ಚಿಂಚೋಳಿ ಕ್ಷೇತ್ರದಲ್ಲಿ ಪ್ರತಿ ತಿಂಗಳ ಕಾಂಗ್ರೆಸ್ ನಿಂದ ಗ್ರಾಮವಾಸ್ತವ್ಯ

ಚಿಂಚೋಳಿ: ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳ ಸಂಭ್ರಮಚಾರಣೆ ಪ್ರಯುಕ್ತ ಈ ವರ್ಷ ಪೂರ್ತಿ ಸಂಭ್ರಮಾಚರಣೆ ನಡೆಸಲು ಕಾಂಗ್ರೆಸ್ ಪಕ್ಷದಿಂದ ಚಿಂಚೋಳಿ ಕ್ಷೇತ್ರದಂತ್ಯ ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮೀಣ ಅಭೀವೃಧ್ಧಿ ಮತ್ತು ಸೇವೆ ಸಂಬಧಿಸಿದಂತೆ ಚಟುವಟಿಕೆ ಮಾಡುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಯ ಉಪಾಧ್ಯಕ್ಷ ಸುಭಾಷ್ ರಾಠೋಡ ಹೇಳಿದರು.

ಚಂದಾಪೂರ ಪಟ್ಟಣದ ಗಾಂಧಿ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆ ಬುಧವಾರ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ‘ಗಾಂಧಿ ಭಾರತ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮ ವಾಸ್ತವ್ಯ ಮಾಡಿ ಆರೋಗ್ಯ ಶಿಬಿರ , ಕಾನೂನು ಅರಿಯು ನೆರವು ಕಾರ್ಯಕ್ರಮ ದಿನ ದಲೀತರಿಗೆ ಸಂಬಧಿಸಿದಂತೆ ಇತರ ಕಾರ್ಯಕ್ರಮಗಳು ಮಾಡಲಾಗುವುದು.

ಮಹಾತ್ಮ ಗಾಂಧಿಜಿ ಅವರ ಕಾಲಿನ ಧೂಳಿನ ಸಮಾನ ಇಲ್ಲದವರು ಗಾಂಧಿಜಿ ಬಗ್ಗೆ ಟಿಕೆ ಮಾಡುತ್ತಾರೆ, ಬಿಜೆಪಿಯವರಿಗೆ ಗೋಡ್ಸೆ ನಾಯಕ. ಗೋಡ್ಸೆ ಭಾರತ ಮಾಡುವ ಬಿಜೆಪಿ ಷಡ್ಯಂತ್ರವನ್ನು ರೂಪಿಸಲು ಕೊಡಬಾರದು , ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರ ಮಾಡಲು ಅವಕಾಶಕೊಡಬಾರದು. ಗಾಂಧಿ ಭಾರತದ ಪ್ರಜ್ಞೆ ಗಾಂಧಿಯ ದೇಹ ಕೊಂದರೂ ವಿಚಾರಗಳನ್ನು ಕೊಲ್ಲಲು ಅಸಾಧ್ಯ. ಮಹಾತ್ಮ ಗಾಂಧೀಜಿ ದೇಶದ ಉದ್ದಗಲಕ್ಕೂ
ಅಂತ್ಯೋದಯ, ಸರ್ವೋದಯದ ಮೂಲಕ ಜನರ ಕಲ್ಯಾಣಕ್ಕಾಗಿ ಹೋರಾಡಿ, ನಮ್ಮ ರಾಷ್ಟ್ರೀಯ
ಭಾವೈಕ್ಯತೆ ಸಂಕೇತವಾಗಿದ್ದರು. ಅವರು ಕೇವಲ ರಾಷ್ಟ್ರನಿರ್ಮಾಪಕರಾಗಿರಲಿಲ್ಲ. ಶತಮಾನಗಳ
ಇತಿಹಾಸವುಳ್ಳ ನಮ್ಮ ದೇಶಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ.

ಪುರಸಭೆ ಅಧ್ಯಕ್ಷ ಅನಂದ ಟೈಗರ ಮಾತನಾಡಿ ಗಾಂಧಿ ವಿಚಾರಧಾರೆಗಳು ಒಂದು ಪಂಥಕ್ಕೆ, ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಅವರ ವಿಚಾರಧಾರೆಗಳಿಂದ ಪ್ರಪಂಚದ ಎಲ್ಲಾ ದೇಶಗಳಿಗೂ ಪ್ರಿಯರಾಗಿದ್ದರು. ಬದುಕಿನ ಪ್ರಯಾಣದಲ್ಲಿ ನಡೆಸಿದ ಗಾಂಧೀಜಿ ವಿಚಾರಧಾರೆ ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತದೆ. ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳಾಯಿತು. ತನ್ನಿಮಿತ್ಯ ಅದರ ನೆನಪಿಗಾಗಿ ಈ ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರು.

ಪಾದಯಾತ್ರೆ : ಮಹಾತ್ಮ ಗಾಂಧಿಜೀ ಅಧ್ಯಕ್ಷತೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬೆಳಗಾವಿ ಅದಿವೇಶನಕ್ಕೆ 100 ವರ್ಷಗಳ ಸಂಭ್ರಮಾಚರಣೆ ಗಾಂಧಿ ಭಾರತ ಕಾರ್ಯಕ್ರಮದ ಗಾಂಧಿ ನಡೆಗೆ ಪಾದಯಾತ್ರೆ ಕಾರ್ಯಕ್ರಮದ ಪ್ರಯುಕ್ರ ಪಟ್ಟಣದ ಡಾ ಬಿಆರ್ ಅಂಬೇಡ್ಕರ್ ವೃತದಿಂದ ಚಂದಾಪೂರದ ಗಾಂಧಿಜಿ ವೃತವರೆಗೆ ಸುಮಾರು 3 ಕೀ.ಮಿ ದೂರದ ಪಾದಯಾತ್ರೆ ಮಾಡಿದ ಗಮನಸೆಳೆದರು.

ಪುರಸಭೆ ಅಧ್ಯಕ್ಷ ಆನಂದ ಟೈಗರ್ ,ಚಿಂಚೋಳಿ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಸವರಾಜ ಮಾಲಿ , ಗುಂಡಪ್ಪ ಗೋಖಲೆ, ಮಾತನಾಡಿದರು.

ಪುರಸಭೆ ಉಪಾಧ್ಯಕ್ಷೆ ಸುಲ್ತಾನ ಖಲೀಲ ಪಟೇಲ,ದೇವದ್ರಪ್ಪ ಹೆಬಾಳ್,ಶರಣು ಪಾಟೀಲ ಮೋತಕಪಳ್ಳಿ, ದೇವಿಂದ್ರಪ್ಪ, ಮಹೆಮೂದ ಪಟೇಲ್ ಸಾಸರಗಾವ ,ಅನ್ವರ ಖತೀಬ್ ಸಂತೋಷ ಗುತ್ತೇದ್ದಾರ, ಲಕ್ಷ್ಮಣ ಆವುಂಟಿ, ನಾಗೇಶ ಗುಣಜಿ, ಶಬ್ಬೀರ ಮಿಯ್ಯ ಕೋಡ್ಲಿ, ಗಣಪತರಾವ, ಅಬ್ದುಲ ಹಫೀಜ್, ಪ್ರಭುಲಿಂಗ್ ಲೇವಡಿ,ರಾಮಶೆಟ್ಟಿ ಪವಾರ, ಮತೀನ ಸೌಧಗರ, ಮಂಜುನಾಥ ಲೇವಡಿ, ಶೇಕ್ ಫರೀದ್, ಇತರರು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago