ಶಹಾಪುರ : ತಾಲೂಕಿನ ಸಗರ ಗ್ರಾಮದಿಂದ ಶಾರದಹಳ್ಳಿಗೆ ಕೂಡುವ ಸಂಪರ್ಕ ರಸ್ತೆ,ಸಂಪೂರ್ಣ ಜಾಲಿ ಮುಳ್ಳು ಕಂಟಿಗಳಿಂದ ರಸ್ತೆ ಆವರಿಸಿಕೊಂಡಿದ್ದು ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ.
ರಾತ್ರಿ ಆಗುತ್ತಿದ್ದಂತೆ ಎದುರುಗಡೆಯಿಂದ ಬರುವ ವಾಹನಗಳು ಸಂಪೂರ್ಣ ಕಣ್ಣಿಗೆ ಕಾಣುವುದಿಲ್ಲ, ಅತಿ ಹೆಚ್ಚು ಅಪಘಾತ ಆಗುವ ಸಂಭವವಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯವರು,ಎಚ್ಚೆತ್ತುಕೊಂಡು ರಸ್ತೆ ಮೇಲೆ ಆವರಿಸಿಕೊಂಡಿರುವ ಜಾಲಿ ಗಿಡದ ಮುಳ್ಳು ಕಂಟಿಗಳು ಸ್ವಚ್ಛತೆಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ರಸ್ತೆಯ ಎಡ ಮತ್ತು ಬಲ ಭಾಗಕ್ಕೆ ಸ್ವಚ್ಛತೆ ಮಾಡಿ,ಅರಣ್ಯ ಇಲಾಖೆ ವತಿಯಿಂದ ಗಿಡ ಮರಗಳು ನೆಟ್ಟು ಘೋಷಣೆ ಮಾಡಿದರೆ ಪರಿಸರ ಉಳಿಸಿದಂತಾಗುತ್ತದೆ,ಜೊತೆಗೆ ರಸ್ತೆ ಕೂಡ ಸ್ವಚ್ಛತೆ ಕಾಪಾಡಿದಂತಾಗುತ್ತದೆ ಎಂದು ಪರಿಸರ ಪ್ರೇಮಿ ಶಿವಬಸಪ್ಪ ಸಗರ ಒತ್ತಾಯಿಸಿದ್ದಾರೆ.