ಕಲಬುರಗಿ: ಖ್ಯಾತ ವಾಗ್ಮಿಗಳು ಸಾಮಾಜಿಕ ಸಾಂಸ್ಕೃತಿಕ ಕಾರ್ಯಕರ್ತ ಬಿಜೆಪಿಯ ನಾಯಕಿ ಹೈದರಾಬಾದಿನ ಡಾಕ್ಟರ್ ಮಾಧವಿ ಲತಾ ಅವರು ಬಿಜೆಪಿಯ ಯುವ ಮುಖಂಡರಾದ ನಿತಿನ್ ಗುತ್ತೇದಾರ್ ಜೊತೆ ಸುದೀರ್ಘ ಚರ್ಚೆ ನಡೆಸಿ ದೇಶ ನಿರ್ಮಾಣದಲ್ಲಿ ಯುವಕರ ಅರ್ಪಣಾಮನೋಭಾವದ ಬಗ್ಗೆ ಯುವಕರನ್ನು ಉದ್ದೇಶಿಸಿ ಮಾರ್ಗದರ್ಶನವಿತ್ತರು.
ನಿತಿನ್ ಗುತ್ತೇದಾರ್ ಅವರ ಸ್ವಗೃಹ “ಕಲ್ಪನಾ”ಅಲ್ಲಿ ಸೆಪ್ಟೆಂಬರ್ 24 ರಂದು ಡಾ. ಮಾಧವಿ ಲತಾ ಮತ್ತು ನಿತಿನ್ ಗುತ್ತೇದಾರ್ ಜೊತೆ ಸೇರಿದ ಯುವಕರಿಗೆ ಮಾರ್ಗದರ್ಶನ ನೀಡಿದರು.
ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು. ಧರ್ಮ ರಕ್ಷಣೆಗೆ ಯುವಕರು ಪ್ರತಿಬದ್ಧರಾಗಿ ಭದ್ರತೆಯಿಂದ ಕಾರ್ಯನಿರ್ವಹಿಸಲು ಯುವ ಮುಖಂಡ ನಿತಿನ್ ಗುತ್ತೇದಾರ್ ನಾಯಕತ್ವದಲ್ಲಿ ಒಗ್ಗೂಡಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು ಏಕಾದರ ಸಹೋದರರಂತೆ ಎಲ್ಲರೂ ಒಟ್ಟಿಗೆ ಸೇರಿ ಸಂರಕ್ಷಣೆ ಕಾರ್ಯದಲ್ಲಿ ತೊಡಗಿ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಉತ್ಸಾಹಿ ಯುವಕರ ತಂಡವು ಡಾ. ಮಾಧವಿ ಲತಾ ಅವರಿಗೆ ಶಾಲು ಹಾರದೊಂದಿಗೆ ಸನ್ಮಾನಿಸಿ ಜೈಕಾರ ಮೊಳಗಿಸಿ ಸಂತಸ ಹಂಚಿಕೊಂಡರು. ಇಂದಿನ ಯುವಕರಿಗೆ ಮಾಧವಿ ಲತಾ ರೋಲ್ ಮಾಡೆಲ್ ನಾಯಕಿಯಾಗಿದ್ದು ಕಲ್ಬುರ್ಗಿ ಜಿಲ್ಲೆಗೆ ಅವರ ಭೇಟಿಯಿಂದ ಶಕ್ತಿ ಸಂಚಲನಗೊಂಡಿದೆ. ಅಂತಹ ಧೀಮಂತ ನಾಯಕಿಯ ಮಾರ್ಗದರ್ಶನದಲ್ಲಿ ಮುಂದುವರಿದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿ ಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ನಿತಿನ್ ಗುತ್ತೇದಾರ್ ಯುವಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ನಗರ ಅಧ್ಯಕ್ಷರಾದ ಚಂದು ಪಾಟೀಲ್, ಬಿಜೆಪಿ ವಕ್ತಾರೆ ಡಾ. ಸುಧಾ ಹಾಲಕಾಯಿ ಮುಖಂಡರಾದ ಶರಣು ಪಪ್ಪಾ, ಡಾ. ಸದಾನಂದ ಪೆರ್ಲ, ನ್ಯಾಯವಾದಿ ಸುರೇಶ್ ಟೆಂಗಳಿ, ನಾಗೇಂದ್ರ ಕಬಾಡೆ, ಮಲ್ಲಿಕಾರ್ಜುನ ಗಂಗಾ ಡಾ. ಚರಣ್, ಸುಮಂಗಲಾ ಚಕ್ರವರ್ತಿ ಸಿದ್ದರಾಜ್ ಬಿರಾದಾರ್ ಜಗದೀಶ್ ಗುತ್ತೇದಾರ್ ಕಲ್ ಬೇನೂರ್ ಮತ್ತಿತರರು ಉಪಸ್ಥಿತರಿದ್ದರು.