ಶಹಾಬಾದ: ಸತ್ಯ, ಅಹಿಂಸೆ, ಶಾಂತಿಯ ಮೂಲಮಂತ್ರದ ಮೂಲಕ ಇಡೀ ಜಗತ್ತಿಗೆ ಹೆಸರುವಾಸಿಯಾದ ಮಹಾತ್ಮ ಗಾಂಧೀಜಿ ಹಾಗೂ ಪ್ರಾಮಾಣಿಕತೆಯ ಮೂಲಕ ಎಲ್ಲರಿಗೂ ಮಾದರಿಯಾದ ಲಾಲಾಬಹಾದ್ದೂರ್ ಶಾಸ್ತ್ರಿ ಅವರು ಈ ನಾಡು ಕಂಡ ಮಹಾನ್ ವ್ಯಕ್ತಿಗಳು ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.
ಅವರು ಬುಧವಾರ ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸೇವಾ ಪಾಕ್ಷೀಕ ಅಭಿಯಾನದ ಅಡಿಯಲ್ಲಿ ಹಮ್ಮಿಕೊಂಡಿದ್ದ ಗಾಂಧೀ ಜಯಂತಿ ಹಾಗೂ ಲಾಲಾಬಹಾದ್ದೂರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಾಂಧೀಜಿಯವರು ಯಾವತ್ತಿಗೂ ಸ್ವಚ್ಛತೆ ಬಗ್ಗೆ ಒತ್ತು ನೀಡಿದವರು. ಎಲ್ಲಿ ಸ್ವಚ್ಛತೆ ಇದೆ ಅಲ್ಲಿ ದೇವರು ಇರುತ್ತಾನೆ ಎಂದು ನಂಬಿದವರು. ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಯೋಜನೆ ಮೂಲಕ ಮಹಾತ್ಮ ಗಾಂಧೀಜಿಯವರ ಕಂಡ ಕನಸನ್ನು ನನಸು ಮಾಡುತ್ತಿದ್ದಾರೆ.
ಗಾಂಧೀಜಿಯವರು ತಾಳ್ಮೆ,ಸಂಯಮ ಹಾಗೂ ಬದ್ಧತೆಯಿಂದ ಈ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೋರಾಟ ನಡೆಸಿದರು.ಅದೇ ರೀತಿ ಪರಿಸರ ಸ್ವಚ್ಛತೆ ಕಾಪಾಡುವುದು ಸಹ ಅವರ ಮಂತ್ರವಾಗಿತ್ತು. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಬದುಕುವುದೇ ನಾವು ಗಾಂಧೀಜಿ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಮುಖಂಡ ದೇವದಾಸ ಜಾಧವ ಮಾತನಾಡಿ, ಬಾಪೂಜಿ ಹಾಗೂ ಲಾಲಬಹಾದ್ದೂರ್ ಶಾಸ್ತ್ರಿ ಅವರ ಚಿಂತನೆ ಸಾರ್ವಕಾಲಿಕ ಸತ್ಯವಾಗಿರುವ ಮೌಲ್ಯವನ್ನು ಒಳಗೊಂಡಿದೆ . ಆದ್ದರಿಂದ ನಾವೆಲ್ಲರೂ ಗಾಂಧೀ ಮಾರ್ಗದಲ್ಲಿ ನಡೆದು ಆದರ್ಶರಾಗಿ ಬೆಳೆಯೋಣ ಎಂದು ಹೇಳಿದರು.
ಮಹಾದೇವ ಗೊಬ್ಬೂರಕರ, ದೇವದಾಸ ಜಾಧವ, ಕನಕಪ್ಪ ದಂಡಗುಲಕರ, ಅಶೋಕ ಜಿಂಗಾಡೆ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಗೊವಿಂದ ಕುಸಾಳೆ, ರೇವಣಸಿದ್ದ ಮತ್ತಿಮಡು, ನಾರಾಯಣ ಕಂದಕೂರ, ಲೋಹಿತ ಮಳಖೇಡ, ಸಂತೋಷ ಪಾಟೀಲ, ಭಿಮಯ್ಯ ಗುತ್ತೆದಾರ, ಯಲ್ಲಪ್ಪ ದಂಡಗುಲಕರ, ಮೊಹನ ಘಂಟ್ಲಿ, ಶಶಿಕಲಾ ಸಜ್ಜನ, ನಂದಾ ಗುಡೂರ, ಪಾರ್ವತಿ ಪವಾರ, ನೀಲಗಂಗಮ್ಮ ಘಂಟ್ಲಿ, ಪದ್ಮಾ ಕಟಕೆ, ಸನ್ನಿಧಿ ಕುಲಕರ್ಣಿ, ಶ್ರೀನಾಥ್ ಪಾರಾ, ಅಂಬರೀಶ್ ಕಲ್ಯಾಣ, ವಿಜಯಕುಮಾರ್ ವಾಲಿ ಹಾಗೂ ಕಾರ್ಯಕರ್ತರು ಭಾಗವಹಿಸಿದರು.