ಕಲಬುರಗಿ: ಸದ್ಗುರು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯಲ್ಲಿ, ಸ್ವಕುಳಸಾಳಿ ಸಮಾಜದ ಆರಾಧ್ಯದೈವ ಶ್ರೀ ಜಿವೇಶ್ವರ ರ ಜಯಂತಿ ಆಚರಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ನ್ಯಾಯವಾದಿ ಜೇನವೆರಿ ವಿನೋದಕುಮಾರ ಸ್ವಾಗತಿಸಿದರು.ಉದ್ಘಾಟಕರಾಗಿ ಆಗಮಿಸಿದ, ಜಿಲ್ಲಾ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ನಾರಾಯಣರಾವ ಸಿಂಘಾಡೆ ಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ನಗರದಲ್ಲಿ ಕಳೆದ ದಶಕದಿಂದ ಅಂದರೆ 2013 ರಲ್ಲಿ ರಾಜ್ಯ ನೇಕಾರ ಒಕ್ಕೂಟ ಹುಟ್ಟಿದ ನಂತರ ಅದರ ಮೂಲಕ ರಾಜ್ಯಾದ್ಯಂತ ನೇಕಾರರ ಜಾಗ್ರತಿ, ಪ್ರಚಾರದಿಂದ ಸಪ್ತ ನೇಕಾರ ಸಮಾಜಗಳಲ್ಲಿ ಸಂಘಟನೆ ಮೂಡುತ್ತಿದೆ. ಶೈಕ್ಷಣಿಕವಾಗಿ ಮುಂದೆ ಬಂದ ಸಮಾಜ ಭಾಂದವರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದರೆ ಮತ್ತೆ ದಾಸಿಮಯ್ಯ ನವರಂತೆ ಹೊಸ ಕ್ರಾಂತಿಗೆ ಮುನ್ನಡಿ ಬರೆಯಬಹುದು ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯವಸ್ಥಾಪಕರಾದ ಶ್ರೀ ಜಗದೀಶ ಬಿರಾದಾರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ನಂತರ ಅತಿಥಿಗಳಾಗಿ ಭಾಗವಹಿಸಿದ, ಸಮಾಜ ಚಿಂತಕ ಪ್ರೊ. ಬಸವರಾಜ ರಾವೂರ ಮಾತನಾಡಿ ವಿವಸ್ತ್ರ ದಿಂದ ವಸ್ತ್ರದಡೆಗೆ ಸೇವೆ ಸಲ್ಲಿಸಿದ ಎಲ್ಲಾ ನೇಕಾರ ಶರಣರ ಕೃಪೆಯಿಂದ ನಾವುಗಳು ಮಾನ ಮರ್ಯಾದೆಯಿಂದ ಇರಲು ಸಾದ್ಯವಾಗಿದೆ, ಇನ್ನೂ ರಾಜಕೀಯವಾಗಿ ತಮ್ಮ ಹಕ್ಕು ಪಡೆಯಲು ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಮಾತನಾಡಿ ಧಾರ್ಮಿಕವಾಗಿ ಒಗ್ಗೂಡಲು ರಾಜ್ಯ ಸರಕಾರ ಎರಡು ಜಯಂತಿ ಘೋಷಣೆ ಮಾಡಿ, ಆದೇಶಿಸಿದೆ, ಒಂದು ದಾಸಿಮಯ್ಯ ಜಯಂತಿ ಇನ್ನೊಂದು ಫ.ಗು ಹಳಕಟ್ಟಿ ಜಯಂತಿ ಮತ್ತು ಕೇಂದ್ರ ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನ ಇವುಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಲು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಜಯಂತಿ ಕಾರ್ಯಕ್ರಮದಲ್ಲಿ ವೆಂಕಟೇಶ್ ದೊರೆಪಲ್ಲಿ ಹಾಗೂ ಇತರರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…