29 ರಂದು ಇಡೀ ದಿನ `ಕಾವ್ಯ ಸಂಸ್ಕøತಿ ಯಾನ’

ಕಲಬುರಗಿ; ಬೆಂಗಳೂರಿನ ರಂಗಮಂಡಲ ಹಾಗೂ ಕಲಬುರಗಿಯ ರಾಷ್ಟ್ರಕೂಟ ಸಾಂಸ್ಕøತಿಕ ಪ್ರತಿಷ್ಠಾನ ಸಹಯೋಗದಲ್ಲಿ ಸೆ.29 ರಂದು ಕಲಾನಿಕೇತನ ಸಭಾಂಗಣದಲ್ಲಿ ಕಾವ್ಯ ಸಂಸ್ಕøತಿ ಯಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ಬಹುಭಾಷಾ ಕವಿ ಡಾ.ಕಾಶಿನಾಥ ಅಂಬಲಗೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾವ್ಯ ಯಾನದಲ್ಲಿ ಕಾವ್ಯ ದೀವಟಿಗೆಯ ಮೆರವಣಿಗೆ, ಉದ್ಘಾಟನೆ, ಜಿಲ್ಲೆಯ ನೂರಕ್ಕೂ ಹೆಚ್ಚು ಕವಿಗಳು ಭಾಗವಹಿಸುವ ಎರಡು ಕವಿಗೋಷ್ಠಿಗಳು, ಸರ್ವಾಧ್ಯಕ್ಷರೊಂದಿಗೆ ಸಂವಾದ ಮತ್ತು ಸಮಾರೋಪ ಸಮಾರಂಭ ಜರುಗಲಿವೆ ಎಂದು ಕಾರ್ಯಕ್ರಮದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಮಹಾಮನೆ ಹಾಗೂ ಜಿಲ್ಲಾ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಕ್ಕೆ ಜಗತ್ ಸರ್ಕಲ್‍ದಿಂದ ಕಲಾನಿಕೇತನದವರೆಗೆ ಸರ್ವಾಧ್ಯಕ್ಷರೊಂದಿಗೆ ಬೆಂಗಳೂರಿನಿಂದ ಆಗಮಿಸಿರುವ ಕಾವ್ಯ ದೀವಟಿಗೆಯ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10.15 ಕ್ಕೆ ಸಮಾರಂಭವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಉದ್ಘಾಟಿಸುವರು. ಅವಧಿ ಸಂಪಾದಕ ಜಿ.ಎನ್.ಮೋಹನ್, ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಿ.ಜಿ.ಅಂದಾನಿ, ಹಿರಿಯ ಕವಯಿತ್ರಿ ಹೇಮಾ ಪಟ್ಟಣಶೆಟ್ಟಿ ಹಾಗೂ ಗುಲ್ಬರ್ಗ ವಿವಿ ಕನ್ನಡ ವಿಭಾಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮುಖ್ಯ ಅತಿಥಿಗಳಾಗಿರುವರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಪ್ರಾಸ್ತಾವಿಕ ಮಾತನಾಡುವರು. ಡಾ.ಶಿವರಂಜನ್ ಸತ್ಯಂಪೇಟೆ ಸ್ವಾಗತಿಸುವರು.

ನಂತರ 11.30 ಕ್ಕೆ ನಡೆಯಲಿರುವ ಮೊದಲ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕನಕ ಪುರಸ್ಕøತ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಲೇಖಕಿ ಡಾ. ಶೈಲಜಾ ಬಾಗೇವಾಡಿ ಆಶಯ ನುಡಿಗಳಾಡುವರು. 50 ಕ್ಕೂ ಹೆಚ್ಚು ಕವಿಗಳು ಕವಿತಾ ವಾಚನ ಮಾಡುವರು.

ಮಧ್ಯಾಹ್ನ 2ಕ್ಕೆ ಎರಡನೇ ಕವಿಗೋಷ್ಠಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ನಾಗೇಂದ್ರ ಮಸೂತಿ ಆಶಯ ನುಡಿಗಳಾಡುವರು. 50 ಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವಿತೆ ವಾಚಿಸುವರು.

ನಂತರ 4 ಕ್ಕೆ ಸರ್ವಾಧ್ಯಕ್ಷ ಡಾ.ಕಾಶಿನಾಥ ಅಂಬಲಗೆ ಅವರೊಂದಿಗೆ ಸಂವಾದ ನಡೆಯಲಿದೆ. ಲೇಖಕರಾದ ಡಾ.ವಿಕ್ರಮ ವಿಸಾಜಿ, ಡಾ.ಸೂರ್ಯಕಾಂತ ಸುಜ್ಯಾತ, ಡಾ.ಅಪ್ಪಗೆರೆ ಸೋಮಶೇಖರ, ಶಂಕ್ರಯ್ಯ ಘಂಟಿ, ಪ್ರಭಾಕರ ಜೋಶಿ, ಡಾ.ಶ್ರೀಶೈಲ ನಾಗರಾಳ, ಸಂಧ್ಯಾ ಹೊನಗುಂಟಿಕರ್, ಡಿ.ಎಂ.ನದಾಫ್ ಅವರು ಸಂವಾದಕರಿದ್ದು, ಮಹಿಪಾಲರೆಡ್ಡಿ ಅವರು ಸಮನ್ವಯಕಾರರಾಗಿದ್ದಾರೆ.

ಗಾಯಕರಾದ ಬಾಬುರಾವ ಕೋಬಾಳ, ಕಿರಣ್ ಪಾಟೀಲ, ಕವಿರಾಜ ನಿಂಬಾಳ, ಕಾವೇರಿ ಹಿರೇಮಠ ಅವರಿಂದ ಪದ-ಪಾದ ಆಯೋಜಿಸಲಾಗಿದೆ. ನಂತರ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಕಾಶಿನಾಥ ಅಂಬಲಗೆ ಮಾತನಾಡುವರು. ಸಮಾಜಮುಖಿ ಚಿಂತಕಿ ಕೆ.ನೀಲಾ ಸಮಾರೋಪ ನುಡಿಗಳಾಡುವರು.

ಡಾ.ಬಸವರಾಜ ಸಾದರ, ಹಿರಿಯ ರಂಗಕರ್ಮಿ ಸಿ.ಕೆ.ಗುಂಡಣ್ಣ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪುಸ್ತಕ ಪ್ರಕಾಶಕ ಬಸವರಾಜ ಕೋನೆಕ್ ಮುಖ್ಯ ಅತಿಥಿಗಳಾಗಿರುವರು. ಡಾ.ಎಂ.ಬಿ.ಕಟ್ಟಿ ಕಾರ್ಯಕ್ರಮ ನಿರ್ವಹಿಸುವರು ಕಾರ್ಯಕ್ರಮದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಮಹಾಮನೆ ಹಾಗೂ ಜಿಲ್ಲಾ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

6 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

13 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

13 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

24 hours ago