ಕಲಬುರಗಿ: ಮಹಿಳಾ ಹರಿದಾಸ ಸಾಹಿತ್ಯ ಅತ್ಯಂತ ಕಡೆಗಣಿಸಲ್ಪಟ್ಟ ಸಾಹಿತ್ಯವಾಗಿದ್ದು, ಮಹಿಳಾ ಹರಿದಾಸರ ಕೀರ್ತನೆಗಳ ಆಳವಾದ ಅಧ್ಯಯನದ ಅವಶ್ಯಕತೆ ಇದೆ ಎಂದು ಹರಿದಾಸ ಸಾಹಿತ್ಯ ವಿದ್ವಾಂಸ ಗುಂಡೂರು ಪವನಕುಮಾರ ಅವರು ಹೇಳಿದರು.
ಮಹಿಳಾ ಹರಿದಾಸರ ಸಮಗ್ರ ಸಾಹಿತ್ಯವನ್ನು ಪ್ರತ್ಯೇಕವಾಗಿ ಮುದ್ರಿಸಿದರೆ ಸುಮಾರು 100 ಸಂಪುಟಗಳಾಗುವಷ್ಟು ಸಮೃದ್ಧ ಸಾಹಿತ್ಯವಾಗುತ್ತದೆ ಎಂದರು.
ದಾಸ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಲಬುರಗಿ ವತಿಯಿಂದ ಆಯೋಜಿಸಿದ ಲಕ್ಷ್ಮೀಬಾಯಿ ಕೃಷ್ಟಾಚಾರ್ ಜೋಶಿ ಗುಡುಗುಂಟಿ ಇವರ ಸ್ಮರಣಾರ್ಥ ದತ್ತಿಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗುಂಡೂರು ಪವನಕುಮಾರ ಮಾತನಾಡಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೃಷ್ಣನ ಭಕ್ತಿಯ ಕುರಿತು ಹಾಗೂ ಕೃಷ್ಣಪ್ರಜ್ಞೆಯ ಕುರಿತು ಭಾವಪ್ರಪಂಚಕ್ಕೆ ಕರೆದೊಯ್ಯಬಲ್ಲ ಅದ್ಭುತ ಸಾಹಿತ್ಯವನ್ನು ಮಹಿಳಾ ಹರಿದಾಸರು ರಚನೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಗಲಗಲಿ ಅವ್ವ, ಹರಪನಹಳ್ಳಿ ಭೀಮವ್ವ, ಹೆಳವನಕಟ್ಟೆ ಗಿರಿಯಮ್ಮ, ನಿಡಗುರಕಿ ಜೀವೂಬಾಯಿ ಮೊದಲಾದ ಮಹಿಳಾ ಹರಿದಾಸರ ಕೀರ್ತನೆಗಳ ಅಧ್ಯಯನ, ಪ್ರಕಟನೆ ಮಾಡುವ ಕಾಲ ಸನ್ನಿಹಿತವಾಗಿದೆ ಎಂದರು.
ಮಹಿಳಾ ಹರಿದಾಸರ ವ್ಯಯಕ್ತಿಕ ಬದುಕು ಅತ್ಯಂತ ಕಷ್ಟಕರವಾಗಿದ್ದರೂ ಅವರ ಬಡತನ ಇತ್ಯಾದಿಗಳ ಅಡೆತಡೆಗಳ ಹೊರತಾಗಿ ಅದ್ಭುತವಾದ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಜೀವನ ಇಂದಿನ ನವ ಯುವಕ- ಯುವತಿಯರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ರಂಗಾಯಣದ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿಯವರು ಇಂದಿನ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಯಶಸ್ಸಿನ ತುದಿ ಮುಟ್ಟುತ್ತಿದ್ದಾಳೆ, ಅವಳಿಗೆ ಸಮಾಜದ ಸ್ವಲ್ಪ ಸಹಕಾರ ಸಿಕ್ಕರೂ ಸಾಕು ದೊಡ್ಡ ದೊಡ್ಡ ಕೆಲಸಗಳನ್ನು ಮಾಡಬಹುದು ಎಂದು ತಿಳಿಸಿದರು. ಅಕ್ಕಮಹಾದೇವಿ, ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರ ಬದುಕು, ಸಾಹಿತ್ಯ ಹಾಗೂ ಸಾಧನೆ ಕುರಿತು ಹೆಚ್ಚು ವ್ಯಾಪಕವಾಗಿ ಚರ್ಚೆಯಾಗಬೇಕು ಎಂದು ತಿಳಿಸಿದರು.
ಕಲಬುರಗಿ ರಂಗಾಯಣ ನಿತ್ಯ ನೂತನ, ಪ್ರಯೋಗಶೀಲ ಸಂಸ್ಥೆಯಾಗಿದ್ದು ದಾಸ ಸಾಹಿತ್ಯ, ವಚನ ಸಾಹಿತ್ಯ, ಜನಪದ ಸಾಹಿತ್ಯ ಮೊದಲಾದ ಪ್ರಕಾರಗಳ ಪ್ರೇರಣೆಯಿಂದ ಅನೇಕ ನಾಟಕಗಳನ್ನು ರಚನೆ ಮಾಡಿ ಪ್ರದರ್ಶಿಸುವ ಪ್ರಯತ್ನ ಮಾಡಲಾಗುವುದು ಎಂಬ ಆಶ್ವಾಸನೆ ನೀಡಿದರು.
ದತ್ತಿ ದಾನಿಗಳು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಮ್ಮ ಬಾಲ್ಯದಲ್ಲಿ ಸಾಕಿ ಸಲುಹಿದ ಅವರ ಆಯಿ ( ತಾಯಿಯ ತಾಯಿ) ಯ ವಾತ್ಸಲ್ಯಕ್ಕೆ ತಮ್ಮ ಕಿಂಚಿತ್ ಋಣವನ್ನು ಈ ದತ್ತಿ ಸ್ಥಾಪಿಸುವ ಮೂಲಕ ತೀರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿಯವರು ಅಧ್ಯಕ್ಷೀಯ ನುಡಿಗಳನ್ನಾಡಿ ದಾಸ ಸಾಹಿತ್ಯ ಮಡಿವಂತಿಕೆ ಸಾಹಿತ್ಯ ಅಲ್ಲ, ಕೇವಲ ಒಂದು ಸಮುದಾಯಕ್ಕೆ ಸೇರಿದ ಸಾಹಿತ್ಯವಲ್ಲ, ಅದು ಸಮಾಜದ ಎಲ್ಲಾ ವರ್ಗದವರಿಗೂ ಸೇರಿದ್ದು ಎಂದು ತಿಳಿಸಿದರು.
ಕುಮಾರಿ ಶ್ರೀಲಕ್ಷ್ಮೀ ದೇಶಪಾಂಡೆ ಪ್ರಾರ್ಥಿಸಿದರು, ವ್ಯಾಸರಾಜ ಸಂತೆಕೆಲ್ಲೂರ ಅತಿಥಿಗಳನ್ನು ಪರಿಚಯಿಸಿದರು, ಪ್ರತಿಷ್ಠಾನದ ಕಾರ್ಯದರ್ಶಿಗಳಾದ ನಾರಾಯಣ ಕುಲಕರ್ಣಿ ವಂದಿಸಿದರು, ಸಂಜೀವ ಸಿರನೂರಕರ್ ನಿರೂಪಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…