12 ನೇ ಶತಮಾನದ ವಚನಗಳೇ `ಓರಲ್ ಮೀಡಿಯಾ’: ಮಹಿಪಾಲರೆಡ್ಡಿ ಮುನ್ನೂರ್

0
65

ಯಾದಗಿರಿ; ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಮಾಹಿತಿಗಳನ್ನು, ಸಂಗತಿಗಳನ್ನು ಹಾಗೂ ವಿವರಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ `ವಚನ’ ಆ ಕಾಲಘಟ್ಟದ `ಓರಲ್ ಮೀಡಿಯಾ’ ಎಂದು ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಗುರುವಾರ ನಗರದ ಕಸಾಪ ಭವನದಲ್ಲಿ ಆಯೋಜಿಸಿದ್ದ ಸಂಸ್ಥಾಪನಾ ದಿನ ಹಾಗೂ ಲಿಂ. ಡಾ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜಯಂತಿ ಮಹೋತ್ಸವದಲ್ಲಿ `ಶರಣ ಸಾಹಿತ್ಯದಲ್ಲಿ ಮಾಧ್ಯಮದ ಪರಿಕಲ್ಪನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸತ್ಯದ ಮಾರ್ಗದಲ್ಲಿ ನಡೆಯುವಂತೆ ಜನ ಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ಹೇಳಿದ್ದು ಮೌಖಿಕ ಮಾಧ್ಯಮ. ಅದುವೇ ವಚನ ಎಂದರು.

Contact Your\'s Advertisement; 9902492681

ಅಕ್ಕಮಹಾದೇವಿಯ `ಚನ್ನಮಲ್ಲಿಕಾರ್ಜುನ ದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ’ ಎಂಬ ವಚನದಲ್ಲಿ ಓಲೆ ಎಂಬುದು ಮಾಧ್ಯಮ ಎಂದ ಅವರು, ಸಮಾಜದಲ್ಲಿರುವ ಓರೆ ಕೊರೆಗಳನ್ನು ತಿದ್ದುವುದಕ್ಕಾಗಿ ಅಭಿವ್ಯಕ್ತಿಸಿದ್ದು, ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ ಆ ಹೆಡ್ ಲೈನ್ ಗಳನ್ನು ಕಾಣಬಹುದು ಎಂದು ಹೇಳಿದರು.

ಶರಣ ಸಂಪಾದಕ ಎನಿಸಿದರೆ, ಓದುಗ ಲಿಂಗಾನುಭವಿ ಎಂದು ತಿಳಿಸಿದ ಅವರು, ಸಂಪಾದಕನಾಗಿ, ವರದಿಗಾರನಾಗಿ ಶರಣ ವಚನಗಳನ್ನು ಕೊಟ್ಟರೆ, ಅರಿಯುವ ಸಾಮಥ್ರ್ಯವುಳ್ಳವನು ಲಿಂಗಾನುಭವಿ ಓದುಗ ಎನಿಸಿಕೊಳ್ಳುತ್ತಾನೆ. ನ್ಯಾಯ ನಿಷ್ಠುರಿ, ದಾಕ್ಷಿಣ್ಯ ಪರ ಇಲ್ಲದವನು ಮಾಧ್ಯಮದವರು. ಅವರೇ ಶರಣ ಸಾಹಿತ್ಯ ರಚಿಸಿದ ವಚನಕಾರರು ಎಂದು ಅಭಿಮತಪಟ್ಟರು.

ಅಂಚೆ ಕಚೇರಿ ಪ್ರಧಾನ ಅಂಚೆ ಪಾಲಕ ಕುಪೇಂದ್ರ ವಠಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆ ಮೇಲೆ ಗುರುಮಠಕಲ್ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹುಣಸಗಿ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಸಗರನಾಡು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿ ಪುರಸ್ಕøತ ವಾಹಿನಿ ವರದಿಗಾರ ನಾಗಪ್ಪ ಮಾಲಿಪಾಟೀಲ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಯ್ಯಣ್ಣ ಹುಂಡೇಕಾರ, ಸಿ ಎಮ್ ಪಟ್ಟೇದಾರ್, ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ, ಸೋಮಶೇಖರ್ ಮಣ್ಣೂರ, ಡಾ. ಭೀಮರಾಯ ಲಿಂಗೇರಿ, ಡಾ. ಎಸ್ ಎಸ್ ನಾಯಕ, ಬಸವರಾಜ ಅರಳಿ ಮೋಟ್ನಳ್ಳಿ, ಬಸವಂತ್ರಾಯ ಗೌಡ ಮಾಲಿ ಪಾಟೀಲ, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಪ್ರಶಾಂತ ಆಯರಕರ್, ಡಾ. ಗಾಳೆಪ್ಪ ಪೂಜಾರಿ ಸೇರಿದಂತೆ ಇತರರಿದ್ದರು.

31 ವೈಡಿಜಿಆರ್.1 ಯಾದಗಿರಿ: ನಗರದ ಕಸಾಪ ಭವನದಲ್ಲಿ ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಉಪನ್ಯಾಸ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here