ಯಾದಗಿರಿ:ಪ್ರಜಾಪ್ರಭುತ್ವ ದಿನ ಆಚರಣೆ ಕಾರ್ಯಕ್ರಮ ವಡಗೇರ ತಾಲೂಕಿನ ಅಜೀಮ್ ಪ್ರೇಮ್ ಜಿ ಶಾಲೆಯ ಹತ್ತಿರ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಸವೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಹಿಳಾ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಶಾಲೆಯ ಶಿಕ್ಷಕರು ಮಕ್ಕಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ರಾಜಕೀಯ ಮುಖಂಡರು ಭಾಗವಹಿಸಿದ್ದರು ಮೊದಲಿಗೆ ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಿದರು.
ನಂತರ ಸಂವಿಧಾನ ಪೀಠಿಕೆಯನ್ನುವೆಂಕಟೇಶ ಕಟ್ಟಿಮನಿ ಬೊದಿಸಿದರು ಬೀದರ್ ದಿಂದ ಚಾಮರಾಜನಗರದವರೆಗೆ ಈ ಒಂದು ಮಾನವ ಸರಪಳಿ ಕಾರ್ಯಕ್ರಮ ಸುಮಾರು 2500 ಕಿಲೋಮೀಟರ್ ವರೆಗೆ ಹಮ್ಮಿಕೊಳ್ಳಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ವಡಗೇರ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಸಂಗ್ವರ ಸರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ಗ್ರಾಮ ಪಂಚಯತ ಸದಸ್ಯರು ಶ್ರೀ ಬಸವೇಶ್ವರ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿಯಾದ ಪದ್ಮಾವತಿ ಕಟ್ಟಿಮನಿ ಎಮ್ ಬಿ ಕೆ ಶಶಿಕಲಾ ಕೃಷಿ ಸಕಿ ಭಾಗಮ್ಮ ಪಶುಸಕ್ಕಿ ಸಾಬಮ್ಮ ಎಲ್ ಸಿ ಆರ್ ಪಿ ಭಾಗ್ಯಶ್ರೀ ಸುಮಾ ವೆಂಕಟೇಶ್ ಕಟ್ಟಿಮನಿ ಶಾಲೆಯ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಸಿಬ್ಬಂದಿ ಕೂಲಿ ಕಾರ್ಮಿಕರು ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.