ಕೃಷಿ‌ ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಭೆ

0
311

ನವೀನ‌ ತಂತ್ರಜ್ಞಾನ ಬಳಸಿ ರೈತರ ಅದಾಯ ದ್ವಿಗುಣ ಮಾಡಲು ಬ್ಲೂ ಪ್ರಿಂಟ್ ತಯ್ಯಾರಿಸಲು ಸೂಚನೆ

ಕಲಬುರಗಿ: ಮಳೆಯಾಶ್ರಿತ ಕಲಬುರಗಿ ಜಿಲ್ಲೆಯಲ್ಲಿ ಅನ್ನದಾತನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಜಿಲ್ಲೆಯಲ್ಲಿ‌ ನವೀನ ತಂತ್ರಜ್ಞಾನ ಬಳಸಿ ರೈತರ ಆದಾಯ ದ್ವಿಗುಣಗೊಳಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ನೀಲಿ ನಕ್ಷೆ ತಯ್ಯಾರಿಸಿ ಸಲ್ಲಿಸುವಂತೆ ಕೃಷಿ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ
ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಕಲಬುರಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಯಾ ಇಲಾಖೆಗಳ ಹಿರಿಯ ಅಧಿಕಾರಿಗಳು ಜೊತೆಗೆ ಸಭೆ ನಡೆಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲೆಯಲ್ಲಿ ಜನೋಪಯೋಗಿ, ರೈತ ಉಪಯೋಗಿ ಯೋಜನೆಗಳು ಜಾರಿಗೆ ತರಬೇಕಿದ್ದು, ಇದಕ್ಕಾಗಿ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಮ್ಯಾಕ್ರೋ ಯೋಜನೆಯಡಿ ಅನುದಾನ ಒದಗಿಸಲಾಗುವುದು. ಕೃಷಿ ಸಂಬಂಧಿತ ವಿಚಾರಗಳಲ್ಲಿ ನವೀನ‌ ಕಲ್ಪನೆಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಓರ್ವ ತಜ್ಞರನ್ನು ಸಮಾಲೋಚಕರನ್ನಾಗಿ ನೇಮಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.

ವರ್ಷದಿಂದ‌ ವರ್ಷಕ್ಕೆ‌ ಜಿಲ್ಲೆಯಲ್ಲಿ ಜೋಳದ ಬಿತ್ತನೆ ಕಡಿಮೆಯಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ‌ ಸಮದ್ ಪಟೇಲ್ ಸಭೆಯ ಗಮನಕ್ಕೆ ತಂದಾಗ ಕಲಬುರಗಿ ರೊಟ್ಟಿಗೆ ಈಗಾಗಲೆ ಬ್ರ್ಯಾಂಡ್ ನೀಡಿದ್ದು, ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಬೇಕು. ಜೊತೆಗೆ ಜೋಳದಿಂದ ತಯ್ಯಾರಿಸಲಾಗುವ ಕಡುಬು, ಮುಟ್ಟಿಗೆ, ಅಳ್ಳಿಗೆ ಮಾರುಕಟ್ಟೆ ಕಲ್ಪಿಸುವ ಅಗತ್ಯತ್ಯೆ ಇದೆ‌ ಎಂದ ಅವರು ಕೃಷಿ ಇಲಾಖೆಗೆ ಈಗಾಗಲೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಮ್ಯಾಕ್ರೋ ನಿಧಿಯಡಿ 27 ಕೋಟಿ ರೂ. ಅನುದಾನ ನೀಡಿರುವುದರಿಂದ ಕ್ರಿಯಾ ಯೋಜನೆಯಂತೆ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.

