ಅಲ್ಟಾಟೇಕ್ ಸಿಮೆಂಟ್ ಕಂಪೆನಿಯಿಂದ ಸಾರ್ವಜನಿಕ ಸಭೆ; ದಲ್ಲಾಳಿಗಳ ಕಡಿವಾಣಕ್ಕೆ ಆಗ್ರಹ

0
97

ಚಿತ್ತಾಪುರ: ಅಲ್ಟ್ರಾಟೇಕ್ ಸಿಮೆಂಟ್ ಲಿಮಿಟೆಡ್ ಕಂಪೆನಿಯವರು ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ವ್ಯಾಪ್ತಿಯಲ್ಲಿ ಸುಣ್ಣದ ಗಣಿಗಾರಿಕೆ ಸ್ಥಾಪಿಸಲು ರೈತರಿಂದ ೭೮೬.೩೨ ಹೇಕ್ಟರ್ ಪ್ರದೇಶದ ಜಮೀನು ಖರೀದಿ ಮಾಡುವಾಗ ದಲ್ಲಾಳಿಗಳಿಂದ ದೂರವಿಟ್ಟು ಕಂಪನಿಯವರು ನೇರವಾಗಿ ರೈತರನ್ನು ಸಂಪರ್ಕ ಮಾಡಿ ಭೂಮಿಯನ್ನು ಖರೀದಿ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಲಬುರಗಿ ವತಿಯಿಂದ ಮೆ.ಅಲ್ಟಾಟೇಕ್ ಸಿಮೆಂಟ್ ಲಿಮಿಟೆಡ್ (ಘಟಕ ರಾಜಶ್ರೀ ಸಿಮೆಂಟ್ ವರ್ಕ್ಸ್) ವತಿಯಿಂದ ದಿಗ್ಗಾಂವ ಗ್ರಾಮದ ಒಟ್ಟು ೭೮೬.೩೨ ಹೇಕ್ಟರ್ ಪ್ರದೇಶದಲ್ಲಿ ಕೈಗೊಳ್ಳುವ ಗಣಿಗಾರಿಕೆ ಯೋಜನೆ ಸ್ಥಾಪನೆಯ ಪ್ರಸ್ತಾವನೆ ಕುರಿತು ನಡೆದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ದಿಗ್ಗಾಂಗ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವರುದ್ರ ಭೀಣಿ ಮಾತನಾಡಿ, ರೈತರು ಸುಣ್ಣದ ಗಣಿಗಾರಿಕೆಗೆ ಈ ಭಾಗದ ರೈತರು ಭೂಮಿ ಕೊಡಲು ಸಿದ್ದಸಿದ್ದಾರೆ ಆದರೆ ಇಲ್ಲಿ ದಲ್ಲಾಳಿಗಳ ಮೂಲಕ ರೈತರ ಭೂಮಿ ಖರೀದಿ ಮಾಡದೇ ನೇರವಾಗಿ ರೈತರನ್ನು ಸಂಪರ್ಕಿಸಿ ಭೂಮಿ ಖರೀದ ಮಾಡುವ ಮೂಲಕ ಸರ್ವೆ ನಂಬರಿಗೆ ಒಬ್ಬರಿಗೆ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಗ್ರಪಂ ಅಧ್ಯಕ್ಷ ಹರಳಯ್ಯ ಬಡಿಗೇರ್ ಮಾತನಾಡಿ, ಗ್ರಾಮದ ರೈತರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು, ಪ್ರಮುಖ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕು ಹಾಗೂ ಗ್ರಾಮದ ರಸ್ತೆಗಳಲ್ಲಿ ಸಸಿಗಳನ್ನು ನೆಟ್ಟು ಉತ್ತಮ ಪರಿಸರ ಕಾಪಾಡಬೇಕು ಎಂದು ಹೇಳಿದರು.

