ಹಂಪಿ: ಕೂಲಿ ಕಾರ್ಮಿಕ ಈಗ ಹಂಪಿ ವಿವಿಯ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡು ಹೊಸ ಅಧ್ಯಯ ಸೃಷ್ಟಿಸಿದ್ದಾರೆ.
ಕಡು ಬಡತನದ ಕುಟುಂಬದಲ್ಲಿ ಆರನೇ ಪುತ್ರನಾಗಿ ಜನಿಸಿದ್ದ ಸೋಮಶೇಖರ ಬಣ್ಣದಮನೆ ತಂದೆ ದಾನಪ್ಪ,ತಾಯಿ ರವಳಮ್ಮ,ಇಬ್ಬರೂ ಕೂಲಿಕಾರ್ಮಿಕರು, ಸೋಮಶೇಖರಬಣ್ಣದಮನೆ (ಸೋಮಪ್ಪ ಸಿ) ನಗರದ ಮುನ್ಸಿಪಲ್ ಶಾಲೆಯಲ್ಲಿ ಹತ್ತನೇ ತರಗತಿ ಓದಿದರು.
ಬಡತನದ ಕಾರಣ ಓದು ಅರ್ಧಕ್ಕೆ ಮುಟಕುಗೊಳಿಸಿ ಕಟ್ಟಡಗಳ ಕಾಮಗಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ನಂತರದ ದಿನಗಳಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮೊಟ್ಟ ಮೊದಲನೆಯ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಮಿಕರ ಸಂಘವನ್ನು ರಚಿಸಿ ಮೊಟ್ಟಮೊದಲ ಜಿಲ್ಲಾಧ್ಯಕ್ಷನಾಗಿಯು ಕಾರ್ಯನಿರ್ವಹಿಸಿ ಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ತಾಲೂಕು ಜಿಲ್ಲೆ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸಿ ಯಶಸ್ವಿ ಹೋರಾಟಗಾರ ಎಂದೆನಿಸಿಕೊಂಡರು.
ಕಾರ್ಮಿಕರಿಗೆ ಎಲ್ಲಿಯೇ ಅನ್ಯಾಯವಾದರೂ ಸಹ ಹೋರಾಡಿ ನ್ಯಾಯ ದೊರಕಿಸಿಕೊಟ್ಟ ಹಲವು ಉದಾಹರಣೆಗಳಿವೆ, ಅದೇ ರೀತಿ ದಲಿತ ಮತ್ತು ಮೂಲ ನಿವಾಸಿಗಳ ಹಲವಾರು ಸಮಸ್ಯೆಗಳನ್ನು ಹೊಡೆದೋಡಿಸಲು ದಲಿತ ಸಂಘಟನೆಗಳ ಜೊತೆಗೂಡಿ ಹೋರಾಡಿ ನ್ಯಾಯವಾದಿಸಿದ್ದುಂಟು ಮತ್ತು ಆ ತುಳಿತುಕೊಳ್ಳಗಾದ ಸಮುದಾಯಗಳಿಗೆ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಜಾಗೃತಿಯ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಸದ್ಯ ಇವರು ಈಗ ದಕ್ಷಿಣ ಭಾರತದ ಬಹುದೊಡ್ಡ ಯಾತ್ರಸ್ಥಳವಾದ ಹಂಪಿಯಲ್ಲಿ ಬೌದ್ಧ ವಿಹಾರವನ್ನ ನಿರ್ಮಿಸುವ ಕನಸನ್ನು ಸಹ ಒತ್ತಿದ್ದಾರೆ ಆ ವಿಷಯಕ್ಕೆ ಸಂಬಂಧಿಸಿದ ಹಾಗೆ ಜಮೀನಿನ ಖರೀದಿ ಪ್ರಕ್ರಿಯೆಯು ನಡೆಯುತ್ತಿದೆ. ಇಷ್ಟೆಲ್ಲ ಮಾಡುತ್ತಿರುವ ಇವರು ತಮ್ಮ ಜೀವನ ನಡೆಸುವುದಕ್ಕಾಗಿ ಪ್ರತಿಷ್ಠಿತ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಅವಳಿ ಜಿಲ್ಲೆಯ ಜನ ಸಂಘಟನಾ ಚತುರ ಎಂದು ಕರೆಯುವುದುಂಟು.
ಇವರ ಸಾಮಾಜಿಕ ಕಾಳಜಿ ನೋಡಿ ಕರ್ನಾಟಕ ಸರ್ಕಾರವು ಶ್ರೀಯುತರಿಗೆ ಕರ್ನಾಟಕದ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಈ ಭಾಗದ ಹಲವಾರು ಪ್ರಗತಿಪರ ವಿಚಾರವಂತರು ಹಾಗೂ ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಅಂಬೇಡ್ಕರ್ ಸಂಘದ ಎಲ್ಲಾ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ..