ವಾಡಿ:ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ,
ಸಮಾಜದಲ್ಲಿರುವ ಅಸಮಾನತೆ, ಬಡವ ಶ್ರೀಮಂತರ ನಡುವಿನ ವ್ಯತ್ಯಾಸದ ಕುರಿತು ಯೋಚಿಸುತ್ತಿದ್ದ ಗುರುಗಳು ಕಾಯಕಕ್ಕೆ ಮಹತ್ವ ಕೊಡಬೇಕು ಎಂದು ಸಾರಿದರು.
ಧನಾತ್ಮಕ ಚಿಂತನೆಯ ಮೂಲಕ ವ್ಯಕ್ತಿ ಉನ್ನತವಾದ ಸ್ಥಾನ ಪಡೆಯಲು ಸಾಧ್ಯ ಎಂಬುದಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳೇ ಸಾಕ್ಷಿಯಾಗಿವೆ.ಸಂಘರ್ಷದಿಂದ ಯಾವುದೇ ಕೆಲಸಗಳು ಸಾಧ್ಯವಿಲ್ಲ,ಸಾಧನೆಯಿಂದ , ಸಂಘಟನೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂದು ನಾರಾಯಣ ಗುರುಗಳ ಜೀವನ ಚರಿತ್ರೆ ನಮಗೆ ಹೇಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಸಿ ಮೂರ್ಚಾದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ,ಶರಣಗೌಡ ಚಾಮನೂರ, ಅರ್ಜುನ ಕಾಳೆಕರ,ಅಶೋಕ ಹರನಾಳ, ಮಲ್ಲಿಕಾರ್ಜುನ ಸಾತಖೇಡ,ಯಂಕಮ್ಮ ಗೌಡಗಾಂವ, ಆನಂದ ಇಂಗಳಗಿ,ಸಂಜಯ ಗಾಯಕವಾಡ,ಆನಂದ ಶಿರವಾಳ,ಮಹೇಶ್ ಹಳಕಟ್ಟಿ, ಸಲೀಮ್ ರಾವೂರ ಸೇರಿದಂತೆ ಇತರರು ಇದ್ದರು.