ಕಲಬುರಗಿ: ನಗರದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿ ಸಂಸ್ಥೆ ಮೈಸೂರು & ಪ್ರಾದೇಶಿ ಕೇಂದ್ರ ವತಿಯಿಂದ ವಿವಿಧ ತಾಲೂಕಿನ ಗ್ರಾಮ ಪಂಚಾಯತಿಯ ಮಟ್ಟದ ಸ್ಥಳೀಯ ಮಹಿಳಾ ಒಕ್ಕೂಟದ ಸದಸ್ಯರಿಗೆ ಘನ-ತಾಜ್ಯ ನಿರ್ವಹಣೆ ಕುರಿತು 3 ದಿನಗಳ ವಸತಿ ಸಹಿತ ಸುಸ್ಥಿರ ನಡೆ ಸ್ವಚ್ಛತೆ ಕಡೆಗೆ 12 & 13ನೇ ತಂಡ(ಬ್ಯಾಚ್)ದಲ್ಲಿ ಪುನಶ್ಚೇತನ ತರಬೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕಾರದ ಶಿವಪುತ್ರಪ್ಪ ಗೊಬ್ಬರು, ಡಾ.ರಾಜು ಕಂಬಳಿಮಠ, ರವರು ತರಬೇತಿಯ ಗುರಿ-ಉದ್ದೇಶ ಕುರಿತು ಮಾತಾನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸತೀಶಕುಮಾರ ಸುಲೇಪೇಟ, ಪುಷ್ಪಾ ಬೆಳಮಗಿ, ಸಂಗೀತಾ ಬಡಿಗೇರ್ ಹಾಗೂ ಸಂಗೀತಾ ರಡ್ಡಿ, ಆಗಮಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿಷಯ ಮಂಡನೆ ಮಾಡಿದರು.ಕಾರ್ಯಕ್ರಮದ ಮೊದಲಿಗೆ ತರಬೇತಿ ಸಹಾಯಕರಾದ ಅರ್ಚನಾ ಸ್ವಾಗತಿಸಿದರು, ಇನ್ನೊರವ ತರಬೇತಿ ಸಹಾಯಕರಾದ ಅಶ್ವೀನಿ ಪೂಜಾರಿ ವಂದಿಸಿದರು.