ಕಲಬುರಗಿ: ವೈಜ್ಞಾನಿಕತೆಯ ಅವಿಷ್ಕಾರ ಮತ್ತು ಕ್ರಾಂತಿಕಾರಿ ಬದಲಾವಣೆಯಿಂದ ಗ್ರಂಥಾಲಯಗಳು ಆಧುನಿಕತೆಯ ಸ್ವರೂಪ ಮತ್ತು ಡಿಜಿಟಲೀಕರಣದ ಸಹಕಾರದಿಂದ ಗ್ರಂಥಾಲಯಗಳು ವಿದ್ಯಾರ್ಥಿಗಳ ಜಾಗತಿಕ ಜ್ಞಾನ ವಿಸ್ತರಣೆ ಮತ್ತು ವೈಜ್ಞಾನಿಕ ದೃಷ್ಠಿಕೋನವನ್ನು ಬೆಳೆಸುತ್ತಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದ ಮಂಥನ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಜ್ಞಾನ ಪರಿಧಿಯ ವಿಕಾಸ ಮತ್ತು ವಿಭಿನ್ನ ಆಲೋಚನೆಗೆ ಗ್ರಂಥಾಲಯಗಳು ಪ್ರೇರಣೆ ನೀಡುತ್ತಿವೆ.
ಸಂಶೋಧನಾ ಕಾರ್ಯ ಹಾಗೂ ಅಧ್ಯಯನಕ್ಕಾಗಿ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಓದುವ ವಾತಾವರಣದ ಜೊತೆಗೆ ಅಗತ್ಯ ಕೃತಿಗಳು ಲಬ್ಯವಾಗುವಂತೆ ಇಂಟರ್‌ನೆಟ್ ಸೌಲಭ್ಯ ವ್ಯವಸ್ಥೆ ಅತಿ ಅವಶ್ಯಕ. ಪ್ರತಿ ಗ್ರಾಮದಲ್ಲಿ ಗ್ರಂಥಾಲಯಗಳನ್ನು ಹುಟ್ಟು ಹಾಕಿದರೆ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಹಲವು ಮಹಾನ್ ನಾಯಕರು ಅಗಾಧ ಜ್ಞಾನ ಪಾಂಡಿತ್ಯ ಪಡೆಯಲು ಗ್ರಂಥಾಲಯಗಳು ಸಾಕ್ಷಿಯಾಗಿವೆ. ಆದರಿಂದ ಗ್ರಂಥಾಲಯಗಳ ಸದುಪಯೋಗ ಮತ್ತು ಓದುವ ಹವ್ಯಾಸ ಬೆಳೆಸಿಕೊಂಡರೆ ಸಾಧನೆ ಸುಲಭವಾಗಲಿದೆ ಎಂದು ವಿದ್ಯಾರ್ಥಿಗಳು ಕಿವಿಮಾತು ನೀಡಿದರು.
ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಮನೋಜಕುಮಾರ್ ಗುದ್ದಿ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಂಥಾಲಯಗಳು ಪ್ರಪಂಚಕ್ಕೆ ಜ್ಞಾನ ನೀಡುವ ಶಕ್ತಿ ಕೇಂದ್ರಗಳಾಗಿವೆ. ಪುಸ್ತಕಗಳು ಜ್ಞಾನವಹಕಗಳಾಗಿದ್ದು, ಶತಮಾನದಿಂದ ಜ್ಞಾನದಾಸೋಹವನ್ನು ಎಲ್ಲೆಡೆ ಹಂಚುತ್ತಿವೆ. ಜ್ಞಾನದ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಅತೀ ಹೆಚ್ಚು ಮುಂಚೂಣಿಯಲ್ಲಿದೆ. ಇಲ್ಲಿನ ಪರಂಪರೆ ಅದ್ಭುತವಾದದ್ದು. ಕಾರ್ಲಮಾರ್ಕ್ಸ್ ಅವರ ಪುಸ್ತಕ ದೇಶದಲ್ಲಿ ಕ್ರಾಂತಿ ಉಂಟಾಗಲು ಕಾರಣವಾಯಿತು.