ಬೆಳಗಾವಿಯ ಅಥಣಿಯ ಶೇಡಬಾಳದಲ್ಲಿ 1 ಎಕರೆ ಭೂಮಿಯಲ್ಲಿ 160 ಮೆಟ್ರಿಕ್ ಟನ್ ಕಬ್ಬು ಇಳುವರಿ ತೆಗೆದಿರುವ ಬಗ್ಗೆ ಕಂಪನಿಯೊಂದು ಸಂಶೋಧನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಚಿತ್ತಾಪುರನಲ್ಲಿ ಪ್ರಾಯೋಗಿಕವಾಗಿ ಕಬ್ಬು ಬಿತ್ತನೆಗೆ ಮತ್ತು ಮೆಕ್ಕಜೋಳದಿಂದ ಜೈವಿಕ ಇಂಧನ ಉತ್ಪಾದನೆ ನಿಟ್ಟಿನಲ್ಲಿ ಮೆಕ್ಕೆ‌ ಜೋಳ ಬಿತ್ತನೆಗೆ ಇಲಾಖೆಯಿಂದಲೆ ಕ್ಷೇತ್ರ ಸಿದ್ದಪಡಿಸುವಂತೆ ಮತ್ತು ತಜ್ಞರಿಗೆ ಅಗತ್ಯ ಸಹಕಾರ ನೀಡುವಂತೆ ಸಚಿವ‌ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಬೀಜ ಸಂಸ್ಕರಣ ಕೇಂದ್ರಕ್ಕೆ ಹೆಚ್ಚಿನ‌ ಅನುದಾನ ನೀಡಬೇಕೆಂಬ ಕೆ.ವಿ.ಕೆ.‌ ಮುಖ್ಯಸ್ಥ ರಾಜು ತೆಗ್ಗಳ್ಳಿ ಅವರ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಸಚಿವರು, ಕಲಬುರಗಿ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ ಕವರ್ಡ್ ಪ್ಲಾಟ್ ಫಾರಂ ಮೇಲೆ 3 ಕೋಟಿ ರೂ. ಮೊತ್ತದಲ್ಲಿ ಸೋಲಾರ್ ಮೈಕ್ರೋ ಗ್ರಿಡ್ ಹಾಗೂ ಜೇವರ್ಗಿ, ಚಿತ್ತಾಪೂರ, ಆಳಂದ, ಸೇಡಂ ಎ.ಪಿ.ಎಂ.ಸಿ.ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಡಿ.ಪಿ.ಆರ್. ತಯಾರಿಸಿ ಸಲ್ಲಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಎ.ಪಿ.ಎಂ.ಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೇವರ್ಗಿಯಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಡಿ.ಪಿ.ಆರ್ ಸಲ್ಲಿಸಿ: ತೋಟಗಾರಿಕೆ ಇಲಾಖೆ ಚರ್ಚೆ ಸಂದರ್ಭದಲ್ಲಿ ಒಣ ಮೆಣಸಿನಕಾಯಿ ಮಾರಾಟಕ್ಕೆ ದೂರದ ಹಾವೇರಿ, ಗುಂಟೂರಿನತ್ತ ಜಿಲ್ಲೆಯ ರೈತರು ಮುಖ ಮಾಡುವ ಪರಿಸ್ಥಿತಿ ಇದ್ದು, ಮೆನಸಿಣಕಾಯಿ ಶೇಖರಣೆಗೆ ಜೇವರ್ಗಿಯಲ್ಲಿ 3 ಸಾವಿರ ಮೆ.ಟನ್ ಮತ್ತು ಸಂಯೋಜಿತ ಬಹು ತರಕಾರಿ ಉತ್ಪನ್ನಗಳು, ಒಣದ್ರಾಕ್ಷಿ ಹಾಗೂ ಹಣ್ಣುಗಳ ಶೇಖರಣೆಗೆ ಚಿತ್ರಾಪುರ ಅಥವಾ ಅಫಜಲಪೂರದಲ್ಲಿಯೂ ಸಹ 3,000 ಮೆ.ಟನ್ ಸಾಮರ್ಥ್ಯದ ಶೀಥಲ ಘಟಕ ಸ್ಥಾಪನೆಗೆ ಕೂಡಲೆ ಡಿ.ಪಿ.ಆರ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.

