ಕಲಬುರಗಿ : ಶೈಕ್ಷಣಿಕ ಸುಧಾರಣಾ ಸಮಿತಿಯ ನೇತೃತ್ವವನ್ನು ಸಂಘ ಪರಿವಾರ ಹಿನ್ನೆಲೆಯ ಗುರುರಾಜ ಕರಜಗಿಯವರನ್ನು ನೇಮಕ ಮಾಡಿದ ಸರಕಾರದ ಕ್ರಮ ಖಂಡನೀಯ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಹೇಳಿದ್ದಾರೆ.
ಸರ್ಕಾರದ ಇಂತಹ ನಡೆ ನೋಡಿದಾಗ ಜನರಿಗೆ ಈಗ ಆಡಳಿತದಲ್ಲಿರುವುದು ಕಾಂಗ್ರೆಸ್ ಸರಕಾರವೋ ಅಥವಾ ಬಿಜೆಪಿ ಸರಕಾರವೋ ಎಂಬ ಅನುಮಾನ ಮೂಡುವಂತಿದೆ. ಶಿಕ್ಷಣದ ಸುಧಾರಣಾ ಸಮಿತಿಯಂತಹ ಮಹತ್ವದ ಹುದ್ದೆಗಳಿಗೆ ನೇಮಕ ಮಾಡುವಾಗ ಅವರ ಹಿನ್ನೆಲೆ ಅರಿಯುವಂತಹ ವ್ಯವಧಾನ ಸರಕಾರಕ್ಕೆ ಇಲ್ಲದಾಯಿತೇ? ಇಂತಹವರ ನೇಮಕಾತಿಗೆ ಶಿಫಾರಸು ಮಾಡುವವರು ಎಂಬ ಬಗ್ಗೆಯೂ ಜನರಿಗೆ ಸಂಶಯವಾಗುತ್ತಿದೆ ಎಂದಿದ್ದಾರೆ.
ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸುವುದು ಬಿಟ್ಟು ಹಾಳು ಮಾಡಲು ಅವಕಾಶ ಮಾಡಿಕೊಡುವ ಸರಕಾರದ ನಿರ್ಧಾರ ವನ್ನು ವೆಲ್ಪೇರ್ ಪಾರ್ಟಿ ತೀವ್ರವಾಗಿ ಖಂಡಿಸುತ್ತಿದೆ. ಸರಕಾರ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಕನ್ನಡ ನಾಡಿನಲ್ಲಿ ಆ ಹುದ್ದೆಗೆ ಅರ್ಹರಾದ ಹಲವಾರು ಮಂದಿಯಿದ್ದರೂ ಅತ್ತ ಗಮನ ಹರಿಸದೆ ಸಂಘಪರಿವಾರ ಹಿನ್ನೆಲೆಯ ವ್ಯಕ್ತಿಗಳನ್ನು ತಂದು ಕೂರಿಸುವ ಉದ್ದೇಶವಾದರೂ ಏನು? ಎಂದೂ ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…