ಜೇವರ್ಗಿ; ತಾಲೂಕಿನ ರಂಜಣಗಿ ಗ್ರಾಮದ ರೈತನÀ ತಾಕಿನಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿ ವಿಜ್ಞಾನಿಗಳಿಂದ ತೊಗರಿ ಮತ್ತು ಮೆಣಸಿಟಿಕಾಯಿ ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳ ಕುರಿತು ಎಸ್ಸಿಎಸ್ಪಿ ಯೋಜನೆ ಅಡಿಯಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾರಂಭದಲ್ಲಿ ಐಐಎಮ್‍ಆರ್, ಹೈದ್ರಾಬಾದ ಪ್ರೆರೇಪಿತ ಜೆ.ಟಿ.ಎಮ್.ಎಫ್.ಪಿ.ಸಿ, ಜೇರಟಗಿ ರೈತ ಉತ್ಪಾದಕಾ ಸಂಸ್ಥೆಯ ಕಾರ್ಯ ನಿರ್ವಾಹಕರಾದ ಶ್ರೀ ಶರಣಬಸವ ನಾಗಾವಿರವರು ಕಾರ್ಯಕ್ರಮದ ಉದ್ದೇಶವನ್ನು ಕುರಿತು ಮತ್ತು ಎಫ್‍ಪಿಓ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು.
ತದನಂತರ ಡಾ. ಚೇತನ್ ಟಿ. ವಿಜ್ಞಾನಿ(ತೋಟಗಾರಿಕೆ) ಮಾತನಾಡಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮಹತ್ವ, ಯೋಜನೆಯ ಉದ್ದೇಶ ಮತ್ತು ಮೆಣಸಿನಕಾಯಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ವಿವರಿಸಿದರು.
ಮುಂದುವರೆದು, ಡಾ. ಮಲ್ಲಪ್ಪ ಬಿ, ವಿಜ್ಞಾನಿ(ಬೇಸಾಯಶಾಸ್ತ್ರ) ರವರು ತೊಗರಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ತೊಗರಿಯಲ್ಲಿ ಕುಡಿ ಚಿವುಟುವ ತಂತ್ರಜ್ಞಾನದ ಲಾಭಾಂಶಗಳ ಕುರಿತು ವಿವರವಾಗಿ ತಿಳಿಸಿದರು.
ಕೊನೆಯದಾಗಿ ರೈತರು ಮತ್ತು ವಿಜ್ಞಾನಿಗಳು 55-60 ದಿನಗಳ ತೊಗರಿ ಬೆಳೆಯ ತಾಕಿನಲ್ಲಿ ವಿತರಿಸಿದ ಕುಡಿ ಚಿವುಟುವ ಯಂತ್ರದ ಪದ್ಧತಿ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಈ ತಂತ್ರಜ್ಞಾನದಿಂದ ತೊಗರಿಯಲ್ಲಿ 15-20 ಪ್ರತಿಶತ ಇಳುವರಿ ಹೆಚ್ಚುವುದೆಂದು ಮನವರಿಕೆ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ರೈತ ಉತ್ಪಾದಕ ಸದಸ್ಯರು, ಪರಿಶಷ್ಟ ಜಾತಿಯ ರೈತರು ಮತ್ತು ಯುವ ರೈತರು ಹುಮ್ಮಸ್ಸಿನಿಂದ ಭಾಗವಹಿಸಿದರು.