ಕಲಬುರಗಿ : ರಾಜ್ಯದ ಕಾಂಗ್ರೆಸ್ ಸರಕಾರವು ಹಗರಣಗಳಲ್ಲಿ ಕ್ಲೀನ್ ಚಿಟ್ ಪಡೆಯಲು ಎಸ್‍ಐಟಿ, ಸಿಐಡಿಯನ್ನು ನೇಮಿಸುತ್ತದೆ ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಆರೋಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಇ.ಡಿ. ಬರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. ಸಿಬಿಐಗೆ ಹೋದಾಗ, ಅದರಲ್ಲಿ ಹಣಕಾಸು ಅವ್ಯವಹಾರ (ಮನಿ ಲಾಂಡರಿಂಗ್) ಇದೆ ಎಂದು ಗೊತ್ತಾದಾಗ ಇ.ಡಿ. ತನಿಖೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
187 ಕೋಟಿ ಅವ್ಯವಹಾರ ನಡೆದುದು ನಿಜ; ಆದರೆ, ಕೇವಲ 87 ಕೋಟಿ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಯವರು ಅವತ್ತೇ ಹೇಳಿದ್ದರು.
ಸತ್ಯ ಒಪ್ಪಿಕೊಂಡ ಮೇಲೆ ಕ್ರಮ ಆಗಿರಲಿಲ್ಲ. ಕದ್ದ ಮಾಲು ವಾಪಸ್ ಕೊಟ್ಟರೆ ಕೇಸ್ ಖುಲಾಸೆ ಆಗುತ್ತದೆಯೇ? ಇದರಲ್ಲಿ 20 ಕೋಟಿ ಹಣವನ್ನು ತುಕಾರಾಂ ಅವರ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ನಾಗೇಂದ್ರರ ವೈಯಕ್ತಿಕ ವೆಚ್ಚವಾಗಿ ಹಣ ಖರ್ಚಾದುದರ ಕುರಿತು ಇ.ಡಿ. ವರದಿಯಲ್ಲಿ ಉಲ್ಲೇಖವಿದೆ .ಈಗ ಸಿಎಂ ಏನು ಹೇಳುತ್ತಾರೆ , ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಇಷ್ಟೊತ್ತಿಗಾಗಲೇ ಅವರು ರಾಜೀನಾಮೆ ಕೊಡಬೇಕಿತ್ತು. ಮುಡಾ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ .
ಒಂದು ಕೋರ್ಟ್ 14 ಸೈಟ್ ಪಡೆದುದೇ ತಪ್ಪು ಎಂದಿದೆ. ಅಲ್ಲಿ ಜಮೀನೇ ಇಲ್ಲ; ನೀವು ಹೇಗೆ ಸೈಟ್ ಪಡೆದಿರಿ ಎಂದು ಇನ್ನೊಂದು ಕೋರ್ಟ್ ಹೇಳಿದೆ. ಶೇ 50- 50 ಅನುಪಾತದಲ್ಲಿ ಪಡೆಯಲು ಸಾಧ್ಯವಿಲ್ಲ; ಇದೆಲ್ಲವೂ ಬೋಗಸ್ ಎಂದಿದೆ. ಇಷ್ಟೆಲ್ಲ ಆಗಲು, ನಿಮ್ಮ ಹೆಸರಷ್ಟೇ ಸಾಕು. ನಿಮ್ಮ ಕುಟುಂಬಕ್ಕೆ ಪ್ರಭಾವ ಬಳಸಲು ನಿಮ್ಮ ಹುದ್ದೆಯೇ ಸಾಕು .ಈ ಎರಡೂ ಕೇಸ್‍ಗಳು ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ರುಜುವಾತು ಮಾಡುತ್ತವೆ ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು.
ಜಾರಿ ನಿರ್ದೇಶನಾಲಯವು (ಇ.ಡಿ) ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವರದಿ ಒಪ್ಪಿಸಿದೆ. ಈ ವರದಿಯಲ್ಲಿ ವಾಲ್ಮೀಕಿ ನಿಗಮದ ಹಣಕಾಸು ಹಗರಣದಲ್ಲಿ ಬಿ.ನಾಗೇಂದ್ರ ಮಾಸ್ಟರ್ ಮೈಂಡ್ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಯಾರೋ ಅಧಿಕಾರಿಗಳು ಇದನ್ನು ಮಾಡಿದ್ದಾರೆ; ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು ಎಂದು ನುಡಿದರು.
ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನೂ ಹೊಂದಿದ್ದು ಅವರಿಗೆ ಗೊತ್ತಿಲ್ಲದೇ ಇದೆಲ್ಲ ಆಗಲು ಸಾಧ್ಯವಿಲ್ಲ ಎಂದ ಅವರು, ಇ.ಡಿ.ವರದಿಯಲ್ಲಿ 24 ಜನರ ಹೆಸರುಗಳಿವೆ; ಸತ್ಯನಾರಾಯಣ ವರ್ಮ, ಸತ್ಯನಾರಾಯಣ, ಜೆಪಿ ಪದ್ಮನಾಭ, ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್, ವಿಜಯಕುಮಾರ್ ಗೌಡ ಮೊದಲಾದವರ ಹೆಸರುಗಳಿವೆ ಎಂದರು.
ಮುಖ್ಯಮಂತ್ರಿಗಳಿವೆ ಇವೆಲ್ಲವೂ ಗೊತ್ತಿದ್ದರೂ ಹಗರಣ ಮುಚ್ಚಿ ಹಾಕಲು ಎಸ್‍ಐಟಿಗೆ ಕೊಟ್ಟು ಅಲ್ಲಿ ನಾಗೇಂದ್ರರ ಹೆಸರು ಪ್ರಸ್ತಾಪ ಆಗದಂತೆ ನೋಡಿಕೊಂಡಿದ್ದರು ಎಂದು ಆರೋಪಿಸಿದರು.
ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ಬೀದಿಯಲ್ಲಿ ಇದ್ದಷ್ಟು ಜನರಿಗೆ ತೊಂದರೆ ಆಗಲಿದೆ. ಒಂದೇ ದಿನದಲ್ಲಿ ಇದನ್ನು ಬಗೆಹರಿಸಬೇಕಿತ್ತು. ಈ ಸರಕಾರ ನಡೆಸುವುದರಲ್ಲಿ ನಿಮಗೆ ಕಾಳಜಿ ಇಲ್ಲ ಎಂದು ಆಕ್ಷೇಪಿಸಿದರು. ಸಮಸ್ಯೆಯನ್ನು ಬೇಗ ಪರಿಹರಿಸಿ ಎಂದು ಒತ್ತಾಯಿಸಿದರು.
ಮೋದಿಜೀ ಅವರ ನಾಯಕತ್ವ ಈ ದೇಶಕ್ಕೆ ಮತ್ತೆ ಅವರೇ ಬೇಕೆಂದು ಜನರು ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಚುನಾವಣೆ ಮೂಲಕ ತೋರಿಸಿಕೊಟ್ಟಿದ್ದಾರೆ. ಇವೆರಡು ರಾಜ್ಯಗಳಲ್ಲಿ ಈಚೆಗಷ್ಟೇ ಚುನಾವಣೆ ನಡೆದಿದೆ. ಹರಿಯಾಣದ ಜಿಲೇಬಿ ಕಾಂಗ್ರೆಸ್ ತಟ್ಟೆಗೆ ಬೀಳಲಿದೆ ಎಂಬ ಆಶಾಭಾವದಲ್ಲಿದ್ದರು. ಆದರೆ, ಅಲ್ಲಿ ಸೋತದ್ದು ಮಾತ್ರವಲ್ಲದೆ ಅಧಿಕಾರ ಪಡೆಯುವ ನಿರೀಕ್ಷೆ ಇದ್ದ ಜಮ್ಮು- ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಆರು ಸೀಟಿಗೆ ಇಳಿದಿದೆ ಎಂದು ವಿಶ್ಲೇಷಿಸಿದರು. ಹೀಗೆ ಕಾಂಗ್ರೆಸ್ಸಿನ ಸ್ಥಿತಿ ಇವತ್ತು ಚಿಂತಾಜನಕವಾಗಿದೆ
ಜಮ್ಮು- ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 77 ವರ್ಷಗಳಿಂದ ವಂಚಿತವಾಗಿದ್ದ ಮೀಸಲಾತಿ ಲಭಿಸಿ ಅಲ್ಲಿ ನೆಮ್ಮದಿ ಲಭಿಸಿದೆ ಎಂದು ವಿವರಿಸಿದರು. ಅದಕ್ಕೆ ಮೋದಿ ಅವರಿಗೆ ಧನ್ಯವಾದ ಹೇಳಬೇಕು ಎಂದು ತೇಲ್ಕೂರ ತಿಳಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…