ಕಲಬುರಗಿಯ ಐವಾನ್-ಎ-ಶಾಹಿ ಪ್ರದೇಶದಲ್ಲಿರುವ ತೋಟಗಾರಿಕೆ ಕಚೇರಿ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಕೆಡವಿ ಅಲ್ಲಿ ತಂತ್ರಜ್ಣಾನ ಅಧಾರಿತ ತರಬೇತಿ ಕೇಂದ್ರ ಅರಂಭಿಸಲು ಮತ್ತು ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಎಕ್ಸ್ ಲೆನ್ಸ್ ಸೆಂಟರ್ ಸ್ಥಾಪನೆಯ ಪ್ರಸ್ತಾಪಕ್ಕೆ ಸಚಿವರು ಒಪ್ಪಿಗೆ ಸೂಚಿಸಿ, ಈ ಬಗ್ಗೆ ಡಿ.ಪಿ.ಆರ್ ಸಲ್ಲಿಸುವಂತೆ ತಿಲಿಸಿದಲ್ಲದೆ ಕಲಬುರಗಿ ನಗರದಲ್ಲಿ ಐದು ಕಡೆ ಮತ್ತು ತಾಲೂಕಾ‌ ಕೇಂದ್ರಸ್ಥಾನದಲ್ಲಿ ಒಂದೆರಡು ಕಡೆ ಹಾಪಕಾಮ್ಸ್ ನಿಂದ ಜನನಿಬಿಡಿತ ಪ್ರದೇಶದಲ್ಲಿ ಕಿಯೋಸ್ಕ್ ಮಾದರಿಯಲ್ಲಿ ಹಣ್ಣು/ತರಕಾರಿ ಮಳಿಗೆ ಸ್ಥಾಪಿಸುವಂತೆ ಹಾಪಕಾಮ್ಸ್ ಎಂ.ಡಿ. ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ರೇಷ್ಮೆ ಗೂಡು ನಂತರ ಚಟುವಟಿಕೆಗೆ 2 ಸ್ವಯಂ ನೂಲು ಬಿಚ್ಚಣಿಕೆ ಘಟಕ ಮಂಜೂರಾಗಿದೆ. ಇದಲ್ಲದೆ ಎಂ.ಇ.ಆರ್.ಎಂ ಯಂತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆ ಅಂತಿಮಗೊಂಡಿದೆ‌ ಎಂದು ರೇಷ್ಮೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಕಲಬುರಗಿ ನಗರಕ್ಕೆ ಹೊಂದಿಕೊಂಡ ಜಾಫರಾಬಾದ ಬಳಿ‌ 4 ಎಕರೆ ಪ್ರದೇಶದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕೂಡಲೆ ಯಂತ್ರೋಪಕರಣಗಳ ಪೂರೈಕೆಗೆ ಕ್ರಮ‌ ವಹಿಸಬೇಕು. ನೂತನ ರೇಷ್ಮೆ‌ ಮಾರುಕಟ್ಟೆ ನಿರ್ಮಾಣಗೊಂಡಲ್ಲಿ ಸ್ಥಳೀಯವಾಗಿ 300 ಮೆ.ಟನ್ ರೇಷ್ಮೆ ಇಲ್ಲಿಯೇ ಮಾರಾಟ ಮಾಡಲು ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಇದೇ‌ ಸಂದರ್ಭದಲ್ಲಿ ಕೆಷಿ ಸಂಬಂದಿತ ಇಲಾಖೆಗಳ ಜಿಲ್ಲೆಯಿಂದ ಕೇಂದ್ರ ಕಚೇರಿಗೆ, ಸರ್ಕಾರಕ್ಕೆ‌ ಸಲ್ಲಿಕೆಯಾದ ಪ್ರಸ್ತಾವನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಕೂಡಲೆ‌ ಅವುಗಳ ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸಭೆಯಲ್ಲಿ ಭಾಗವಹಿಸಿದ‌ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ‌ ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಸಚಿವರ ಆಪ್ತ ಕಾರ್ಯದರ್ಶಿ ಭೀಮಾಶಂಕರ‌ ತೆಗ್ಗೆಳ್ಳಿ, ಕೃಷಿ ಇಲಾಖೆಯ ಅಪರ ನಿರ್ದೇಶಕ ಬಾಲರೆಡ್ಡಿ, ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿರ್ದೇಶಕ ನಜಿಬುಲ್ಲಾ ಖಾನ್, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಪರ್ವೇಜ್ ಬಂತನಾಳ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಧನರಾಜ ಮತ್ತು ಹೇಮಾ, ರೇಷ್ಮೆ‌ ಇಲಾಖೆಯ ಜಂಟಿ ನಿರ್ದೇಶಕ ಅಣ್ಣಾಜಿರಾವ್, ರೇಷ್ಮೆ ಯೋಜನಾ ಉಪನಿರ್ದೇಶಕಿ ವಿಜಯಲಕ್ಷ್ಮೀ, ಕೃಷಿ ಉಪನಿರ್ದೇಶಕರಾದ ಅನುಸುಯಾ, ಸೋಮಶೇಖರ‌ ಬಿರಾದಾರ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ರೇಷ್ಮೆ ಉಪನಿರ್ದೇಶಕ ಪ್ರಕಾಶ ಬಾಬು, ಎ.ಪಿ.ಎಂ.ಸಿ ಸಹಾಯಕ ನಿರ್ದೇಶಕಿ ಸವಿತಾ ನಾಯ್ಕ್ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಸಹ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here