ರೈತರಾದ ಸಿದ್ದಣ್ಣಗೌಡ ಪೊಲೀಸ್ ಪಾಟೀಲ, ವೆಂಕಟೇಶ ಕಟ್ಟಿಮನಿ, ಚನ್ನವೀರ ಕಣಗಿ, ಶ್ರೀಮಂತ ಗುತ್ತೇದಾರ, ಶ್ರೀಶೈಲ್ ಪಾಟೀಲ, ಶಾಮರಾವ ಸಂಗಾವಿ, ಭೀಮರಾಯ ದೇವರ್, ಜಗದೀಶ ಚವ್ಹಾಣ, ಗುರುಲಿಂಗಪ್ಪ ಬಂದಳ್ಳಿ, ಇಮ್ಯಾವೆಲ್ ಡೇವಿಡ್, ರಮೇಶ ಹಡಪದ, ಬಾಬುರಾವ ಪಾಟೀಲ ದಿಗ್ಗಾಂವ, ದೊಡ್ಡಪ್ಪ, ಶಿವರಾಜ ವಿಶ್ವಕರ್ಮ, ನಾಗರಾಜ್ ಅವರು ಮಾತನಾಡಿ, ದಿಗ್ಗಾಂವ ಗ್ರಾಮ ದತ್ತು ತೆಗೆದುಕೊಳ್ಳಬೇಕು, ಶಂಭುಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಪಡಿಸಬೇಕು, ಸಾಮೂಹಿಕ ಶೌಚಾಲಯ, ರುದ್ರಭೂಮಿ, ಸ್ಥಳೀಯರಿಗೆ ಉದ್ಯೋಗದ ಅವಕಾಶ ನೀಡಬೇಕು, ಶುದ್ದ ಕುಡಿಯುವ ನೀರಿನ ಸೌಲಭ್ಯ ನೀಡಬೇಕು, ಭೂಮಿ ಕಳೆದುಕೊಂಡ ರೈತರಿಗೆ ಬೇರೆಕಡೆ ೩ ಎಕರೆ ಭೂಮಿ ಮಂಜೂರು ಮಾಡಬೇಕು ಹಾಗೂ ಪ್ರತಿ ರೈತರಿಗೆ ಆಕಳು ನೀಡಬೇಕು ಎಂದು ಒತ್ತಾಯಿಸಿದರು.

ಕಂಪೆನಿಯ ಮುಖ್ಯಸ್ಥ ಕೆ.ಬಿ.ರೆಡ್ಡಿ ಮಾತನಾಡಿ, ಸುಣ್ಣದ ಗಣಿಕಾರಿಯನ್ನು ಸ್ಥಾಪಿಸಲು ಸರಕಾರದ ವತಿಯಿಂದ ಅನುಮತಿ ಪಡೆಯಲಾಗಿದ್ದು ಈ ಭಾಗದ ರೈತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು, ಪರಿಸರ ಹಾನಿಯಾಗದಂತೆ ಸಸಿಗಳನ್ನು ನೆಡಲಾಗುವುದು ಈ ನಿಟ್ಟಿನಲ್ಲಿ ಗ್ರಾಮದ ಅಭಿವೃದ್ದಿಗೆ ಬೇಕಾದ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಮಾತನಾಡಿ, ಸುಣ್ಣದ ಗಣಿಗಾರಿಕೆ ಸ್ಥಾಪನೆಗೆ ರೈತರು ಮುಕ್ತವಾಗಿ ಅಭಿಪ್ರಾಯ ನೀಡುವುದು ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ, ಹೀಗಾಗಿ ಸಭೆಯಲ್ಲಿ ಸಲ್ಲಿಕೆಯಾದ ರೈತರ ಅಭಿಪ್ರಾಯಗಳ್ನು ಸಂಗ್ರಹಿಸಿ ಸಮಗ್ರ ವರದಿ ತಯ್ಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಪರಿಸರ ಇಲಾಖೆ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ರವಿಕುಮಾರ ಮಾಹಿತಿ ನೀಡಿದರು. ತಹಸೀಲ್ದಾರ ಅಮರೇಶ ಬಿರಾದಾರ, ಕಂಪೆನಿ ಅಧ್ಯಕ್ಷ ಉದಯ ಪವಾರ, ಉಪಾಧ್ಯಕ್ಷ ನಾರಾಯಣ, ಸೋಮಶೇಖರ, ಶರಣಪ್ಪ ಮರಗೋಳ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ್ ಲಾಡೆ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚೇತನ್ ಪೂಜಾರಿ, ತಿರುಮಲೇಶ ಕುಂಬಾರ ಸೇರಿದಂತೆ ಕಂಪನಿಯ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here