ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ; ಸರ್ಕಾರದ ನಿರ್ಧಾರಕ್ಕೆ ದೇಶಮುಖ, ದಸ್ತಿ ಹರ್ಷ

0
84

ಕಲಬುರಗಿ; ಸಂವಿಧಾನದ 371ನೇ ಜೇ ಕಲಂ ಜಾರಿಯಾಗಿ ಹತ್ತು ವರ್ಷಗಳು ಗತಿಸಿರುವ ಪ್ರಸ್ತುತ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದು ಅತಿ ಅವಶ್ಯವಾಗಿತ್ತು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿಭಾಗೀಯ ಕೇಂದ್ರ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಸರ್ಕಾರದ ನಿರ್ಧಾರಕ್ಕೆ ಸ್ವಾಗತಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆಸಲು ಕಲ್ಯಾಣದ ಜನಮಾನಸದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರಿಗೆ ನಿರಂತರ ಮನವರಿಕೆ ಮಾಡಲಾಗಿತ್ತು ಸಚಿವರು ಸೂಕ್ತ ಸಂದರ್ಭದಲ್ಲಿ ಸಂಪುಟ ಸಭೆ ನಡೆಸುವ ಬಗ್ಗೆ ಭರವಸೆ ನೀಡಿರುವಂತೆ ಸಚಿವ ಪ್ರಿಯಾಂಕ್ ಖರ್ಗೆರವರು ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ‌ಸಚಿವರ ಒಪ್ಪಿಗೆ ಪಡಿದು ಅಧಿಕೃತ ಘೋಷಣೆ ಮಾಡಿರುವುದು ಕಲ್ಯಾಣ ಕರ್ನಾಟಕದ ಜನಮಾನಸಕ್ಕೆ ಬಹಳ ಸಂತಸ ತಂದಿದೆ.

Contact Your\'s Advertisement; 9902492681

ಮಲ್ಲಿಕಾರ್ಜುನ ಖರ್ಗೆಯವರ ಮತ್ತು ಧರ್ಮಸಿಂಗ್ ರವರ ಮುತುವರ್ಜಿಯಿಂದ ಆಗಿನ ಮುಖ್ಯಮಂತ್ರಿ ಗುಂಡುರಾವ ಅವರ ಇಚ್ಛಾಶಕ್ತಿಯಿಂದ ಕಲಬುರ್ಗಿಯಲ್ಲಿ 1982 ರಲ್ಲಿ ಪ್ರಥಮ ಸಂಪುಟ ಸಭೆ ನಡೆಸಿರುವುದು ನಂತರ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಕಲಬುರ್ಗಿಯಲ್ಲಿ ಸಂಪುಟ ಸಭೆಗಳು ನಡೆಸಿದರು.

ಕಳೆದ ಒಂದು ದಶಕದಿಂದ ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆದಿರಲ್ಲಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್, ಐಟಿಬಿಟಿ ಸಚಿವರ ಇಚ್ಛಾಶಕ್ತಿಯಿಂದ ಕಲ್ಯಾಣದ ಎಲ್ಲಾ ಸಚಿವರ, ಶಾಸಕರುಗಳ ಸಂಯೋಗದಿಂದ 2024 ರಲ್ಲಿ ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿರುವದ್ದಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸ್ವಾಗತ ಸಲ್ಲಿಸುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರೊ.ಆರ್.ಕೆ ಹುಡುಗಿ, ಪ್ರೊ.ಬಸವರಾಜ ಕುಮ್ಮನೂರ್,ಡಾ.ಗುಲಶೆಟ್ಟಿ,ಡಾ.ಮಾಜೀದ ದಾಗಿ, ಮನೀಷ್ ಜಾಜು ಲಿಂಗರಾಜ ಸಿರಗಾಪೂರ ಅಶೋಕ ಗುರೂಜಿರವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here