ಶೈಕ್ಷಣಿಕ ಸಮಸ್ಯೆಗಳ ನಿವಾರಿಸುವಂತೆ ಗು.ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0
211

ಕಲಬುರಗಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರಗಿ ಮಹಾನಗರದ ವತಿಯಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಖಂಡಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಮಾಡಲಾಯಿತು.

ಸರಿಯಾದ ಸಮಯಕ್ಕೆ ಪರೀಕ್ಷೆಗಳನ್ನು ನಡೆಸಬೇಕು. ಅನೇಕ ಕಾಲೇಜುಗಳಲ್ಲಿ ಪರೀಕ್ಷೆಯಲ್ಲಿ ಅಕ್ರಮ ನಡೆಸುತ್ತಿರುವುದನ್ನು ತಡೆಯಬೇಕ. ಅಂಕಪಟ್ಟಿ ಗೊಂದಲ ನಿವಾರಣೆ ಮಾಡಬೇಕು ಮತ್ತು ತ್ವರಿತವಾಗಿ ಕಂಪಟ್ಟಿ ವಿತರಣೆ ಮಾಡಬೇಕು, ಆಡಳಿತ ವ್ಯವಸ್ಥಿಯನ್ನು ಚುರುಕುಗೊಳ್ಳಿಸಬೇಕು. ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

Contact Your\'s Advertisement; 9902492681

ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ ಸರಿಯಾದ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಗಂಗಾಧರ ಹಂಜಗಿ ಅವರ ಮಾತನಾಡಿ, ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಪಾಂಡು ಮೋರೆ, ಜಿಲ್ಲಾ ಸಂಚಾಲಕ ಮಂಜುನಾಥ್ ಕೊಣ್ಣೂರ್, ತಾಲೂಕ ಸಂಚಾಲಕ ಮನೋಜ್ ಪಾಟೀಲ್, ನಗರ ಕಾರ್ಯದರ್ಶಿ ಶಾಂತಕುಮಾರ್, ಕಾರ್ಯಕರ್ತರಾದ ಶರಣು, ಆದಿತ್ಯ, ದರ್ಶನ್, ಬಸವರಾಜ್, ದಿಲೀಪ್, ಬಸವರಾಜ್, ಶ್ರವಣ್, ಸಂಜಯ್, ರೋಹಿತ್, ಪ್ರದೀಪ್, ಚೇತನ್, ಅಂಕುಶ್, ರಾಹುಲ್, ಶಿವರಾಜ್, ಅರುಣ ಸ್ನೇಹಾ, ಅರ್ಪಿತಾ,ಅನನ್ಯಾ, ಹಾಗೂ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here