ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಾಣು ಜೀವಿಯಾಗಿದ್ದು, ದ್ವಿದಳ ಧಾನ್ಯಗಳ ಬೇರಿನಲ್ಲಿ ಗಂಟುಗಳನ್ನು ಮಾಡಿ ನೆಲಸಿ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರಿಕರಿಸಿ ಬೆಳೆಗಳಿಗೆ ಒದಗಿಸುತ್ತದೆ.
ಇದನ್ನು ಎಲ್ಲಾ ರೀತಿಯ ದ್ವಿದಳ ಧಾನ್ಯ ಬೆಳೆಗಳಿಗೆ ಉಪಯೋಗಿಸಬಹುದಾಗಿದ್ದು, ಪ್ರತಿ ದ್ವಿದಳ ಧಾನ್ಯ ಬೆಳೆಗಳಗೆ ಸೂಕ್ತವಾದ ರೈಜೋಬಿಯಂ ಪ್ರಬೇಧವನ್ನು ಮಾತ್ರ ಉಪಯೋಗಿಸಬೇಕು. ರೈಜೋಬಿಯಂ ಮತ್ತು ದ್ವಿದಳ ಧಾನ್ಯ ಸಹಯೋಗದಿಂದ ಒಂದು ಬೆಳೆಯ ಕಾಲಾವಧಿಯಲ್ಲಿ ಶೇ. 30 ರಿಂದ 40 ರಷ್ಟು ಸಾರಜನಕ ಲಭ್ಯವಾಗುತ್ತದೆ. ಅಂದರೆ ಪ್ರತಿ ಎಕರೆಗೆ 15-18 ಕೆ.ಜಿ. ಸಾರಜನಕ ದೊರೆಯುತ್ತದೆ.
ಇದಲ್ಲದೆ ಉಪಚರಿಸಿದ ಬೆಳೆಯ ಕೊಯ್ಲಿನ ನಂತರ ಬೇರಿನ ಗಂಟುಗಳು ಕರಗಿ 5-8 ಕೆ.ಜಿ ಹೆಚ್ಚಿನ ಸಾರಜನಕ ನಂತರದ ಬೆಳೆಗಳಿಗೆ ದೊರೆಯುತ್ತದೆ. ಸೂಕ್ಷ್ಮಾಣು ಜೀವಿಯು ಮಣ್ಣಿನಲ್ಲಿ ಸ್ವತಂತ್ರವಾಗಿ ಜೀವಿಸಿ ಸಾರಜನಕವನ್ನು ಸ್ಥಿರಿಕರಿಸುತ್ತದೆ.
ಜೊತೆಗೆ ಬೆಳೆಗಳ ಬೆಳವಣಿಗೆಯನ್ನು ಉತ್ತೇಜಿಸುವ ವಸ್ತಗಳಾದ ಜಿಬ್ರಲಿನ್, ಸೈಟೊಕೈನಿನ್ ಹಾಗೂ ಹಲವಾರು ವಿಟಮಿನ್ಗಳನ್ನು ಉತ್ಪಾದಿಸುವುದರಿಂದ ಸನ್ಯಗಳು ರೊಗ ನೀರೋಧಕ ಶಕ್ತಿಯನ್ನು ಹೊಂದುವುದಲ್ಲದೆ, ಇಳುವರಿಯು ಸಹ ಹೆಚ್ಚಾಗುತ್ತದೆ ಹಾಗೂ ಗಿಡಗಳು, ಮಣ್ಣಿನ ಮತ್ತು ವಾಣಿಜ್ಯ ಬೆಳೆಗಳಿಗೆ ಉಪಯೋಸಬಹುದು, ಇದರ ಉಪಯೋಗದಿಂದ ಪ್ರತಿ ಹೆಕ್ಟೇರಿಗೆ 18-20 ಕೆ.ಜಿ ಸಾರಜನಕ ಒದಗಿಸಬಹುದಾಗಿದೆ.
ಸೂಕ್ಷಾಣು ಜೀವಿಗಳಾದ ಬ್ಯಾಸಿಲಸ್, ಮೆಗಾಥಿರಿಯಂ, ಸೂಡೋಮೋನಾಸ್ ಸ್ಟ್ರಯಟ್, ಶಿಲೀಂದ್ರಗಳಾದ ಆಸ್ಪರಿಜಿಲಸ್ ಅವಮೊರಿ, ಆಸ್ಪರಿಜಿಲಸ್ ನೈಜರ್, ಪೆನಿಸಿಲಿಯಂ ಡಿಜಿಟ್ಯಾಟಂ ಮಣ್ಣಿನಲ್ಲಿರುವ ಹಲವಾರು ಸಾವಯವ ಆಮ್ಲಗಳನ್ನು ಉತ್ಪಾದಿಸಿ ಮಣ್ಣಿನ ರಸಸಾರವನ್ನು ಕಡಿಮೆಗೊಲಿಸಿ ಸ್ಥಿರೀPಸಲ್ಪಟ್ಟ ಮತ್ತು ಶಿಲಾರಂಜಕದಲ್ಲಿರುವ ಅಲಬ್ಯ ರಂಜಕವನ್ನು ಕರಗಿಸಿ ಬೆಳೆಗಳಿಗೆ ಒದಗಿಸುತ್ತದೆ.
ಗಣೇಶ ಹೆಚ್.ಎಸ್ À, ಸಸ್ಯರೋಗ ವಿಭಾಗ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು