ಎಂ.ಬಿ.ಪಾಟೀಲ್ ವಿರುದ್ಧ ನಕಲಿ ಪತ್ರ ರಚಿಸಿದ ಶ್ರುತಿ ಬೆಳ್ಳಕ್ಕಿ ಬಂಧನ

0
301

ಧಾರವಾಡ: ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟಗಾರ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ನಕಲಿ ಪತ್ರ ಸೃಷ್ಟಿಸಿದ್ದ ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷ ಪರಮೇಶ ಉಳವಣ್ಣನವರ್ ಪತ್ನಿ ಶ್ರುತಿ ಬೆಳ್ಳಕ್ಕಿಯವರನ್ನು ಬಂಧಿಸಿದ್ದಾರೆ.

ಲಿಂಗಾಯತ ಧರ್ಮದ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ನಕಲಿ ಪತ್ರಗಳ, ಸುಳ್ಳು ಸುದ್ದಿಗಳನ್ನು ಹಂಬಿಸುವವರ ಹಿಂದೆ ಲಿಂಗಾಯತ ವಿರೋಧಿ ದೊಡ್ಡ ದೊಡ್ಡ ರಾಜಕಾರಣಿಗಳು ಶಾಮಿಲು ಆಗಿದ್ದಾರೆ.ಇವರೊಡನೆ ಕೆಲ ದಿನಪತ್ರಿಕೆ, ಟಿವಿ ಮಾಧ್ಯಮಗಳು ಸೇರಿಕೊಂಡಿವೆ ಎಂದು ಹೇಳಲಾಗುತ್ತಿದೆ.

Contact Your\'s Advertisement; 9902492681

ನಕಲಿ ಲೆಟರ್ ಪ್ರಸಾರದ ವಿಚಾರ:

ರಾಜ್ಯದ ಪ್ರತಿಷ್ಠಿತ ಪತ್ರಿಕೆ ಮತ್ತು ಚಾನಲ್ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿರುವ ಆರೋಪ ಚುನಾವಣೆ ಆಯೋಗಕ್ಕೆ ಕಪಿಲ್ ಸಿಬ್ಬಲ್ ದೂರು ಸಲ್ಲಿಸಿದ್ದರು.

ಕರ್ನಾಟಕದಲ್ಲಿ ಸಾರ್ವತಿಕ ಲೋಕಸಭೆ ಚುನಾವಣೆ ನಡೆಯುತ್ತಿದೆ. ಪತ್ರಿಕೆ ಮಾಡಿರುವ ಫೇಕ್ ಲೆಟರ್ ಕುರಿತು ಕಾಂಗ್ರೆಸ್ ವಕ್ತಾರ ಹಿರಿಯ ನ್ಯಾಯವಾದಿ ಕಪಿಲ್ ಸಿಬ್ಬಲ್ ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಕ್ರಿಮಿನಲ್ ಕೇಸ್ ಅನ್ವಯ ಕ್ರಮ ಜರುಗಿಸಲು ವಿನಂತಿಸಿದ್ದರು.

ಅವರು ಸುದ್ದಿಗೋಷ್ಠಿ ಕರೆದು ಮಾತನಾಡಿ, ಕರ್ನಾಟಕದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಹೆಸರಲ್ಲಿ ಒಂದು ನಕಲಿ ಲೆಟರ್ ತಯಾರಿಸಿ ಅದರಲ್ಲಿ ಕ್ರೀಚನ್ ಮತ್ತು ಮುಸ್ಲಿಂರನ್ನು ಸೇರಿ ಲಿಂಗಾಯತ ಪ್ರತ್ಯಕೆ ಧರ್ಮ ಸ್ಥಾಪಿಸಿ ಮಾನ್ಯತೆಗಾಗಿ ಆಗ್ರಹಿಸಿ ಲಿಂಗಾಯತ ಮತಗಳ ದೃವಿಕರಣಗೊಳಿಸುವ ಬಗ್ಗೆ ಎಂ.ಬಿ. ಪಾಟೀಲ್ ಸಂಚು ರೂಪಿಸುತ್ತಿದ್ದಾರೆಂದು ಆ ನಕಲಿ ಲೆಟರನಲ್ಲಿ ಇದೆ.  ಈ ಲೆಟರ್ 2017 ಜುಲೈ 10ರಲ್ಲಿ ವೈರಲ್ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಈ ಲೆಟರ್ ಸಂಪೂರ್ಣ ನಕಲಿ ಲೆಟರ್ ಇರುವ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಿ ತಿಳಿಸಲಾಗಿತ್ತು ಆದರೆ ದೂರುನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದರು.

ಚುನಾವಣೆ ಮುಗಿಯುವ ವರೆಗೆ ಲೆಟರ್ ಪ್ರಕಟವಾಗದ ಬಗ್ಗೆ ಚುನಾವಣೆ ಆಯೋಗ ದೃಡಪಡಿಸಿತ್ತು ಆದರೆ 16 ಏಪ್ರಿಲ್ ರಂದು ಈ ನಕಲಿ ಲೆಟರ್ ಕರ್ನಾಟಕದ ಪ್ರತಿಷ್ಠಿತ ಪತ್ರಿಕೆ ಮತ್ತು ಚಾನಲ್ ವೂಂದರಲ್ಲಿ ಪ್ರಸರಾವಾಗಿದೆ ಎಂದು ಆರೋಪಿಸಿದ್ದರು. ನಕಲಿ ಲೆಟರ್ ಪ್ರಕಟಿಸಿ ಪ್ರಸಾರ ಮಾಡಲಾಗಿದೆ. ಇದು ಸಂಪೂರ್ಣ ನಕಲಿ ಲೆಟರ್ ಎಂದು ಗೊತ್ತಿದ್ದರು ಇದನ್ನು ಪ್ರಸಾರ ಮಾಡಿ ಜನರಲ್ಲಿ ಗಲಬೆ ಸೃಷ್ಠಿಸುವ ಕೆಲಸ ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದರು. ಈ ಕುರಿತು ಸಂಬಂಧಿಸಿದ ಸುದ್ದಿ ಸಂಸ್ಥೆಯ ಮೇಲೆ ಕ್ರಿಮಿನಲ್ ಮುಕದ್ದಮೆ ದಾಖಲಿಸುವಂತೆ ಅವರು ಆಗ್ರಹಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here