ಸಾಮಾಜಿಕ ನ್ಯಾಯದ ಹೆಸರ್ಹೇಳೀ ಅಧಿಕಾರಕ್ಕೆ ಬಂದ ಸರ್ಕಾರದಿಂದಲೇ ಮೋಸ

0
89

ವಾಡಿ: ಸಾಮಾಜಿಕ ನ್ಯಾಯದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸಹ ಮತ ಹಾಕಿದ ನಮ್ಮನ್ನೇ ನಿರಂತರವಾಗಿ ಮೋಸ ಮಾಡುತ್ತಿರುವುದು ನಮ್ಮ ದುರಂತ ಎಂದು ದಸಂಸ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ ವಿಷಾಧ ವ್ಯಕ್ತಪಡಿದರು.

ಪಟ್ಟಣದ ಸಿದ್ಧಾರ್ಥ ಭವನದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13, 14 ರಂದು ನಡೆಯುವ ಜಿಲ್ಲಾ ಮಟ್ಟದ ಧಮ್ಮಕ್ರಾಂತಿ ಉತ್ಸನ ಯಶಸ್ವಿಗೆ ಚಿತ್ತಾಪುರ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾಕಷ್ಟು ಪ್ರಯತ್ನಗಳ ನಡುವೆಯೂ ಬೌದ್ಧರು ಎಂದು ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ ಸಾಮ್ರಾಟ್ ಅಶೋಕನ ದಕ್ಷಿಣ ರಾಜಧಾನಿ ಹಾಗೂ ತನ್ನ ಕೊನೆಯ ದಿನಗಳು ಇಲ್ಲಿಯೇ ಕಳೆದಿದ್ದಾನೆ ಎನ್ನಲಾದ ಸನ್ನತಿ (ಕನಗನಹಳ್ಳಿ) ಕರ್ನಾಟಕ ಬೌದ್ಧರ ಪವಿತ್ರ ಸ್ಥಳ. ಹೆಸರಿಗೆ ಮಾತ್ರ ಎಂಬಂತೆ ಸನ್ನತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ ಈ ಐತಿಹಾಸಿಕ ಕ್ಷೇತ್ರದ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ವಿಷಾಧನೀಯ ಎಂದರು.

Contact Your\'s Advertisement; 9902492681

ಭಾರತೀಯ ಬೌದ್ಧ ಮಹಾ ಸಭಾದ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳ ಮಾತನಾಡಿ, ರಾಜು ತಾವಡೆ, ದಿಗಂಬರ ಬೆಳಮಗಿ, ಕಲಬುರ್ಗಿ ನಗರದ ಧಮ್ಮದೀಕ್ಷಾ ಭೂಮಿಯಲ್ಲಿ ಅ. 13 ಮತ್ತು 14 ರಂದು 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಧಮ್ಮ ಕ್ರಾಂತಿ ಉತ್ಸವ ಜರುಗಲಿದೆ.

13 ರಂದು ಕಲಾತ್ಮಕ ನಾಟಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.14 ರಂದು ಧಮ್ಮದೀಕ್ಷಾ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗುವುದು. ಬೌದ್ಧ ಭಂತೇಜಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ದಿ ಜೀವಿಗಳು ಸೇರಿದಂತೆ ಸುಮಾರು 25 ರಿಂದ 30 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು.

ಸುರೇಶ ಮೆಂಗನ, ಲಕ್ಷ್ಮೀಕಾಂತ ಹುಬ್ಳಿ, ಸಂತೋಷ ಮೇಲ್ಮನಿ, ಸಾಯಿಬಣ್ಣ ಬನ್ನಟ್ಟಿ, ರಾಜು ಕಪನೂರ, ಶರಣಬಸ್ಸು ಶಿರೂರಕರ, ಮಾತನಾಡಿದರು. ಶರಣಬಸ್ಸು ಸಿರೂರಕರ ಮಾತನಾಡಿದರು. ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.

ದಿನೇಶ ದೊಡ್ಡಮನಿ, ಸತೀಶ ಬಟ್ಟರ್ಕಿ, ರಾಘವೇಂದ್ರ ಫರತಾಬಾದ, ಮಲ್ಲೇಶ ನಾಟೇಕರ, ಮಲ್ಲಣ್ಣ ಮಸ್ಕಿ, ರಣಧೀರ ಹೊಸಮನಿ, ಸಂತೋಷ ಜೋಗೂರ, ಶ್ರೀಮಂತ ಭಾವಿಮನಿ, ಶಿವಯೋಗಿ ದೇವಿಂದ್ರಕರ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here