ಹಟಗಾರ ಸಾಂಸ್ಕøತಿಕ ಭವನಕ್ಕೆ 30 ಲಕ್ಷ ರೂ ಅನುದಾನ ಭರವಸೆ: ಶಾಸಕ ಅಲ್ಲಮಪ್ರಭು

0
95

ಕಲಬುರಗಿ: ಜಿಲ್ಲೆಯ ಹಟಗಾರ ಸಮುದಾಯದವರು ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಸಂಯೋಜಿಸಲು ಸಾಂಸ್ಕøತಿಕ ಭವನ ನಿರ್ಮಾಣಕ್ಕಾಗಿ ತಕ್ಷಣವೇ 30 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಭರವಸೆ ನೀಡಿದರು.

ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಭವನದಲ್ಲಿ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ-2024 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ಕರುÀಣೇಶ್ವರ ನಗರದಲ್ಲಿ ಹಟಗಾರ ಸಮಾಜದ ನಿವೇಶನಯಿದ್ದು, ಅದರಲ್ಲಿ ಸಾಂಸ್ಕøತಿಕ ಭವನ ನಿರ್ಮಾಣ ಮಾಡುವಲ್ಲಿ ಸಕಲ ಕಾರ್ಯಗಳಿಗೆ ಕೈ ಜೋಡಿಸುವೆ. ಅದಕ್ಕಾಗಿ ಬೇಕಾಗಿದ್ದ ಅನುದಾನ ಕೊರತೆಯನ್ನು ನೀಗಿಸುವೆ ಎಂದು ಅವರು ತಿಳಿಸಿದರು.

ಹಟಗಾರ ಸಮಾಜ ಬಲವರ್ಧನೆಗೆ ರಾಜಕೀಯವಾಗಿ, ಸಾಮಾಜಿಕವಾಗಿ ಅಷ್ಟು ಬಲವಿಲ್ಲದಿದ್ದರೂ, ಪ್ರಪಂಚಕ್ಕೆ ಮಾನ ಮುಚ್ಚುವ ನೇಕಾರರು ದೇಶಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ. ನೇಕಾರ ಸಮುದಾಯವರು ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ನೇಕಾರರ ಆತ್ಮವಿಶ್ವಾಸಕ್ಕೆ ಕುಂದು ಬರದೆ ಇರುವ ರೀತಿಯಲ್ಲಿ ಸರಕಾರ ಅವರ ಜೊತೆಗಿದೆ ಎಂದು ಅವರು ವಿವರಿಸಿದರು.

ಮುಧೋಳ ಎಸ್.ಆರ್.ಕಂಠಿ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಲೋಚನಾ ಪಿ.ಚಂದಾ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಪಾಲಕರು ಮನೆಯಲ್ಲಿ ಲಿಂಗ ತಾರತಮ್ಯ ಮಾಡಬಾರದು, ಹೆಣ್ಣು ಮಕ್ಕಳಿಗೆ ಗೌರವ ಸಿಗುವ ಕುಟುಂಬ ಸಮೃದ್ಧವಾಗಿರುತ್ತದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿದರೆ, ನಿವೃತ್ತ ಜೀವನವನ್ನು ಆನಂದಮಯವಾಗಿ ಕಳೆಯಬಹುದು. ಆಚಾರ, ವಿಚಾರ, ಸಂಸ್ಕøತಿಯ ಆಚರಣೆಗಳಿಂದ ಗರ್ಭಾವಸ್ಥೆಯಲ್ಲಿರುವ ಮಗುವಿನ ಭವಿಷ್ಯವನ್ನು ಕೂಡ ತಾಯಿ ಬರೆಯಬಹುದು. ಸಮಾಜದ ಜನ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ವಿವರಿಸಿದರು.

ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ ಗಣೇಶ ಸಂಗಾ ಅವರು ಮಾತನಾಡಿ, ನೇಕಾರ ಸಮುದಾಯದವರು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಒಕ್ಕೂಟ ನಿರಂತರವಾಗಿ ಶ್ರಮಿಸಲಿದೆ. ಒಕ್ಕೂಟ ತನ್ನ ಕಾರ್ಯಕ್ಷಮತೆಯನ್ನು ನೇಕಾರ ಬಾಂಧವರಿಗೆ ಮೀಸಲಿದೆ ಎಂದರು. ಸಸ್ತಾಪುರ ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಮಠದ ಡಾ.ಈಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಚನಮಲ್ಲಪ್ಪ ನಿಂಬೇಣಿ ಅಧ್ಯಕ್ಷತೆ ವಹಿಸಿದ್ದರು.

ಮಾಜ ಸೇವಕರಾದ ನಾಗಮ್ಮ ಗೊಬ್ಬೂರ, ಶಿವಶಂಕರ ಮುನ್ನೋಳ್ಳಿ, ರಾಚಪ್ಪ ಚಂದಾ, ಡಾ.ಬಸವರಾಜ ಚನ್ನಾ, ವಿಜಯಕುಮಾರ ಎಂ.ಮೇತ್ರೆ ಅವರಿಗೆ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಸಂಚಾಲಕರಾದ ಸೋಮಶೇಖರ ಧುತ್ತರಗಿ, ಗೌರವಾಧ್ಯಕ್ಷ ಶಿವಪುತ್ರಪ್ಪ ಭಾವಿ ವೇದಿಕೆ ಮೇಲಿದ್ದರು. ಆರಂಭದಲ್ಲಿ ಸೃಜನಾ, ಸಂಪದಾ ಪ್ರಾರ್ಥನೆ ಹಾಡಿದರು. ಸಂಘಟನಾ ಕಾರ್ಯದರ್ಶಿ ರಾವಬಹಾದ್ದರೂ ರೂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಸಂಗಮನಾಥ ರೇವತಗಾಂವ ನಿರೂಪಿಸಿದರು. ಶಿವಲಿಂಗಪ್ಪ ಆಲಮದ ವಂದಿಸಿದರು.

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವತ್ತು ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಪ್ರಭು ಪಾಟೀಲ ಅವರು ಪುರಸ್ಕರಿಸಿ ಸನ್ಮಾನಿಸಿದರು. ವಿವಿಧ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ನಿವೃತ್ತ ನೌಕರರಿಗೆ, ಅಧಿಕಾರಿಗಳಿಗೆ, ಸಾಧಕ ವೈದ್ಯರಿಗೆ, ಬಾಲ ಪ್ರತಿಭೆಗಳಿಗೆ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here