ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಲಬುರ್ಗಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ ರಾಕೇಶ್,ಡಾ ಸೌಮ್ಯ,ಡಾ ಬಬಿತಾ,ಡಾ ಕಮರುನ್ನಿಸಾ ವಿದ್ಯಾರ್ಥಿಗಳಿಗೆ ಉಚಿತ ತಪಾಸಣಾ ನಡೆಸಿ ಸಲಹೆ ನೀಡಿದರು. ಸುಮಾರು 100 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದ ಲಾಭ ಪಡೆದುಕೊಂಡರು.
ಕಾಲೇಜಿನ ಉಪನ್ಯಾಸಕರಾದ ಐ ಕೆ ಪಾಟೀಲ್, ಡಾ ಪಾಂಡುರಂಗ ಚಿಂಚನಸೂರ, ಗುರುಶಾಂತ್ ಹೂಗಾರ, ಸಂಗೀತಾಸಡಕೀನ್, ಮಲಕಮ್ಮ ಪಾಟೀಲ್, ಅಶ್ವಿನಿ ಪಾಟೀಲ್, ಭಾಗ್ಯಶ್ರೀ ಎಸ್ ಬೇನೂರ ಉಪಸ್ಥಿತರಿದ್ದರು.