಇಲ್ಲದಂದಾಗಿದೆ. ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು.ಮಹೀಲೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ಘೋರ ಕೃತ್ಯ. ಇಂತಹ ಕೃತ್ಯ ಎಂದಿಗೂ ನಡೆಯಬಾರದು.ಅಪರಾಧಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು.ವೈದ್ಯೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಿರಣಕುಮಾರ ಚವ್ಹಾಣ, ಮಹ್ಮದ್ ಮಸ್ತಾನ,ಕಾಶಿನಾಥ ಜೋಗಿ,ದತ್ತಾ ಫಂಡ್, ಕುಮಾರ ರಾಠೋಡ,ನಾಗಪ್ಪ ರಾಯಚೂರಕರ್, ರಾಹುಲ್ ಸಜ್ಜನ್, ಅಮೀತ್ ಹಳ್ಳಿ, ರಫಿಕ್ ಪಟೇಲ್, ಮತೀನ್ ಬಾದಲ್,ಶವiಸ್ ಮರ್ಚಂಟ್,ಮೆಹಬೂಬ ಪಟೇಲ್, ಸುನೀಲಕುಮಾರ, ಪ್ರದೀಪ ಸರಡಗಿ ಭಂಕೂರ, ಶಿವಕುಮಾರ ತಳವಾರ, ದಿಲೀಪ ನಾಯಕ, ಚಂದ್ರಕಾಂತ ನಿಜಾಮ ಬಜಾರ,ಯಲ್ಲಾಲಿಂಗ, ಅನೀಲ ದೊಡ್ಡಮನಿ ಇತರರು ಇದ್ದರು.