ಕಲಬುರಗಿ; ಬ್ಯಾಂಕ್ ಸಾಲದ ನೋಟಿಸ್ ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊತಂಗಲ ರೈತ ಪಾಂಡಪ್ಪಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘಟನೆ ಸರಕಾರಕ್ಕೆ ಆಗ್ರಹಿಸಿದೆ.
ಬ್ಯಾಂಕ್ ಸಾಲದ ನೋಟಿಸ್ ಗೆ ಹೆದರಿ ಪೊತಂಗಲ್ ಗ್ರಾಮದ ನಿವಾಸಿ ಪಾಂಡಪ್ಪಾ ತಂದೆ ತಿಪ್ಪಣ್ಣ ಕೊರವನ್ ಆತ್ಮಹತ್ಯೆ ಮಾಡಿಕೊಂಡಿದ್ದುಇವರಿಗೆ 2 ಗಂಡು ಮಕ್ಕಳು ಒಬ್ಬ ಹೆಣ್ಣುಮಗಳು ಇದ್ದಾರೆ. ಪತ್ನಿ ಶಾಮಮ್ಮಾ ವೈ 38 ಪೊತಂಗಲ್ ಗ್ರಾಮದ 3 ಎಕರೆ ಜಮೀನು ಹೊಂದಿದ್ದಾರೆ.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಿಡುಗುಂದ ಬೆಳೆ ಸಾಲ 1 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಖಾಸಗಿ 2 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು ಪಾಂಡಪ್ಪನ ಹೊಲದಲ್ಲಿ ತೊಗರಿ ಮತ್ತು ಹೆಸರು ಬೆಳೆ ಬೆಳೆದು ಸಾಲ ತಿರಿಸೊಣ ಎಂದು ಅವರ ಪತ್ನಿಗೆ ಮನೆಯಲ್ಲಿ ಹೇಳಿದ ಆದರೆ ನಿಡಗುಂದಾ ಬ್ಯಾಂಕ್ ಸಾಲದ ನೋಟಿಸ್ ಗೆ ಹೆದರಿಸಿ ಸಾಲದ ಒಸುಲಾತಿಗಾಗಿ ಪಾಂಡಪ್ಪನ ಮನೆಗೆ ಬಂದು ಒತ್ತಡ ಹಾಕಿದರಿಂದ ಎತ್ತುಗಳು ಮಾರಿ ಬ್ಯಾಂಕ್ ಸಾಲ ತಿರಿಸಲು ಮುಂದಾಗಿದ್ದರು.
ಎತ್ತು ಮಾರಿದರೆ ಜಮೀನು ಉಳುಮೆ ಮಾಡಿ ನಮ್ಮ ಉಪ ಜೀವನ ನಡೆಸುವುದು ಹೆಗೆಂದು ಹೆಂಡತಿಯ ಆತಂಕ್ಕೆ ತೊಗರಿ ಕಟಾವು ರಾಷಿ ಮಾಡಿ ಬ್ಯಾಂಕ್ ಸಾಲ ಕಟ್ಟಿದ್ದಾರೆ ಆಯಿತು ಎಂದು ಕೊಂಡಿದ್ದರು ಆದರೆ ತೊಗರಿ ಬೆಳೆ ವಿಪರೀತ ಮಳೆಗೆ ಹಾಳಾಗಿದ್ದರಿಂದ ಮಕ್ಕಳ ವಿದ್ಯಾಭ್ಯಾಸ ಸಂಸಾರದ ನಿರ್ವಹಣೆ ನಡೆಸುವುದು ಸಂಕಷ್ಟ ಮಯವಾಗಿರುವ ವೇಳೆ ಬ್ಯಾಂಕ್ ಅಧಿಕಾರಿಗಳು ಒತ್ತಡದಿಂದ ಮನನೊಂದ ಮನೆ ವಳಗಡೆ ಚಿಲಕ್ ಹಾಕಿಕೊಂಡು ಬೆಳೆಗೆ ಔಷಧೀಯ ಸಿಂಪರ್ಣೆ ಮಾಡುವ ಪೆಟ್ರೋಲ್ ಮಿಷನ್ ಒಳಗಡೆ ಇರುವ ಪೆಟ್ರೋಲ್ ಸುರಿದು ಕೊಂಡಿದ್ದು ಆಹ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವೇಳೆ ಬೆಂಕಿ ನಂದಿಸಿ ಕಲಬುರಗಿ ಜೇಮ್ಸ್ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಯಾಗದೆ ಪಾಂಡಪ್ಪ ಮೃತಪಟ್ಟಿರುತ್ತಾನೆ. ಈ ಬಡ ರೈತನ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮತ್ತು ಜಿಲ್ಲೆಯಲ್ಲಿ ಈ ವರ್ಷ ಬಂಪರ್ ಬೆಳೆಗಳು ಬೆಳೆದಿದೆ. ಆದರೆ ಅತಿವೃಷ್ಟಿ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ರೈತರು ಸಾಲದ ನಡುವಿನಲ್ಲಿ ಒದ್ದಾಡುವ ಪರಿಸ್ಥಿತಿಯಲ್ಲಿದ್ದಾರೆ.
ರಾಷ್ತ್ರೀಕೃತ ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ಸಾಲ ಒಸುಲಾತಿ ಮಾಡುವುದು ತಕ್ಷಣವೇ ನಿಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶರಣಬಸಪ್ಪಾ ಮಮಶೆಟ್ಟಿ, ರಾಯಪ್ಪಾ ಹುರುಮುಂಜಿ ಹಾಗೂ ದಿಲೀಪ್ ನಾಗೂರೆ ಒತ್ತಾಯಿಸಿದ್ದಾರೆ.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…