ಶಿಕ್ಷಣ ವ್ಯವಸ್ಥೆಯಲ್ಲಿ ಮಹಿಳಾ ಅಸ್ಮಿತೆಗೆ ಒತ್ತು ನೀಡಿ

ಕಲಬುರಗಿ: ಆಧುನಿಕ ವ್ಯವಸ್ಥೆಯಲ್ಲಿ ಅಕ್ಷರಸ್ಥ ಸಮುದಾಯದಿಂದ ಮಹಿಳೆಯರ ಮೇಲೆ ರಾಕ್ಷಸ ಪ್ರವೃತ್ತಿ ಬೆಳೆಯುತ್ತಿದೆ. ಅದು ನಿರ್ಮೂಲನೆ ಆಗಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಮಹಿಳಾ ಅಸ್ಮಿತೆ ಮತ್ತು ಸ್ವಪ್ರಜ್ಞೆ ಗೆ ಒತ್ತು ನೀಡಬೇಕಿದೆ. ಉತ್ತಮ ಅವಕಾಶಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಕ್ಷರ ಬಿತ್ತುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು ಎಂದು ಲೇಖಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚಾರಣೆ ನಿಮಿತ್ತ ಸರಣಿ ಉಪನ್ಯಾಸ ಮಾಲೆ-೧೧ ಹಾಗೂ ರಂಗಾಯಣದ ನೂತನ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಕೇವಲ ಕುಟುಂಬದ ನಿರ್ವಹಣೆಗೆ ಸೀಮಿತ ಎಂಬ ದಿನಮಾನಗಳು ಕಳೆದಿವೆ. ವರ್ತಮಾನದಲ್ಲಿ ಮನೆಯಿಂದ ಹೊರಗೆ ಬಂದು ಸ್ವಸಾಮರ್ಥ್ಯದಿಂದ ವಿವಿಧ ಕ್ಷೇತ್ರಗಳನ್ನು ಪ್ರವೇಶಿಸಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯೆಂಬ ಬೇದವಿಲ್ಲದೆ ಸಮಭಾವದಿಂದ ಬದುಕು ರೂಪಿಸಿಕೊಳ್ಳುವ ಸೂಕ್ಷ್ಮತೆ ಬೆಳೆದಿರುವುದು ಒಳ್ಳೆಯ ಬೆಳವಣಿಗೆ. ಮೊದಲ ತಲೆಮಾರಿನ ಲೇಖಕರು ಹಾಗೂ ಪತ್ರಕರ್ತೆಯರಾದ ಆರ್. ಕಲ್ಯಾಣಮ್ಮ, ನಂಜನಗೂಡು ತಿರುಮಲಾಂಬ ಅವರಿಂದ ಸಾಹಿತ್ಯ ಪ್ರಕಾರದ ಸಣ್ಣ ಕಥೆಗಳು ಹುಟ್ಟುಕೊಂಡವು. ಇದರಿಂದ ಜಾಗೃತರಾದ ಅವರು ಪತ್ರಿಕೆ ಆರಂಭಿಸಿ ಸಮಾಜ ಸುಧಾರಣೆಗೆ ತೊಡಗಿದರು. ಆದೇ ರೀತಿಯಲ್ಲಿ ಸಮಾಜದಲ್ಲಿನ ವಾಸ್ತವ ಸಂಗತಿಗಳನ್ನು ಆಧರಿಸಿ ಸ್ವಾರಸ್ಯಕರ ಮತ್ತು ವಾಸ್ತವ ನೆಲೆಯ ಕಥೆಗಳನ್ನು ಬರೆಯುವ ಲೇಖಕರು ನಮ್ಮಲ್ಲಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅನಾದಿ ಕಾಲದಿಂದಲೂ ಮಹಿಳೆಯರಿಗಿದ್ದ ಕಟ್ಟುಪಾಡುಗಳು ಮತ್ತು ಅಮಾನವೀಯ ಪದ್ಧತಿಗಳು ಸಾಕಷ್ಟು ಸುಧಾರಣೆಯಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸಿದ ಪ್ರಸಂಗಗಳು, ವೈಯಕ್ತಿಕ ಯಾತನೆ, ದೌರ್ಜನ್ಯ, ಅತ್ಯಾಚಾರ, ಕುಟುಂಬಸ್ಥರಿಂದ ನಿರ್ಲಕ್ಷ್ಯ ಮನೋಭಾವ, ವಿವಾಹ ಸಂದರ್ಭದಲ್ಲಿ ಮಹಿಳೆಯರನ್ನು ಪರೀಕ್ಷಿಸುವ ಪದ್ಧತಿ, ಲಿಂಗ ತಾರತಮ್ಯ, ಬಾಲವಿದವೆ ವ್ಯವಸ್ಥೆಯ ಸಂಕಟಗಳ ಬಗೆ ಲೇಖಕರಾದ ಹೆಚ್.ವಿ. ಸಾವಿತ್ರಮ್ಮ ಮತ್ತು ಎಂ.ಕೆ. ಇಂದಿರಾ ಹಲವು ಕಥೆಗಳನ್ನು ಬರೆದಿದ್ದಾರೆ. ಈ ಎಲ್ಲಾ ಸಂಗತಿಗಳಿಂದಲೇ ಸಣ್ಣ ಕಥೆಗಳು ಸಾಹಿತ್ಯ ಪರಂಪರೆ ಬೆಳೆದಿದೆ. ಕಥೆಗಳನ್ನು ಓದುವುದರಲ್ಲಿ ಅದರ ತಿರುಳು ಮತ್ತು ಅನುಭವದ ಸಾರ ಅಭಿವ್ಯಕ್ತವಾಗುತ್ತದೆ. ಅದೇ ಕಥೆಯ ತಾಕತ್ತು ಎಂದರು.

ಬೆಳಗಾವಿ ಶ್ಯಾಮಲದೇವಿ ಬೆಳಗಾಂವಕರ್ ದಲಿತರು ಹಾಗೂ ಅವರ ಕುಟುಂಬದ ಕಷ್ಠಗಳು, ವೇಶ್ಯಾವಾಟಿಕೆ ಕುರಿತ ಕಥೆಗಳು ಸಾರ್ವಕಾಲಿಕ ಮಹಿಳಾ ಬಿಕ್ಕಟ್ಟುಗಳನ್ನು ಬಿಂಬಿಸುತ್ತವೆ. ಹೆಚ್. ವಿ. ಸಾವಿತ್ರಮ್ಮ ಅವರು ಗಾಂಧಿ, ಟ್ಯಾಗೋರ್ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದರು. ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಸಮಸ್ಯೆಗಳನ್ನು ಲೇಖಕಿ ಎಂ.ಕೆ. ಇಂದಿರಾ ಬರೆದಿದ್ದಾರೆ. ಗೊರೂರು, ಗೀತಾ ನಾಗಭೂಷಣ್, ಶಾಂತದೇವಿ, ಕಮಲಾಹಂಪನ, ಸಾ. ರಾ. ಅಬೂಬುಕರ್ ರಚಿತ ಕಥೆಗಳು ಸಮಾಜದ ವಿವಿಧ ಮಾನವೀಯ ಮುಖಗಳನ್ನು ಕಥೆಗಳಲ್ಲಿ ಹೆಣೆದಿದ್ದಾರೆ ಎಂದರು.

ಕಲಬುರಗಿ ರಂಗಾಯಣದ ನೂತನ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಲೋಕ ಹೆಚ್ಚು ಬೆಳೆದಿದೆ. ಕವಿ ಮತ್ತು ನಾಟಕಕಾರ ಶಾಂತರಸರ ಈ ಭಾಗದಲ್ಲಿನ ರಂಗಭೂಮಿ ಕಲೆಯನ್ನು ಬೆಳೆಸಿದ್ದಾರೆ. ಸಣ್ಣಾಟ, ದೊಡ್ಡಾಟ ಪ್ರಭಾವಿ ಸಂಪ್ರದಾಯ ಮಾಧ್ಯಮವಾಗಿ ಸಮಾಜ ಜಾಗೃತಿಗೊಳಿಸಿವೆ ಎಂದ ಅವರು ಈ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ.

