ಆಳಂದ: ಪಟ್ಟಣದಲ್ಲಿ ಲೋಕಶಾಹಿರ ಸಾಹಿತ್ಯರತ್ನ ಡಾ. ಅಣ್ಣಾಭಾವು ಸಾಠೆ ರವರ 104 ನೇ ಜಯಂತೋತ್ಸವ ಕಾರ್ಯಕ್ರಮ ಮತ್ತು ಸುರ್ಯೋದಯ ಕಾದಂಬರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಾನಿಧ್ಯ ಪೂಜ್ಯ. ವಿಶ್ವನಾಥ ಕೊರಣೇಶ್ವರ ಸ್ವಾಮಿಜಿ ವಹಿಸಿದ್ದರು. ಶ್ರೀ ವಿಷ್ಣು ಭಾವು ಕಸಬೆ ಲಹುಜಿ ಶಕ್ತಿ ಸೇನೆ ಸಂಸ್ಥಾಪಕ ರಾಷ್ಟೀಯ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿದರು. ಶಿವಾಜಿ ಗಾಯಕವಾಡ ಅಣ್ಣಾ ಭಾವು ಸಾಠೆ ಕುರಿತು ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದಯಾನಂದ ಶೆರಿಕರ, ಶಂಕರರಾವ ದೇಶಮುಖ. ಮಲ್ಲಿನಾಥ ಮೂಲಗೆ, ಸುನಿಲ ಖಬಳೆ, ಅಂಬಾರಾಯ ಚಲಗೆರಿ , ರಮೇಶ ಪಾತ್ರೆ, ಆಕಾಶ ದೆಗಾಂವ ಲೇಖಕರಾದ ಬಾಬುರಾವ ಮಾನೆಕರ ಇನ್ನಿತರರು ಉಪಸ್ಥಿತರಿದ್ದರು. ಒಂ.ಪ್ರಕಾಶ ಪಾತ್ರೆ ಲಹುಜಿ ಶಕ್ತಿ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷರು ಅಧ್ಯಕ್ಷ ಸ್ಥಾನ ವಹಿಸಿದ್ದರು.
ಈ ಸಂದರ್ಭದಲ್ಲಿ ಮಹೇಶ ಕಾಂಬಳೆ ಶಿಕ್ಷಕರು ಸೂರ್ಯೋದಯ ಪುಸ್ತಕ ಪರಿಚಯ ಮಾಡಿಕೊಟ್ಟರು. ಪ್ರಾಸ್ತಾವಿಕ ಮತ್ತು ನಿರೂಪಣೆ ಪ್ರಲ್ಹಾದ ಸಿಂಧೆ ಮಾಡಿದರು. ಅಕ್ಷತಾ ಪಾತ್ರೆ ಸ್ವಾಗತಿಸಿದರು. ಸಂದೇಶ ಪಾತ್ರೆ ವಂದಿಸಿದರು.