ಕಲಬುರಗಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇದೇ ಅಕ್ಟೋಬರ್ 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಅವರಣದೊಳಗಿನ ಕಂದಾಯ ಸೇರಿ ವಿವಿಧ ಇಲಾಖೆಯ ನೌಕರರಿಗೆ ಉಚಿತ ಅರೋಗ್ಯ ತಪಾಸಣೆಯ ಆರೋಗ್ಯ ಮೇಳ ಆಯೋಜಿಸಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ ತಿಳಿಸಿದ್ದಾರೆ.
ಆರೋಗ್ಯ ಮೇಳದಲ್ಲಿ ಫಿಸಿಶಿಯನ್, ಮೂಳೇ ತಜ್ಞರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಕಿವಿ ಮತ್ತು ಗಂಟಲು ತಜ್ಞರು, ಚರ್ಮ ರೋಗ ತಜ್ಞರು, ಕ್ಯಾನ್ಸರ್ ತಜ್ಞರು, ನೇತ್ರ ತಜ್ಞರು, ದಂತ ತಜ್ಞರು, ಎನ್.ಸಿ.ಡಿ ಘಟಕದ ತಜ್ಞರು ಇರಲಿದ್ದು ಉಚಿತ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸಾರ್ವಜನಿಕರು, ಸರ್ಕಾರಿ ನೌಕರರು ಇದರ ಲಾಭ ಪಡೆಯಬೇಕೆಂದು ಅವರು ಕೋರಿದ್ದಾರೆ.