ವಾಡಿ: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅದ್ಭುತ ಪ್ರತಿಭೆ ಪ್ರದರ್ಶಿಸುವ ಮೂಲಕ ವಿಭಾಗ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಸಾಧಕ ಪ್ರತಿಭೆಗಳನ್ನು ಬೆಳಗಿನ ಬಳಗದ ಸದಸ್ಯರು ಸತ್ಕರಿಸಿದರು. ವಾಲಿಬಾಲ್ ಮತ್ತು ಪುಸ್ತಕಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಗೌರವಿಸಿ ಪ್ರೋತ್ಸಾಹಿಸಿದರು.
ಈ ವೇಳೆ ಮಾತನಾಡಿದ ಬೆಳಗಿನ ಬಳಗದ ಯೋಗ ಶಿಕ್ಷಕ ವೀರಣ್ಣ ಯಾರಿ, ಸರ್ಕಾರಿ ಶಾಲೆಗಳಲ್ಲೂ ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂಬ ಸತ್ಯವನ್ನು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಆಟದಲ್ಲಿ ವಿಭಾಗ ಮಟ್ಟಕ್ಕೆ ಹಾಗೂ ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತೋರಿಸಿಕೊಟ್ಟಿದ್ದಾರೆ.
ದೈಹಿಕ ಶಿಕ್ಷಕರ ಶ್ರಮ ಮತ್ತು ಪ್ರಾಂಶುಪಾಲರ ಪ್ರೋತ್ಸಾಹವೇ ಈ ಪ್ರತಿಭೆಗಳು ರಾಜ್ಯದಲ್ಲಿ ಗುರುತಿಸಿಕೊಳ್ಳು ಸಿದ್ಧರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಾಡಿ ಮಕ್ಕಳು ಕ್ರೀಡಾ ಪ್ರತಿಭೆ ಮೆರೆಯುವ ಮೂಲಕ ನಾಡಿನಲ್ಲಿ ಮಿಂಚಬೇಕು. ಅಗತ್ಯ ಸಹಾಯ ಸಹಕಾರ ಬೆಳಗಿನ ಬಳಗ ಮಾಡಲಿದೆ ಎಂದರು.
ಪ್ರಾಂಶುಪಾಲರಾದ ಉದಯ ಧರೆಣ್ಣವರ್, ಶಂಕರ ರಾಠೋಡ ಹಾಗೂ ದೈಹಿಕ ಶಿಕ್ಷಕರಾದ ಶ್ರೀನಾಥ ಇರಗೊಂಡ, ಶಂಕರಲಿಂಗ ಕೋಡಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಪ್ರತಿಭೆಗಳಿಗೆ ಸಿಹಿ ತಿನಿಸಿ ಶುಭಕೋರಲಾಯಿತು. ಬೆಳಗಿನ ಬಳಗದ ಜಯದೇವ ಜೋಗಿಕಲ್‍ಮಠ, ಕಾಶೀನಾಥ ಶೆಟಗಾರ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮಲ್ಲಯ್ಯಸ್ವಾಮಿ ಮಠಪತಿ, ಶಿವಪ್ಪ ಮುಂಡರಗಿ, ದೇವಿಂದ್ರ ದೊಡ್ಡಮನಿ, ಅರುಣಕುಮಾರ ಪಾಟೀಲ, ಆನಂದ ಇಂಗಳಗಿ, ನಾಗರಾಜ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.