ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 113ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮುಖಂಡರು ವೀಕ್ಷಿಸಿದರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ,ಪ್ರಧಾನಿ ಮೋದಿ ಜಿ ಅವರು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಬಗ್ಗೆ, ತಂತ್ರಜ್ಞಾನದಿಂದ ದೇಶಕ್ಕೆ ಆಗಿರುವ ಲಾಭಗಳ ಬಗ್ಗೆ,ಯುವಕರು ಸಾಧನೆಗಳ ಬಗ್ಗೆ ವಿಸ್ತೃತವಾಗಿ ಹೇಳಿದ್ದಾರೆ.
ರಾಜಕೀಯದಲ್ಲಿ ಯುವಕರ ಉತ್ಸಾಹ ಇಮ್ಮಡಿಸುವ ವುದರ ಜೊತೆಗೆ ತಮ್ಮ ಶ್ರೇಷ್ಠ ಭಾರತದ ಪರಿಕಲ್ಪನೆ ನಮಗೆ ನೀಡಿದರು.
ಹರ್ ಘರ್ ತ್ರಿವರ್ಣ ಅಭಿಯಾನದಲ್ಲಿ ನಮ್ಮೆಲ್ಲರ ಸಕ್ರಿಯತೆ ಅವರಿಗೆ ಖುಷಿ ತಂದಿದೆ. ಅವರಲ್ಲಿನ ದೇಶದ ಶ್ರೇಯೋಭಿವೃದ್ಧಿ ಕನಸಿಗೆ ನಾವೆಲ್ಲರೂ ಒಮ್ಮನಸ್ಸಿನಿಂದ ಶ್ರಮಿಸಿಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ,ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಹರಿ ಗಲಾಂಡೆ, ಅರ್ಜುನ ಕಾಳೆಕರ,ಮಲ್ಲಿಕಾರ್ಜುನ ಸಾತಖೇಡ, ನಾಗರಾಜಗೌಡ ಗೌಡಪ್ಪನೂರ,ರಾಜು ಪವಾರ,
ಆನಂದ ಶಿರವಾಳ,ಮಲ್ಲು ಪಾಟೀಲ,ನಾಗರಾಜ ರಂಜೊಳ್ಳಿ,ಆಕಾಶ ಜಾಧವ,ರವಿ ರಾಠೋಡ,ಧನ್ನು ಜಾಧವ, ರಾಮು ರಾಠೋಡ ಇದ್ದರು.