ಕಲಬುರಗಿ: ಇಲ್ಲಿನ ಶ್ರೀನಿವಾಸ ಸರಡಗಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಉದ್ದೇಶಪೂರ್ವಕವಾಗಿ ಕಡೆಗಣಿಸಿ,ಧ್ವಜಾರೋಹಣ ಮಾಡದೆ ನಿರ್ಲಕ್ಷ ತೋರಿ ಅವಮಾನವೆಸಗಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ವಿಭಾಗದಿಂದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೆ. 17 ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಕಲ್ಯಾಣ ಕರ್ನಾಟಕ ಕಲಬುರಗಿ ವಿಭಾಗದ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳು ಆಡಳಿತ ಕಚೇರಿ, ಖಾಸಗಿ ಕಂಪನಿಗಳು ಹಾಗೂ ಎಲ್ಲಾ ಸಂಸ್ಥೆಗಳಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಈ ಎಲ್ಲಾ ಕಡೆಗಳಲ್ಲಿ ಧ್ವಜಾರೋಹಣ ಮಾಡಿ ವಿಶೇಷ ಆಚರಣೆ ಮಾಡುವಂತೆ ಸರಕಾರದ ನಿರ್ದೇಶನವಿರುತ್ತದೆ.
ಕಲಬುರಗಿ ಜಿಲ್ಲೆ ಶ್ರೀನಿವಾಸ ಸರಡಗಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ಧ್ವಜಾರೋಹಣ ಮಾಡದ ಸರಕಾರದ ನಿರ್ದೇಶನ ಮತ್ತು ಆದೇಶವನ್ನು ಉದ್ದೇಶಪೂರ್ವಕವಾಗಿ ಕರ್ತವ್ಯ ಲೋಪವನ್ನುವೆಸಗಿರುವ ವಿಮಾನ ನಿಲ್ದಾಣದ ನಿರ್ದೇಶಕರು ಹಾಗೂ ಅಧಿಕಾರಿಗಳ ರಾಷ್ಟ್ರೀಯ ಧ್ವಜ ಅವಮಾನ ಕಾಯ್ದೆ 1971 ಮತ್ತು ತಿದ್ದುಪಡಿ 2002 ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಒಳಪಡಿಸಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಘಟನೆ ಅಧ್ಯಕ್ಷ ಬಸವಲಿಂಗಪ್ಪ ಎಸ್ ಬಿರಾದಾರ್, ಕಿಶೋರ್ ಆರ್ ಗಾಯಕವಾಡ್,ಭೀಮಣ್ಣಗೌಡ ಪರಗೊಂಡ, ಸಂದೀಪ್ ವಿ ಮಾಳಗೆ ಅವರು ಠಾಣೆಗೆ ದೂರು ನೀಡಿದ್ದಾರೆ.