ಭಗತ್ ಸಿಂಗ್ ಅವರಿಗೆ ನೇಣುಗಂಬ ಏರಿಸುವ ಮುನ್ನ ಪುಸ್ತಕ ಓದು ಮುಗಿಸುವ ತನಕ ತಡೆದು ಆಮೇಲೆ ಗಲ್ಲಿಗೇರಲು ಅಣಿಯಾದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಗ್ರಂಥಾಲಯದಲ್ಲಿ ಪುಸ್ತಕ ಓದುವುದರಲ್ಲಿಯೇ ಇಡೀ ಜೀವನ ಸವೆಸಿ ಸಂವಿಧಾನ ರಚಿಸಿದರು. ಓದಲು ಕುಳಿತರೆ ರಾತ್ರಿಯೆಲ್ಲಾ ಓದುತ್ತಿದ್ದರು.
ಗ್ರಂಥಪಾಲಕರು ಬಂದು ಬಾಗುಲು ಮುಚ್ಚುವ ಸಮಯವಾಯಿತೆಂದು ಎಬ್ಬಿಸುವತನಕ ಓದುತ್ತಿದ್ದರು. 12 ನೇ ಶತಮಾನದಲ್ಲಿ ಬರೆದ ವಚನಗಳು ನಮಗೆ ದೊಡ್ಡ ಜ್ಞಾನದ ಆಸ್ತಿ. ಗ್ರಂಥಾಲಯದಲ್ಲಿ ಪುಸ್ತಕಗಳೊಂದಿಗೆ ಸಮಯ ಕಳೆಯಬೇಕು. ವಿಶ್ವವಿದ್ಯಾಲಯದ ಎಡಭಾಗದಲ್ಲಿ ಚಿಟ್ಟೆ ಉದ್ಯಾನವನ ನಿರ್ಮಾಣಕ್ಕೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಸುರೇಶ ಜಂಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಪುಸ್ತಕಗಳು ದೊರೆಯುವಂತೆ ಮಾಡಲು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ವಿವಿ ವಿದ್ಯಾರ್ಥಿಗಳು ಬೇರೆ ಊರಿನಲ್ಲಿದ್ದರೂ ಅವರಿಗೆ ನೀಡಲಾದ ಗುರುತಿನ ಪತ್ರ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಪುಸ್ತಕಗಳನ್ನು ಆನ್‌ಲೈನ್ ಮೂಲಕವೇ ಪಡೆಯಬಹುದು ಎಂದು ಹೇಳಿದರು. ನಂತರ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಭೈರಪ್ಪ ಮಾತನಾಡಿದರು.
ಪ್ರಬಂಧ ಸ್ಪರ್ದೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಖೇಮಣ್ಣ ಅಲ್ದಿ, ಶರಣಕುಮಾರ ಪಾಟೀಲ್ ಸೇರಿದಂತೆ ವಿವಿಧ ವಿಭಾಗಗಳ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು. ಗ್ರಂಥಪಾಲಕಿ ಡಾ. ಮಮತಾ ಅತಿಥಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ರಸ್ತೆ ಸುಧಾರಣೆ, ಕಟ್ಟಡಗಳ ನವೀಕರಣ, ಅಗತ್ಯ ಪಿಠೋಪಕರಣ, ವಿದ್ಯಾರ್ಥಿ ವಸತಿನಿಲಯಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲು ೩೦ ಕೋಟಿ ವೆಚ್ಚದ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ. ರಾಜ್ಯಪಾಲರ ಸೂಚನೆ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ವಿಶ್ವವಿದ್ಯಾಲಯಕ್ಕೆ ಆರ್ಥಿಕ ನೆರವು ನೀಡುತ್ತಿದ್ದು, ಪ್ರಮುಖ ರಸ್ತೆಗಳ ದುರಸ್ತಿ, ಗ್ರಂಥಾಲಯ ಸೇರಿದಂತೆ ವಿವಿಧ ವಿಭಾಗಗಳ ಸಭಾಂಗಣಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಒಳಗೊಂಡಂತೆ ಸ್ಮಾರ್ಟ್ ಕ್ಲಾಸ್ ಗಳ ನಿರ್ಮಾಣಕ್ಕೆ ಆರ್ಥಿಕ ನಿಧಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುವುದು ಎಂದ ಅವರು ವಿಶ್ವವಿದ್ಯಾಲಯದ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. – ಪ್ರೊ. ದಯಾನಂದ ಅಗಸರ, ಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…