ಪ್ರತಿಭೆಯಿದ್ದರು ಅವಕಾಶಗಳನ್ನು ಹೋರಾಟದ ಮೂಲಕವೇ ಪಡೆಯಬೇಕು. ರಂಗಭೂಮಿ ಶ್ರೀಮಂತ ಕ್ಷೇತ್ರವಾಗಿದ್ದು, ರಂಗಾಯಣ ಜಿಲ್ಲೆಗೆ ಸೀಮಿತವಾಗದೆ ರಂಗ ಚಟುವಟಿಕೆಗಳು ಪ್ರತಿ ಹೋಬಳಿ ಮತ್ತು ಗ್ರಾಮೀಣ ಪ್ರದೇಶದವರಿಗೂ ತಲುಪಿಸಬೇಕು. ಈ ಭಾಗದ ಹಿರಿಯರ ಸಹಕಾರದಿಂದ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂಬ ಸಂಕಲ್ಪವಿದೆ. ರಂಗಾಯಣದ ನಿರ್ದೇಶಕಿಯಾದ ನನಗೆ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಅಭಿನಂದಿಸುತ್ತಿರುವುದು ತವರು ಮನೆಗೆ ಮಗಳನ್ನು ಕರೆದು ಸತ್ಕರಿಸಿದಷ್ಟೇ ಖುಷಿಯಾಗಿದೆ ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಹೆಚ್. ಟಿ. ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಖ್ಯಾತ ಲೇಖಕರ ಉಪನ್ಯಾಸದಿಂದ ಹೆಚ್ಚಾಗಿ ಸಾಹಿತ್ಯಾಸಕ್ತಿ, ಓದಲು ಸ್ಫೂತಿ, ಪ್ರೇರಣ ಮತ್ತು ವೈಚಾರಿಕ ಅನುಭವ ಚಿಂತನೆಗಳು ಬೆಳೆಯಲು ಸಾಧ್ಯವಾಗಲಿದೆ. ಕಥೆಗಾರನಿಗೆ ಉತ್ತಮ ಭಾವನೆಗಳಿರಬೇಕು. ಭಾವನೆ ಮತ್ತು ಬರವಣಿಗೆಯ ಕುತೂಹಲ ಮೂಡಿದರೆ ಅತ್ಯುತ್ತಮ ಕಥೆ ಬರೆಯಬಹುದು. ಆದರೆ, ಭಾವನೆಗಳಿಗೆ ಜಾತಿಯೆಂಬುದಿಲ್ಲ. ಉತ್ತಮ ಸಂದೇಶವಿರುವ ಸಂಗತಿಗಳ ಜೊತೆಗೆ ವಿವೇಚನೆ ಬೆಳೆಸಿಕೊಂಡರೆ ಆದರ್ಶ ಕಥೆಗಾರರಾಗಲು ಸುಲಭ. ಕಥೆಗಳನ್ನು ಕಟ್ಟುವುದರಿಂದ ಪರಸ್ಪರರ ನಡುವೆ ಓದುಗರ ಸಹೃದಯತೆ ಮತ್ತು ಬಾಂಧವ್ಯ ಬೆಳೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಅಧ್ಯಾಪಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಮುಂತಾದವರಿದ್ದರು. ಡಾ. ಶಿವರಶರಣಪ್ಪ ಕೂಡ್ಲಿ ಅತಿಥಿಗಣ್ಯರನ್ನು ಸ್ವಾಗತಿಸಿದರು, ಡಾ. ಪ್ರಕಾಶ್ ಸಂಗಮ ವಂದಿಸಿದರು. ಕು. ಗಂಗಮ್ಮ ಪ್ರಾರ್ಥಿಸಿದರು. ಅನವೀರ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಸಾಹಿತ್ಯ ಸಂಘ, ಕನ್ನಡ ಸಂಶೋಧನಾ ಸಂಘದ ಸದಸ್ಯರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago