ಅಂತರ್ ಜಿಲ್ಲಾ ಕುಖ್ಯಾತ ಮನೆಗಳ್ಳರ ಬಂಧನ: 14.70 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

0
113

ಶಹಾಬಾದ: ತಾಲೂಕಿನ ಮರತೂರ ಗ್ರಾಮದಲ್ಲಿನ ಅಬ್ದುಲ್ ರಜಾಕ್ ಬಾಗೋಡಿ ಅವರ ಮನೆಕಳ್ಳತನವಾಗಿರುವ ಬಗ್ಗೆ ದೂರಿನ್ವಯ ಜಾಡು ಹಿಡಿದ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಕುಖ್ಯಾತ ಮನೆಗಳ್ಳರನ್ನು ಬಂಧಿಸಿ 14.70 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಜೇವರ್ಗಿ ತಾಲ್ಲೂಕಿನ ಗಂವ್ಹಾರ್ ಗ್ರಾಮದ ರಫಿಕ್ ಅಬ್ದುಲ್ ಗನಿ ಇನಾಮದಾರ್ (33) ಮತ್ತು ಕಲಬುರಗಿಯ ಸ್ಟೇಷನ್ ರಸ್ತೆಯ ಯತಿಮಖಾನ್ ಕಂಪೌಂಡ್ ನಿವಾಸಿ ಮಹ್ಮದ್ ಮಾಜೀದ್ ಖಾಜಾ ಮೈನೋದ್ದೀನ್ ಪೆÇಲೀಸ್ ಪಾಟೀಲ್ (34) ಎಂಬುವವರನ್ನು ಬಂಧಿತ ಆರೋಪಿ. ಇವರಿಂದ 170 ಗ್ರಾಂ.ಬಂಗಾರದ ಆಭರಣ, 280 ಗ್ರಾಂ.ಬೆಳ್ಳಿ ಸಾಮಾನು, 1,05,000 ನಗದು, 45 ಸಾವಿರ ರೂ.ಮೌಲ್ಯದ ಬೈಕ್ ಸೇರಿ 14.70 ಲಕ್ಷ ರೂ.ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

Contact Your\'s Advertisement; 9902492681

ರಫಿಕ್ ಅಬ್ದುಲ್ ಗನಿ ಇನಾಮದಾರ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಶಹಾಬಾದ, ವಾಡಿ, ಚಿತ್ತಾಪುರ, ಕಾಳಗಿಯಲ್ಲಿ ನಡೆದ 11 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಬಂಧಿತ ಆರೀಪಿಗಳು

ಶಹಾಬಾದ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮರತೂರ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳರು 3.95 ಲಕ್ಷ ರೂ.ಮೌಲ್ಯದ ನಗ-ನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅಬ್ದುಲ್ ರಜಾಕ್ ಬಾಗೋಡಿ ಎಂಬುವವರು ಶಹಾಬಾದ ನಗರ ಪೆÇಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ದೂರಿನ ಅನ್ವಯ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ ಅವರ ನೇತೃತ್ವದಲ್ಲಿ ಪಿಎಸ್‍ಐ ತಿರುಮಲೇಶ, ಎಎಸ್‍ಐಗಳಾದ ಗುಂಡಪ್ಪ, ಲಾಲ್ ಅಹ್ಮದ್, ಮಲ್ಲಿಕಾರ್ಜುನ, ಉಪಳಪ್ಪಾ, ಸಿಬ್ಬಂದಿಗಳಾದ ರಮಣಯ್ಯ, ರವಿ, ಆರೀಫ್, ಶ್ರೀಕಾಂತ, ಲಕ್ಷ್ಮಣ, ಬಸವಲಿಂಗಪ್ಪ, ದೊಡ್ಡಪ್ಪ, ಪಾμÁ, ವೆಂಕಟೇಶ, ಭೀಮೇಶ್, ಮಂಜುನಾಥ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ತನಿಖೆ ನಡೆಸಿ ನಗರದ ವಾಡಿ ವೃತ್ತದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬೈಕ್ ಮೇಲೆ ಓಡಾಡುತ್ತಿದ್ದ ರಫಿಕ್ ಮತ್ತು ಮಹ್ಮದ್ ಮಾಜೀದ್ ಅವರನ್ನು ಬಂಧಿಸಿ ಚಿನ್ನಾಭರಣ, ನಗದು, ಬೈಕ್ ಸೇರಿ 14.70 ಲಕ್ಷ ರೂ.ಮೊತ್ತದ ಸ್ವತ್ತನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಅಂತರ್ ಜಿಲ್ಲಾ ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here