ಚಾಲನೆ ಸುರಕ್ಷಿತವಾಗಿದ್ದರೆ ಜೀವನವು ಸುರಕ್ಷಿತ: ಪ್ರಶಾಂತ ಸುರುಪುರಕರ್

0
29

ಶಹಪುರ : ಚಾಲಕರು ಬಸ್ ಚಾಲನೆ ಮಾಡುವಾಗ ಮೈ ಮರೆತರೆ ಅಪಘಾತ ಆಗುವ ಸಂಭವ ಇರುತ್ತದೆ,ಆದ್ದರಿಂದ ಇಂತಹ ಸಮಯದಲ್ಲಿ ಅಪಘಾತಗಳು ತಪ್ಪಿಸಬೇಕೆಂದರೆ ಚಾಲಕರು ಏಕಾಗ್ರತೆಯಿಂದ ವಾಹನ ಚಾಲನೆ ಮಾಡುವುದು ಬಹಳ ಮುಖ್ಯ,ಚಾಲನೆ ಸುರಕ್ಷಿತವಾಗಿದ್ದರೆ ಜೀವನವು ಸುರಕ್ಷಿತವಾಗಿರುತ್ತದೆ ಎಂಬುದನ್ನು ಪ್ರತಿಯೊಬ್ಬ ಚಾಲಕರು ಅರ್ಥೈಸಿಕೊಳ್ಳಬೇಕೆಂದು ಯಾದಗಿರಿಯ ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರಶಾಂತ್ ಸುರುಪುರಕರ್ ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಶಹಪುರ ಬಸ್ ಘಟಕದ ಸಂಚಾರಿ ಸಭಾ ವಾಹನದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಸ್ವಚ್ಛತಾ ಪಕವಾಡ ಕಾರ್ಯಕ್ರಮದಲ್ಲಿ ಚಾಲಕರಿಗೆ ತರಬೇತಿ ಮತ್ತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಚಾಲನೆ ಸಮಯದಲ್ಲಿ ವೇಗದ ಮಿತಿ ಕಡಿಮೆಯಾದಾಗ ಅಪಘಾತಗಳು ಪ್ರಮಾಣ ಕಡಿಮೆಯಾಗುತ್ತವೆ. ಮದ್ಯಪಾನ ಮಾಡಿ ಚಾಲನೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು,ಅಲ್ಲದೆ ನಿಮ್ಮನ್ನು ನಂಬಿಕೊಂಡ ಕುಟುಂಬ ನಿಮ್ಮೊಂದಿಗೆ ಇರುತ್ತದೆ ಎಂಬುದನ್ನು ಒಮ್ಮೆ ನೆನಪಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ನುಡಿದರು.

Contact Your\'s Advertisement; 9902492681

ಚಾಲಕರು ಚಾಲನೆಯಲ್ಲಿ ಜವಾಬ್ದಾರಿ ಹಾಗೂ ಚಾಲನೆಯ ಕುರಿತು ಬಹಳ ಮುಖ್ಯವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಿದಾಗ,ಇಂಧನ ಉಳಿತಾಯದ ಜೊತೆಗೆ ವಾಹನ ಮತ್ತು ನಮ್ಮ ಕುಟುಂಬ ಸುರಕ್ಷತೆ ವಾಗಿರುವುದಲ್ಲದೆ, ನಮ್ಮ ಈ ಸಂಸ್ಥೆ ಅಭಿವೃದ್ಧಿ ಪಥದತ್ತ ಕೊಂಡೊಯಲು ಸಾಧ್ಯವಾಗುತ್ತದೆ ಎಂದು ಯಾದಗಿರ ವಿಭಾಗಿಯ ಸಂಚಾರಿ ಅಧಿಕಾರಿ ಎಂ.ಎಸ್. ಹಿರೇಮಠ ಹೇಳಿದರು. ಈ ಸಂದರ್ಭದಲ್ಲಿ ಶಹಾಪುರ ಬಸ್ ಘಟಕದ ವ್ಯವಸ್ಥಾಪಕರಾದ ಅಕ್ಬರ್ ಭಾಷಾ ಹೊಟಗಿ ಹಾಗೂ ಚಾಲಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here