ಇಂಡಿ: ಅಂದಿನ ಬಸವಾದಿ ಶರಣರು ವರ್ಗ,ಜಾತಿ,ವರ್ಣ, ಲಿಂಗಭೇದವಿಲ್ಲದೆ ಅರಿವು ಮೂಡಿಸಿ,ಹಲವಾರು ಮೌಡ್ಯ ಕಂದಾಚಾರ ವ್ಯವಸ್ಥೆಯನ್ನು ಸರಿಪಡಿಸಿ,ನೊಂದವರಿಗೆ ಶೋಷಿತರಿಗೆ ಬೆಳಕು ನೀಡಿ ಬದುಕನ್ನು ಕಟ್ಟಿಕೊಟ್ಟಿದ್ದು ಇದೇ ಶರಣರ ವಚನ ಸಾಹಿತ್ಯ ಎಂದು ಶೃತಿ ಪತ್ತಾರ ಹೇಳಿದರು
ನಗರದ ಮಹಾವೀರ್ ಟಾಕೀಸ್ ಹತ್ತಿರ ಇರುವ ಸಭಾಂಗಣದಲ್ಲಿ ಶಿರಶ್ಯಾಡದ ಗಡಿನಾಡು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವುಗಳ ಪ್ರಾಯೋಜಕತ್ವದಲ್ಲಿ ವಚನ ವೈಭವ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾದ,ಚನ್ನಬಸವ ಮಾತನಾಡಿ 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ ಮಾನವ ಕುಲಕ್ಕೆ ದಾರಿದೀಪವಾದ ವಚನ ಸಾಹಿತ್ಯ ಇಂದಿಗೂ ಸರ್ವ ಶ್ರೇಷ್ಠವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಮತ್ತು ತಂಡದವರಿಂದ ಸಮೂಹ ಭರತನಾಟ್ಯ,ಸಂತೋಷ ಸುತಾರ ಮತ್ತು ತಂಡದವರಿಂದ ಸಮೂಹ ನೃತ್ಯ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು ಸಮಾರಂಭದ ವೇದಿಕೆಯ ಮೇಲೆ, ಟ್ರಸ್ಟಿನ ಅಧ್ಯಕ್ಷರಾದ ದಾನಮ್ಮ, ಅರುಣ್ ಸಿಂಗ್,ಲಕ್ಮಿ ಕೆ. ಇರದಂತೆ ಇತರರು ಹಾಜರಿದ್ದರು.ನವೀನ ನಿರೂಪಿಸಿ ಸ್ವಾಗತಿಸಿದರೆ, ಶಿವು ಹೊಂದಿಸಿದರು.