ಸುರಪುರ:ತಾಲ್ಲೂಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ

0
46

ಸುರಪುರ: ಆಸ್ಪತ್ರೆಯಲ್ಲಿ ಯಾವುದೇ ಅವ್ಯವಸ್ಥೆ ಕಂಡುಬಂದಿಲ್ಲ ಆದರೆ ವೈದ್ಯರ ಕೊರತೆ ಎದ್ದು ಕಾಣುತ್ತಿದೆ.ಆದ್ದರಿಂದ ಸರಕಾರಕ್ಕೆ ವೈದ್ಯರ ಕೊರತೆಯ ಕುರಿತು ವರದಿಯನ್ನು ಸಲ್ಲಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ನಗರದ ತಾಲ್ಲೂಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ,ತಾಲ್ಲೂಕಿನಲ್ಲಿ 4.75 ಲಕ್ಷ ಜನಸಂಖ್ಯೆ ಇದೆ,ತಿಂಗಳಿಗೆ 15 ಸಾವಿರ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ.ಇದಕ್ಕೆ ಅಗತ್ಯವಿರುವ ವೈದ್ಯರು ಮುಖ್ಯವಾಗಿದೆ,ರೇಡಿಯಾಲಜಿಸ್ಟ್ ಅಗತ್ಯವಿದೆ ಎಂದರು. ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.ಮಹಿಳೆಯರು ತಮಗೆ ಏನೇ ತೊಂದರೆಯಾದಲ್ಲಿ ನನ್ನನ್ನಾಗಲಿ ಆಯೋಗವನ್ನಾಗಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.

Contact Your\'s Advertisement; 9902492681

ನನಗೆ ಯಾರಾದರು ದೂರು ನೀಡಿದಲ್ಲಿ ತಕ್ಷಣ ಎಸ್ಪಿಗೆ ಪತ್ರ ಬರೆಯುತ್ತೇವೆ,ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ತಿಳಿಸುತ್ತಾರೆ.ಮುಂದಿನ ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.ಮಹಿಳೆಯರ ಭದ್ರತೆ ನಮಗೆ ಮುಖ್ಯವಾಗಿದೆ.ಯಾವುದೇ ಮಹಿಳೆಯ ಭದ್ರತೆ ನಮಗೆ ಮುಖ್ಯವಾಗಿದೆ.ಯಾವುದೇ ಮಹಿಳೆಗೆ ಗಂಡನೆ ಮನೆಯಲ್ಲಿ ಕಿರಕುಳ ಇದ್ದಲ್ಲಿ ಅವರ ಜೊತೆ ಸಮಾಲೋಚನೆ ಮಾಡಿ ಪ್ರಕರಣ ದಾಖಲಾಗುವ ಮುನ್ನ ಅವರಲ್ಲಿ ಪರಸ್ಪರ ಹೊಂದಾಣಿಕೆ ಮೂಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಮೀಟೂ ಕುರಿತು ಮಾತನಾಡಿ,ಮೀಟೂ ಕುರಿತು ಯಾವುದೇ ದೂರು ಬಂದಲ್ಲಿ ಆಯೋಗ ತಕ್ಷಣ ಕ್ರಮವಹಿಸಲಿದೆ.ಯಾವುದೇ ಕಚೇರಿಯಲ್ಲಿ 10ಕ್ಕಿಂತ ಹೆಚ್ಚು ಜನ ಮಹಿಳೆಯರು ಕೆಲಸ ಮಾಡುತ್ತಿದ್ದರೆ,ಅಲ್ಲಿ ಮಹಿಳಾ ಸುರಕ್ಷತಾ ವಿಚಾರಣಾ ಕೇಂದ್ರ ಆರಂಭಿಸಲಾಗುತ್ತಿದೆ,ನಮಗೆ ಹೆಣ್ಣು ಮಕ್ಕಳ ಸುರಕ್ಷೆ ತುಂಬಾ ಮುಖ್ಯ ಎಂದರು.

ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭೀವೃಧ್ಧಿ ಇಲಾಖೆಯಿಂದ ಸನ್ಮಾನಿಸಿ ಸ್ವಾಗತಿಸಲಾಯಿತು.ನಂತರ ಆಸ್ಪತ್ರೆಯ ಎಲ್ಲಾ ರೋಗಿಗಳ ಭೇಟಿ ಮಾಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಕುರಿತು ವಿಚಾರಿಸಿದರು.ಈ ಸಂದರ್ಭದಲ್ಲಿ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾರವಸ್,ಡಿಹೆಚ್‍ಓ ಡಾ.ಎಮ್.ಎಸ್.ಪಾಟೀಲ್,ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ,ಸಿಡಿಪಿಒ ಅನಿಲಕುಮಾರ್ ಕಾಂಬ್ಳೆ,ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್,ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ,ನಗರಸಭೆ ಸದಸ್ಯೆ ಸುವರ್ಣಾ,ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

ಸಂಘ ಸಂಸ್ಥೆಗಳಿಂದ ಸನ್ಮಾನ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಗೆ ತಾಲ್ಲೂಕ ಆಸ್ಪತ್ರೆಗೆ ಭೇಟಿ ನೀಡಿದಾಗ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಮುಖಂಡರು ಸನ್ಮಾನಿಸಿದರು.ಅಲ್ಲದೆ ಆಲ್ದಾಳ ಗ್ರಾಮದಲ್ಲಿ 2.40 ಕೋಟಿ ರೂಪಾಯಿಗಳ ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದ್ದು,ತನಿಖೆ ಮಾಡಿಸಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.ಸಂಘಟನೆ ಜಿಲ್ಲಾ ಸಂ.ಸಂಚಾಲಕ ಮಾಳಪ್ಪ ಕಿರದಳ್ಳಿ,ತಾ.ಸಂಚಾಲಕ ಶರಣು ತಳವಾರಗೇರಾ ಇತರರಿದ್ದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೋ.ಬಿ.ಕೃಷ್ಣಪ್ಪ ಬಣ ದಿಂದ ಸನ್ಮಾನಿಸಿದರು.ಶ್ರೀನಿವಾಸ ನಾಯಕ ದೊರೆ,ಮಲ್ಲು ಮುಷ್ಠಳ್ಳಿ,ರಾಜು ಶಖಾಪುರ ಇತರರಿದ್ದರು.

ನಗರದ ಅಂಬೇಡ್ಕರ್ ನಗರದ ನಿವಾಸಿಯಾಗಿರುವ ಮಹಿಳೆ ಧನಲಕ್ಷ್ಮೀ ಶಾವಂತಗೇರಿ ಎನ್ನುವವರು ಮಹಿಳಾ ಆಯೋಗದ ಅಧ್ಯಕ್ಷರಿಗೆ ಭೇಟಿ ಮಾಡಿ ತನ್ನ ಗಂಡನ ಮನೆಯವರು ದೈಹಿಕ ಹಿಂಸೆ ಮಾಡಿ ತನ್ನಲ್ಲಿರುವ ಎಲ್ಲಾ ಚಿನ್ನದ ಆಭರಣ ಕಿತ್ತುಕೊಂಡು ಮನೆಯಿಂದ ಹೊರಹಾಕಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here